ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಿದೆ. ಈ ಮೂಲಕ ಆರ್‌ಸಿಬಿ 17 ವರ್ಷದ ಟ್ರೋಫಿ ಗೆಲುವಿನ ಬರಕ್ಕೆ ಬ್ರೇಕ್ ಹಾಕಿದೆ. ಆರ್‌ಸಿಬಿ ತನ್ನ ಅಭಿಮಾನಿಗಳ ಆಸೆಯನ್ನು ಈಡೇರಿಸಿಕೊಂಡಿದೆ. ಅಲ್ಲದೆ ಆರ್‌ಸಿಬಿ ತನ್ನ ಬ್ರ್ಯಾಂಡ್ ವ್ಯಾಲ್ಯೂ ಸಹ ಹೆಚ್ಚು ಮಾಡಿಕೊಡಿದೆ. ಆರ್‌ಸಿಬಿ, ಸಿಎಸ್‌ಕೆ ತಂಡವನ್ನು ಹಿಂದಿಕ್ಕಿ ಐಪಿಎಲ್‌ನ ಮೌಲ್ಯಯುತ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ.
ವಿಶ್ವದ ಶ್ರೀಮಂತ ಲೀಗ್‌ನಲ್ಲಿ ಒಂದಾಗಿರುವ ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ ದಿನೇ ದಿನೇ ಏರಿಕೆ ಆಗುತ್ತಿದೆ. ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕೆ ವರದಿಯ ಪ್ರಕಾರ, ಐಪಿಎಲ್ ವ್ಯಾಲ್ಯೂ ಕಳೆದ ವರ್ಷಕ್ಕಿಂತ 12.9 ರಷ್ಟು ಹೆಚ್ಚಾಗಿದೆ. ಈ ಮೂಲಕ ಐಪಿಎಲ್ 18.5 ಬಿಲಿಯನ್ ಯುಎಡಸ್ ಡಾಲರ್ ತಲುಪಿದೆ. ಕಳೆದ ಒಂದೇ ವರ್ಷದಲ್ಲಿ ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ 3.9 ಬಿಲಿಯನ್ ಡಾಲರ್‌ಗೆ ಏರಿಕೆ ಆಗಿದೆ. ಈ ಅಂಕಿ ಅಂಶಗಳು ಐಪಿಎಲ್ ಕ್ರೇಜ್‌ಗೆ ಹಿಡಿದ ಕೈಗನ್ನಡಿಯಾಗಿದೆ. ಈ ಮೂಲಕ ಆರ್‌ಸಿಬಿ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ತಂಡವನ್ನು ಬ್ರ್ಯಾಂಡ್ ವ್ಯಾಲ್ಯೂನಲ್ಲಿ ಹಿಂದಿಕ್ಕಿದೆ.

ದಿನೇ ದಿನೇ ಐಪಿಎಲ್ ನೋಡುಗರ ಸಂಖ್ಯೆಯಲ್ಲಿ ನಿವ್ವಳ ಏರಿಕೆ ಆಗುತ್ತಿದೆ. ಇದರ ಲಾಭ ಲೀಗ್ ಮೇಲೂ ಆಗಿದೆ. ಇನ್ನು ಬಿಸಿಸಿಐ ಪ್ರಾಯೋಜಕರಿಂದಲೇ ಕಳೆದ ಸೈಕಲ್‌ಗಿಂತ ಶೇಕಡಾ 25 ರಷ್ಟು ಹೆಚ್ಚಾಗಿದೆ. ಅಲ್ಲದೆ ಟೈಟಲ್ ಸ್ಪಾನ್ಸರ್ ಟಾಟಾ ಸಹ ತನ್ನ ಪ್ರಾಯೋಜಕತ್ವದ ಒಪ್ಪಂದವನ್ನು 2028ರ ವರೆಗೆ ವಿಸ್ತರಿಸಿಕೊಂಡಿದೆ.
ಐಪಿಎಲ್ ಫ್ರಾಂಚೈಸಿಗಳ ಬಗ್ಗೆ ಹೇಳುವುದಾದರೆ, ಈ ಬಾರಿಯ ಚಾಂಪಿಯನ್ ಪಟ್ಟ ಅಲಂಕರಿಸಿರು ಬೆಂಗಳೂರು ತಂಡ ಹಲವು ದಾಖಲೆಗಳನ್ನು ನಿರ್ಮಿಸಿದೆ. ವಿಶ್ವದಲ್ಲೇ ಖ್ಯಾತಿ ಪಡೆದಿರುವ ಆರ್‌ಸಿಬಿ 269 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯ ಹೊಂದಿದ್ದು, ಅಗ್ರ ಸ್ಥಾನದಲ್ಲಿದೆ. ಈ ಮೂಲಕ ಆರ್‌ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ 227 ಮಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ಇನ್ನು ಮುಂಬೈ ಇಂಡಿಯನ್ಸ್ ತಂಡ 204 ಮಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ ಎಂದು ವರದಿಯಲ್ಲಿ ತಿಳಿದು ಬಂದಿದೆ.
ಐಪಿಎಲ್ 2025ರ ರನ್ನರ್ ಅಪ್ ಪಂಜಾಬ್ ಕಿಂಗ್ಸ್ ತಂಡ ವರ್ಷದಿಂದ ವರ್ಷಕ್ಕೆ ತನ್ನ ವ್ಯಾಲ್ಯೂ ಹೆಚ್ಚಿಸಿಕೊಳ್ಳುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ಪಂಜಾಬ್ ಕಿಂಗ್ಸ್ ವ್ಯಾಲ್ಯೂ 39.6 ರಷ್ಟು ಏರಿಕೆ ಆಗಿದೆ ಎಂದು ವರದಿ ತಿಳಿಸಿದೆ.
ಇನ್ನುಳಿದಂತೆ ಕೆಕೆಆರ್ ($227 ಮಿಲಿಯನ್), ಸನ್‌ರೈಸರ್ಸ್ ಹೈದಾರಬಾದ್ ($154 ಮಿಲಿಯನ್), ಡೆಲ್ಲಿ ಕ್ಯಾಪಿಟಲ್ಸ್ ($152 ಮಿಲಿಯನ್), ರಾಜಸ್ಥಾನ ರಾಯಲ್ಸ್ ($146 ಮಿಲಿಯನ್), ಗುಜರಾತ್ ಟೈಟಾನ್ಸ್ ($142 ಮಿಲಿಯನ್), ಪಂಜಾಬ್ ಕಿಂಗ್ಸ್ ($141 ಮಿಲಿಯನ್), ಲಕ್ನೋ ಸೂಪರ್ ಜೈಂಟ್ಸ್ ($22 ಮಿಲಿಯನ್), ಮೌಲ್ಯವನ್ನು ಹೊಂದಿವೆ.