ಆರ್‌ಸಿಬಿ ತೆರೆಮರೆಯ ಚಾಣಕ್ಯರು: ಇವರೇ ನೋಡಿ ಕಿಂಗ್ ಮೇಕರ್ಸ್
19ನೇ ಆವೃತ್ತಿಯ ಫೈನಲ್‌ನಲ್ಲಿ ಆರ್‌ಸಿಬಿ ಸ್ಥಿರ ಪ್ರದರ್ಶನವನ್ನು ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಲೀಗ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸೊಗಸಾದ ಪ್ರದರ್ಶನ ನೀಡಿದ ರಜತ್ ಪಾಟಿದಾರ್ ಪಡೆ ತಮ್ಮ ಟ್ರೋಫಿಯನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಶ್ರಮಿಸಿದೆ. ಆರ್‌ಸಿಬಿ ತಂಡ ಈ ಬಾರಿ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು. ಈ ವೇಳೆ ಆಟಗಾರರ ಸಾಧನೆಯನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಆದರೆ ಯಾರಿಗೂ ಕಾಣದಂತೆ ತಂತ್ರವನ್ನು ಹೆಣೆದು ತಂಡವನ್ನು ಯಶಸ್ಸಿನ ಹಾದಿಯಲ್ಲಿ ತಂದು ನಿಲ್ಲಿಸಿದ ಈ ಐದು ಹೀರೋಗಳ ಬಗ್ಗೆ ಮಾಹಿತಿ ಇಲ್ಲಿದೆ.
ಆರ್‌ಸಿಬಿ ನಿಶ್ಚಿತವಾಗಿ ಚಾಂಪಿಯನ್ ಪ್ರದರ್ಶನ ನೀಡಿದೆ. ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ 700ಕ್ಕೂ ಹೆಚ್ಚಿನ ರನ್ ಮಾಡಿದರೆ, ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಬಿಗುವಿನ ದಾಳಿ ನಡೆಸಿ ವಿಕೆಟ್ ಬೇಟೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆರ್‌ಸಿಬಿ ತಂಡದ ತೆರೆಯ ಹಿಂದಿನ ಹೀರೋಗಳ ಬೆವರಿನ ಹನಿಗಳ ಬಗ್ಗೆ ವರದಿ ಇಲ್ಲಿದೆ.

ಕಳೆದ ವರ್ಷ ಆರ್‌ಸಿಬಿ ತನ್ನ ಮೊದಲ ಐಪಿಎಲ್ ಟ್ರೋಫಿ ಗೆದ್ದ ತಕ್ಷಣವೇ ಮುಂದಿನ ಸಿದ್ಧತೆಗಳು ಆರಂಭವಾಗಿದ್ದವು ಎಂದು ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ತಿಳಿಸಿದ್ದಾರೆ.ಒಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದ ಬಳಿಕ, ತಂಡದಲ್ಲಿ ಒಂದು ರೀತಿಯ ಆತ್ಮಸ್ಥೈರ್ಯ ಹೆಚ್ಚಿದೆ. ಆದರೆ ಮತ್ತೊಮ್ಮೆ ಆ ಯಶಸ್ಸನ್ನು ಅನುಭವಿಸಬೇಕೆಂಬ ಹಸಿವು ನಮ್ಮಲ್ಲಿದೆ ಎಂದು ತಿಳಿಸಿದ್ದರು.
ಆಂಡಿ ಫ್ಲವರ್
ಆರ್‌ಸಿಬಿ ತಂಡದ ಈ ಯಶಸ್ವಿ ಪಯಣದ ಹಿಂದೆ ಬಲಿಷ್ಠ ಸಪೋರ್ಟ್ ಸ್ಟಾಫ್ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಮುಖ್ಯ ತರಬೇತುದಾರ ಆಂಡಿ ಫ್ಲವರ್ ತಮ್ಮ ಶಾಂತ ಮತ್ತು ಸ್ಥಿರ ನಾಯಕತ್ವದ ಮೂಲಕ ತಂಡಕ್ಕೆ ಸರಿಯಾದ ದಿಕ್ಕು ತೋರಿಸಿದ್ದಾರೆ.
ದಿನೇಶ್ ಕಾರ್ತಿಕ್
ಆರ್‌ಸಿಬಿ ತಂಡದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ರಣನೀತಿಯನ್ನು ಹೆಣೆಯುವಲ್ಲಿ ಹೆಸರುವಾಸಿ. ಯುವ ಆಟಗಾರರು ಒತ್ತಡದ ಸನ್ನಿವೇಶದಲ್ಲಿ ಹೇಗೆ ನಿಭಾಯಿಸಬೇಕು ಎಂಬುದನ್ನು ಹೇಳಿಕೊಡುತ್ತಿದ್ದಾರೆ.
ಸಹಾಯಕ ಸಿಬ್ಬಂದಿ
ಬೌಲಿಂಗ್ ತರಬೇತುದಾರ ಓಂಕಾರ್ ಸಾಳ್ವಿ ತಂಡದ ಬೌಲಿಂಗ್ ವಿಭಾಗ ಶಿಸ್ತುಬದ್ಧ ಪ್ರದರ್ಶನ ನೀಡುವಂತೆ ನೋಡಿಕೊಂಡಿದ್ದಾರೆ. ಸ್ಪಿನ್ ಬೌಲಿಂಗ್ ಕೋಚ್ ಮಾಲೋಲನ್ ರಂಗರಾಜನ್ ಮೈದಾನದ ಒಳಗೆ ಮತ್ತು ಹೊರಗೆ ಹೊಸ ಪ್ರತಿಭೆಗಳನ್ನು ಗುರುತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಉಳಿದಂತೆ ಸಹಾಯಕ ತರಬೇತುದಾರ ರಿಚರ್ಡ್ ಹಾಲ್ಸಾಲ್, ತಂಡದ ವಿಶ್ಲೇಷಕ ಫ್ರೆಡ್ಡಿ ವೈಲ್ಡ್, ಮತ್ತು ಮುಖ್ಯ ಫಿಸಿಯೋಥೆರಪಿಸ್ಟ್ ಇವಾನ್ ಸ್ಪೀಚ್ಲಿ ಸಹ ಆರ್‌ಸಿಬಿ ತಂಡ ಈ ಸಾಧನೆಯ ಹಿಂದೆ ತಮ್ಮದೇ ಪಾತ್ರ ನಿರ್ವಹಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications