ಕಪ್ ಗೆಲ್ಲದಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಗೆದ್ದ RCB!

ಬೆಂಗಳೂರು, ಮೇ 07: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಈ ಸಲಾ ಕಪ್ ಗೆಲ್ಲುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ವಿಫಲಗೊಂಡರೂ, ಸೋಷಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಐಪಿಎಲ್ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಾಯಲ್ ಚಾಲೆಂಜರ್ಸ್, ಈ ಬಾರಿ ಉಳಿದೆಲ್ಲಾ ತಂಡಗಳಿಗಿಂತಲೂ ಅತಿ ಹೆಚ್ಚುಬಾರಿ ತನ್ನ ಹೆಸನ್ನು ನಮೂದಿಸಿಕೊಂಡ ತಂಡವಾಗಿದೆ.
ವರದಿಗಳ ಪ್ರಕಾರ ಅಭಿಮಾನಿಗಳಿಂದ ಹೆಚ್ಚು ಬಾರಿ ಹೆಸರು ನಮೂದಿಸಿಕೊಂಡ ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಅಗ್ರಸ್ಥಾನದಲ್ಲಿದ್ದರೆ, ಕೋಲ್ಕೊತಾ ನೈಟ್ ರೈಡರ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಇನ್ನು ಈ ಪಟ್ಟಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೊನೆಯ ಸ್ಥಾನ ಪಡೆದಿದೆ.
2019ರ ಐಪಿಎಲ್ ವೇಳೆ ವಿವಿಧ ಫ್ರಾಂಚೈಸಿ ತಂಡಗಳು ಹೆಸರುಗಳನ್ನು ಕ್ರಿಕೆಟ್ ಪ್ರಿಯರು ಬಳಸಿಕೊಂಡಿರುವ ಒಟ್ಟು ಶೇಖಡಾವಾರು ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಸಿಂಹಪಾಲನ್ನು (ಶೇ. 20 ರಷ್ಟು) ಹೊಂದಿದ್ದು, ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕ್ರಮವಾಗಿ ಶೇ. 18 ಮತ್ತು ಶೇ.17ರಷ್ಟು ಸರಾಸರಿ ಹೊಂದಿವೆ.
ಇನ್ನು ಪ್ರತಿ ಬಾರಿ ತಂಡದ ಹೆಸರನ್ನು ನಮೂದಿಸುವಾಗ ಆಯಾ ತಂಡಗಳ ಕ್ಯಾಪ್ಟನ್ ಹೆಸರನ್ನೂ ಸೇರಿಸಲಾಗಿದೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಚಾರದಲ್ಲಿ ಇದು ವಿಭಿನ್ನವಾಗಿದ್ದು ನಾಯಕ ಶ್ರೇಯಸ್ ಅಯ್ಯರ್ ಅವರಿಗಿಂತಲೂ ಸ್ಟಾರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಹೆಸರನ್ನು ತಂಡದ ಜೊತೆಗೆ ಹೆಚ್ಚು ಬಳಕೆ ಮಾಡಲಾಗಿದೆ.
ಸನ್‌ರೈಸರ್ಸ್ ವಿರುದ್ಧ ಗೆದ್ದು ಐಪಿಎಲ್ ಇತಿಹಾಸದಲ್ಲಿ 100 ಪಂದ್ಯಗಳನ್ನು ಗೆದ್ದ ಮಹತ್ವದ ಮೈಲುಗಲ್ಲು ಮುಟ್ಟಿದ ಕೆಕೆಆರ್ ತಂಡ, ಐಪಿಎಲ್‌ನಲ್ಲಿ200 ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಧೋನಿ ಹಾಗೂ ಸಚಿನ್ ತೆಂಡೂಲ್ಕರ್ ಅವರ ಹಿತಾಸಕ್ತಿ ಸಂಘರ್ಷದ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿಈಬಾರಿಯ ಐಪಿಎಲ್ ವೇಳೆ ಹಾಟ್ ಫೇವರಿಟ್ ವಿಷಯಗಳಾಗಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications