MI vs RCB : ಆರ್‌ಸಿಬಿ ವಿರುದ್ಧ ಪಂದ್ಯಕ್ಕೆ ಅರ್ಜುನ್ ತೆಂಡೂಲ್ಕರ್?: ಭಾರೀ ಬೇಡಿಕೆಯಿಟ್ಟ ಫ್ಯಾನ್ಸ್


ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿ ಆರಂಭದಲ್ಲೇ ಹಳಿ ತಪ್ಪಿದಂತಿದೆ. ಆಡಿದ ಮೂರು ಪಂದ್ಯಗಳಲ್ಲಿ ಮುಗ್ಗರಿಸಿರುವ ರೋಹಿತ್ ಪಡೆ ಅದೇ ಹಳೆಯ ಆರಂಭ ಎಂಬಂತೆ ಆರಂಭಿಕ ಪಂದ್ಯಗಳನ್ನ ಸೋತಿದೆ.
ಮುಂಬೈ ಸೀಸನ್ ಆರಂಭದಲ್ಲಿ ಪಂದ್ಯಗಳನ್ನ ಸೋತಿದ್ದು ಇದೇನು ಹೊಸತೇನಲ್ಲ. ಈ ಮೊದಲು ಮುಂಬೈ ಇಂಡಿಯನ್ಸ್ ಆರಂಭಿಕ ಪಂದ್ಯಗಳಲ್ಲಿ ಐದು ಸೀಸನ್‌ಗಳಲ್ಲಿ ಸೋಲನ್ನ ಕಂಡಿದ್ದನ್ನ ಕಾಣಬಹುದು.
ಮುಂಬೈ ತಂಡ ಹಿಂದಿನ ಋತುಗಳಲ್ಲಿ ಗುಣಮಟ್ಟದ ಆರಂಭ ನೀಡಿತ್ತು. ಆದರೆ ಸದ್ಯಕ್ಕೆ ಅದು ಕಷ್ಟ. ಏಕೆಂದರೆ ಟ್ರೆಂಟ್ ಬೋಲ್ಟ್ ಜಸ್ಪ್ರೀತ್ ಬುಮ್ರಾ ಜೊತೆಗಿದ್ದರು. ಮುಂಬೈ ತಂಡ ಜೋಫ್ರಾ ಆರ್ಚರ್ ಅವರನ್ನು ಖರೀದಿಸಿದ್ರೂ ಸಹ ಇಡೀ ಸೀಸನ್‌ಗೆ ಅವರು ಲಭ್ಯವಿಲ್ಲ.
ಇದ್ರ ನಡುವೆ ಕಳೆದ ಕೋಲ್ಕತ್ತಾ ಪಂದ್ಯದಲ್ಲಿ ಡೇನಿಯಲ್ ಸಾಮ್ಸ್ ಎಸೆದ ಏಕೈಕ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ 35 ರನ್ ಗಳಿಸಿದರು. ಹೀಗಾಗಿ ಗೆಲುವಿನ ಸನಿಹಕ್ಕೆ ಬಂದಿದ್ದ ಮುಂಬೈ ತಂಡ ತೀವ್ರ ನಿರಾಸೆಯೊಂದಿಗೆ ಮರಳಿತು. ನಾಯಕ ರೋಹಿತ್ ಶರ್ಮಾ ಕೂಡ ಸಿಟ್ಟಿನಿಂದಲೇ ಕಾಣಿಸಿಕೊಂಡರು.
ಈ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಮುಂದಿನ ಪಂದ್ಯಕ್ಕೆ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಅಂದರೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಅವಕಾಶ ನೀಡುವ ಸಾಧ್ಯತೆಯಿದೆ. ಡೇನಿಯಲ್ ಸ್ಯಾಮ್ಸ್ ಅವರಂತೆ ಅರ್ಜುನ್ ತೆಂಡೂಲ್ಕರ್ ಎಡಗೈ ಆಲ್ ರೌಂಡರ್. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸರಿಯಾದ ಅನುಭವದ ಕೊರತೆಯಿಂದಾಗಿ ಅವರಿಗೆ ಇನ್ನೂ ಅವಕಾಶ ಸಿಕ್ಕಿಲ್ಲ.
ಈ ಕುರಿತು ಅರ್ಜುನ್ ತೆಂಡೂಲ್ಕರ್ ಜೊತೆ ಮಾತನಾಡಿರುವ ರೋಹಿತ್ ಶರ್ಮಾ, ನಿಮ್ಮ ಮೇಲೆ ಭರವಸೆ ಇಡಲು ಅವಕಾಶ ನೀಡುವುದಾಗಿ ಹಾಗೂ ಸಿಕ್ಕ ಅವಕಾಶಗಳಲ್ಲಿ ಸಾಮರ್ಥ್ಯ ಸಾಬೀತುಪಡಿಸಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಸಚಿನ್ ಪುತ್ರ ಎಂಬ ಟೀಕೆಗೆ ರೋಹಿತ್ ಈ ರೀತಿ ಹೇಳಿದ್ದಾರೆ ಎಂಬ ವರದಿಯೂ ಬಂದಿದೆ.
ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ನಾಳೆ ರಾತ್ರಿ ಪುಣೆ ಸ್ಟೇಡಿಯಂನಲ್ಲಿ ಪಂದ್ಯ ಆರಂಭವಾಗಲಿದೆ. ಮುಂಬೈ ತಂಡ ಇದೇ ಮೈದಾನದಲ್ಲಿ 2 ಬಾರಿ ಸೋಲು ಕಂಡಿದ್ದು, ಇದೀಗ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications