Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FREE ಹಿಟ್‌ನಲ್ಲೂ ಔಟಾದ ಆರ್‌ಸಿಬಿ ಪ್ಲೇಯರ್ ಮೋಯಿನ್ ಅಲಿ

Moeen ali out

ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್ನಲ್ಲಿ ಎಡವಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿರಾಟ್‌ ಕೊಹ್ಲಿ ಓಪನಿಂಗ್‌ ಬಂದು ಕೇವಲ ಆರು ರನ್‌ಗೆ ಇನ್ನಿಂಗ್ಸ್‌ ಮುಗಿಸಿದ್ರು.

ಟೂರ್ನಿಯಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ರನ್‌ ಕಲೆಹಾಕಿರುವ ದೇವದತ್ ಪಡಿಕ್ಕಲ್ ಕೂಡ ಬಹುಮುಖ್ಯವಾದ ಪಂದ್ಯದಲ್ಲಿ ತಂಡಕ್ಕೆ ಆಧಾರವಾಗ್ಲಿಲ್ಲ. ಆ್ಯರೋನ್ ಫಿಂಚ್ ಆಟವು 32 ರನ್‌ಗಳಿಗೆ ಮುಕ್ತಾಯವಾಯಿತು.

ಫಿಂಚ್ ಔಟಾದ ಬಳಿಕ ಕಣಕ್ಕಿಳಿದ ಮೋಯಿನ್ ಅಲಿ ಇನ್ನೇನು ರನ್‌ಗಳಿಸಬಹುದು ಅನ್ನೋದನ್ನು ಯೋಚಿಸುವ ಮೊದಲೇ ವಿಕೆಟ್ ಒಪ್ಪಿಸಿದ್ರು. ಬಹುಶಃ ಆರ್‌ಸಿಬಿ ಬ್ಯಾಟಿಂಗ್ ಎಷ್ಟರ ಮಟ್ಟಿಗೆ ಕೈ ಕೊಟ್ಟಿತ್ತು ಎಂದ್ರೆ ಶಬಾಜ್ ನದೀಮ್ ಓವರ್‌ನಲ್ಲಿ ಫ್ರೀ ಹಿಟ್‌ನಲ್ಲಿ ಮೋಹಿನ್ ಅಲಿ ರನ್‌ಔಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ರು. ಸಿಂಗಲ್ಸ್ ಕದಿಯಲು ಹೋಗಿ ರಶೀದ್ ಖಾನ್ ಚುರುಕು ಫೀಲ್ಡಿಂಗ್‌ಗೆ ಬಲಿಯಾದ್ರು.

ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಪರ ಆಟಗಾರನೊಬ್ಬ ಫ್ರೀ ಹಿಟ್‌ನಲ್ಲಿ ಔಟಾಗಿದ್ದು ಇದೇ ಮೊದಲು. ಈ ರೀತಿ ಮೋಯಿನ್ ಅಲಿ ಔಟಾಗಿದ್ದು, ಆರ್‌ಸಿಬಿ ಅಭಿಮಾನಿಗಳನ್ನು ಮತ್ತಷ್ಟು ನಿರಾಸೆಗೊಳಿಸಿತು.

Story first published: Friday, November 6, 2020, 22:20 [IST]
Other articles published on Nov 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+