RCB vs MI: ಗಾಯದ ನಡುವೆ ಮಿಂಚಿದ ಕೃನಾಲ್ ಪಾಂಡ್ಯ; ಆರ್‌ಸಿಬಿಗೆ ರಣ ರೋಚಕ ಜಯ, ಅಗ್ರಸ್ಥಾನಕ್ಕೆ ಬಡ್ತಿ
ಚೆನ್ನೈ: ಕೊನೆಯ ಹಂತದ ವರೆಗೂ ರೋಚಕತೆ ಹುಟ್ಟಿಸಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 19ನೇ ಆವೃತ್ತಿಯ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಭರ್ಜರಿ ಜಯ ದಾಖಲಿಸಿದೆ. ಮುಂಬೈ ತಂಡವನ್ನು 2 ವಿಕೆಟ್‌ಗಳಿಂದ ಮಣಿಸಿದ ಆರ್‌ಸಿಬಿ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ.
167 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಸೊನ್ನೆ ಸುತ್ತಿದರು. ಕರ್ನಾಟಕದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ 12 ರನ್ ಬಾರಿಸಿ ದೀಪಕ್ ಚಹಾರ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ರಜತ್ ಪಾಟಿದಾರ್ (8) ಸಹ ಪವರ್ ಪ್ಲೇನಲ್ಲಿ ಔಟ್ ಆಗಿ ತಂಡವನ್ನು ಒತ್ತಡಕ್ಕೆ ನೂಕಿದರು.

3 ವಿಕೆಟ್‌ಗೆ 39 ರನ್ ಇದ್ದಾಗ ಆರಂಭಿಕ ಜಾಕೋಬ್ ಬೆಥೆಲ್ ಹಾಗೂ ಕೃನಾಲ್ ಪಾಂಡ್ಯ ಜೋಡಿ ಮಧ್ಯದ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡು ಬ್ಯಾಟ್ ಮಾಡಿತು. ಈ ಜೊಡಿ 42 ಎಸೆತಗಳಲ್ಲಿ 55 ರನ್ ಸೇರಿಸಿತು. ಆರಂಭಿಕ ಬೆಥೆಲ್ 2 ಬೌಂಡರಿ ಸಹಾಯದಿಂದ 26 ರನ್ ಬಾರಿಸಿ ಔಟ್ ಆದರು.
5ನೇ ವಿಕೆಟ್‌ಗೆ ಕೃನಾಲ್ ಪಾಂಡ್ಯ ಹಾಗೂ ಜಿತೇಶ್ ಶರ್ಮಾ ಜೋಡಿ ಸಹ 22 ಎಸೆತಗಳಲ್ಲಿ 37 ರನ್ ಸೇರಿಸಿತು. ಈ ಹಂತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ 18 ರನ್ ಬಾರಿಸಿದ್ದಾಗ ವಿಕೆಟ್ ಒಪ್ಪಿಸಿದರು.
ಕೃನಾಲ್ ಅರ್ಧಶತಕದ ಸೊಬಗು
ಸ್ಟಾರ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅಮೋಘ ಬ್ಯಾಟಿಂಗ್ ನಡೆಸಿದರು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಬ್ಯಾಟ್ ಮಾಡಿದ ಕೃನಾಲ್ ಪಾಂಡ್ಯ, ಆರಂಭದಲ್ಲಿ ಪಿಚ್ ಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಿದರು. ಇವರು ಆರ್‌ಸಿಬಿ ತಂಡದ ಗೆಲುವಿನ ಆಸೆಯನ್ನು ಚಿಗುರಿಸಿದರು. ಇವರು 46 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಾಯದಿಂದ 73 ರನ್ ಬಾರಿಸಿ ಮಿಂಚಿದರು. ಸ್ನಾಯು ಸೆಳೆತದ ಕಾಟದ ನಡುವೆ ಕೃನಾಲ್ ಭರ್ಜರಿ ಬ್ಯಾಟಿಂಗ್ ನಡೆಸಿದರು.

ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಬೌಲಿಂಗ್ ಮಾಡಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಅವರ ಸ್ವಿಂಗ್ ಬೌಲಿಂಗ್ ಅರಿಯುವಲ್ಲಿ ವಿಫಲರಾದರು. ಭುವನೇಶ್ವರ್ ಕುಮಾರ್ ಪವರ್ ಪ್ಲೇನಲ್ಲಿ ಪವರ್ ಫುಲ್ ಬೌಲಿಂಗ್ ನಡೆಸಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್‌ಗಳಿಗೆ ಕಾಡಿದರು. ಆರಂಭಿಕರಾದ ರಯಾನ್ ರಿಕಲ್ಟನ್ (2), ರೋಹಿತ್ ಶರ್ಮಾ (22) ಇವರಿಗೆ ಖೆಡ್ಡಾ ತೋಡಿದ ಭುವಿ ಅಬ್ಬರಿಸಿದರು.
ತಿಲಕ್ ವರ್ಮಾ ಜವಾಬ್ದಾರಿಯುತ ಆಟ
ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ಅವರ ರನ್ ದಾಹಕ್ಕೆ ಮೊದಲ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಬ್ರೇಕ್ ಹಾಕಿದರು. ಮಧ್ಯದ ಓವರ್‌ಗಳಲ್ಲಿ ನಮನ್ ಧೀರ್ ಹಾಗೂ ತಿಲಕ್ ವರ್ಮಾ ವಿಕೆಟ್ ಬೀಳದಂತೆ ನೋಡಿಕೊಂಡು ರನ್ ವೇಗಕ್ಕೆ ಚುರುಕು ಮುಟ್ಟಿಸಲು ಶ್ರಮಿಸಿತು. ಈ ಜೋಡಿ 57 ಎಸೆತಗಳಲ್ಲಿ 82 ರನ್ ಸೇರಿಸಿತು. ನಮನ್ ಧೀರ್ 47 ರನ್ ಬಾರಿಸಿ ಔಟ್ ಆದರು. ತಿಲಕ್ ವರ್ಮಾ 42 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 57 ರನ್ ಸಿಡಿಸಿದರು. ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 166 ರನ್ ಸೇರಿಸಿತು.
ರಾಯಲ್ ಚಾಲೆಂಜರ್ಸ್ ಪರ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ 4 ಓವರ್ ಬೌಲ್ ಮಾಡಿ 12 ಡಾಟ್ ಬೌಲ್ ಎಸೆದು 23 ರನ್ ನೀಡಿ 4 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

