RCB vs PBKS IPL 2025: ಪಂಜಾಬ್ ವಿರುದ್ಧ ಮಿಂಚಿದ್ದು ವಿರಾಟ್, ಆದ್ರೆ ರಿಯಲ್ ಹೀರೋ ಇವರೇ...
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮನೆಯಾಚೆ ಅಮೋಘ ಪ್ರದರ್ಶನ ಮುಂದುವರೆಸಿದೆ. ಪಂಜಾಬ್ ತಂಡವನ್ನು ಅವರದ್ದೇ ತವರಿನಲ್ಲಿ ಮಣಿಸುವ ಮೂಲಕ ಪ್ರಸಕ್ತ ಐಪಿಎಲ್‌ನಲ್ಲಿ ಐದನೇ ಗೆಲುವು ದಾಖಲಿಸಿ ಪ್ಲೇ ಆಫ್‌ಗೆ ಹತ್ತಿರವಾಗುವ ಕನಸು ಕಾಣುತ್ತಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸಂಘಟಿತ ಆಟ ಎದ್ದು ಕಂಡಿತು. ಈ ಮೂಲಕ ಆರ್‌ಸಿಬಿ ಎದುರಾಳಿಗಳಿಗೆ ಪಂಜಾಬ್‌ನ ಅಂಗಳದಿಂದ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದಾರೆ.
ಆರ್‌ಸಿಬಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗೆಲುವು ದಾಖಲಿಸಿರುವಲ್ಲಿ ಬ್ಯಾಟರ್‌ಗಳು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈ ಪಂದ್ಯದಲ್ಲಿ ಫಿಲ್ ಸಾಲ್ಟ್ ಬೇಗನೆ ವಿಕೆಟ್ ಒಪ್ಪಿಸಿದರೂ ಧೃತಿ ಗೆಡದ ಆರ್‌ಸಿಬಿ ಬ್ಯಾಟರ್ಸ್ ಕೆಚ್ಚೆದಯ ಬ್ಯಾಟಿಂಗ್ ನಡೆಸಿ, ಏಳು ವಿಕೆಟ್ ಜಯ ಸಾಧಿಸಿದೆ. ಈ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅರ್ಧಶತಕ ಬಾರಿಸಿ ಮಿಂಚಿದರು. ಆದರೆ ತನ್ನಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ತೆರೆಯ ಹಿಂದೆ ಹೀರೋ ಆಗಿ ಮಿಂಚಿದವರು ಆರ್‌ಸಿಬಿ ಬೌಲರ್ಸ್.

ಖಂಡಿತವಾಗಿಯೂ ಆರ್‌ಸಿಬಿ ಬೌಲಿಂಗ್ ಲೈನ್‌ಅಪ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದೆ. ಈ ಮೂಲಕ ಪಂಜಾಬ್ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕಟ್ಟಿಹಾಕುವಲ್ಲೆ ಸಫಲವಾಗಿದೆ. ಆರಂಭದಲ್ಲಿ ವೇಗದ ಬೌಲರ್‌ಗಳು ಕೊಂಚ ರನ್‌ಗಳನ್ನು ಸುಲಭವಾಗಿ ನೀಡಿದರೂ ಸಹ ಸ್ಪಿನ್ ಬೌಲರ್‌ಗಳು ರನ್‌ಗಳನ್ನು ನೀಡದೆ ಎದುರಾಳಿ ಬ್ಯಾಟರ್ಸ್‌ಗಳನ್ನು ಸತಾಯಿಸಿದ್ದಾರೆ. ಈ ಮೂಲಕ ಪಂಜಾಬ್ 157 ರನ್‌ಗಳನ್ನು ಕಲೆ ಹಾಕಲು ಪ್ರಮುಖ ಕಾರಣರಾದರು.
ಇವರೇ ರಿಯಲ್ ಹಿರೋ
ಆರ್‌ಸಿಬಿ ಮೊದಲ ವಿಕೆಟ್‌ನ ಹುಡುಕಾಟದಲ್ಲಿದ್ದಾಗ ಆರಂಭಿಕ ಜೋಡಿಯನ್ನು ಬೇರ್ಪಿಡಿಸಿದ ಹೆಗ್ಗಳಿಕೆ ಕೃನಾಲ್ ಪಾಂಡ್ಯ ಅವರಿಗೆ ಸಲ್ಲುತ್ತದೆ. ಕೃನಾಲ್ ಪಾಂಡ್ಯ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡಿದರು. ಕೃನಾಲ್ 4 ಓವರ್‌ಗಳಲ್ಲಿ 6.25 ಎಕಾನಮಿಯಲ್ಲಿ ಬ್ಯಾಟ್ ಮಾಡಿದರು. ಇವರು 25 ರನ್ ನೀಡಿ 2 ಅಮೂಲ್ಯ ವಿಕೆಟ್ ಪಡೆದರು. ಇವರು ಆರಂಭಿಕರಾದ ಪ್ರಭಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ ಅವರಿಗೆ ಪೆವಿಲಿಯನ್‌ಗೆ ಅಟ್ಟುವಲ್ಲಿ ಸಫಲರಾದರು.

ಕೃನಾಲ್ ಪಾಂಡ್ಯ ಪ್ರಸಕ್ತ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದು ಆಡಿದ 8 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ್ದು ಅಬ್ಬರಿಸುತ್ತಿದ್ದಾರೆ. ಇವರು ತವರಿನಾಚೆಯ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದು ಗೆಲುವಿನಲ್ಲಿ ಮಿಂಚುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications