Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಂಡಕ್ಕೆ ಮರಳಿದ ಭಜ್ಜಿ ಮಾಧ್ಯಮಗಳ ಎದುರು ಹೇಳಿದ್ದೇನು?

ನವದೆಹಲಿ,ಮೇ 20: ಎರಡು ವರ್ಷದ ನಂತರ ಹರ್ಭಜನ್ ಸಿಂಗ್ ಟೀಮ್ ಇಂಡಿಯಾಕ್ಕೆ ವಾಪಸಾಗಿದ್ದಾರೆ. ತಂಡಕ್ಕೆ ಮರಳಿದ್ದು ಸಂತೋಷ ತಂದಿದ್ದು ಇದು ನನ್ನ ಹೊಸ ಇನಿಂಗ್ಸ್ ಆಗಿದೆ. ದೇಶಕ್ಕಾಗಿ ಇನ್ನು 5 ವರ್ಷ ಕಾಲ ಆಡುತ್ತೇನೆ ಎಂದು ಆಫ್ ಸ್ಪಿನ್ನರ್ ಹೇಳಿದ್ದಾರೆ.

ತಮ್ಮ ಆಯ್ಕೆಯ ನಂತರ ಪಿಟಿಐ ಜತೆ ಮಾತನಾಡಿದ ಹರ್ಭಜನ್ ಸಿಂಗ್, ನಾನು ನನ್ನ ಲೋಪಗಳನ್ನು ತಿದ್ದಿಕೊಳ್ಳಲು ಸದಾ ಯತ್ನಿಸಿದ್ದು ಫಲ ನೀಡಿದೆ. ನನ್ನ ಮೇಲೆ ವಿಶ್ವಾಸವಿಟ್ಟ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.[ಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ]

harbhajan singh

ಭಾರತ ತಂಡದ ಜರ್ಸಿ ಧರಿಸಲು ಕಾತರನಾಗಿದ್ದೆ. ನನ್ನ ಪರಿಶ್ರಮವೇ ತಂಡಕ್ಕೆ ಮರಳಲು ದಾರಿ ಮಾಡಿಕೊಟ್ಟಿದೆ. ಇಲ್ಲಿ ಬೇರೆ ಯಾವ ಮಾರ್ಗ ಬಳಸಲಾಗಿಲ್ಲ ಎಂದು ಟೆಸ್ಟ್ ಕ್ರಿಕೆಟ್ ನಲ್ಲಿ 413 ವಿಕೆಟ್ ಕಿತ್ತಿರುವ ಸ್ಪಿನ್ ಮಾಂತ್ರಿಕ ಹೇಳಿದ್ದಾರೆ.

ಎಲ್ಲ ಬಗೆಯ ಕ್ರಿಕೆಟ್ ನಲ್ಲೂ ಭಾರತವನ್ನು ಪ್ರತಿನಿಧಿಸುತ್ತೇನೆ ಎಂಬ ವಿಶ್ವಾಸ ನನಗಿದೆ. ಇನ್ನು 5 ವರ್ಷ ಕಾಲ ಆಡುವ ಇಂಗಿತ ಹೊಂದಿರುವುದರಿಂದ ನಿವೃತ್ತಿ ಬಗ್ಗೆ ಏನನ್ನೂ ಹೇಳಲಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.[19 ಎಸೆತದಲ್ಲಿ ಅರ್ಧಶತಕ ದಾಖಲಿಸಿದ ಭಜ್ಜಿ]

ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಪಂದ್ಯಗಳನ್ನಾಡುತ್ತಿರುವ ಸಿಂಗ್ ಈ ಬಾರಿ ಇಲ್ಲಿವರೆಗೆ 16 ವಿಕೆಟ್ ಕಿತ್ತಿದ್ದಾರೆ. 2013 ರ ಐಪಿಎಲ್ ನಲ್ಲಿ ಮುಂಬೈ ಪರ 24 ವಿಕೆಟ್ ಕಿತ್ತಿದ್ದೆ. ಕಳೆದ ವರ್ಷ 14 ವಿಕೆಟ್ ಕಿತ್ತಿದ್ದೆ. ಹಾಗಾಗಿ ಐಪಿಎಲ್ ಸಾಧನೆ ನನ್ನ ಕ್ರಿಕೆಟ್ ಮರುಹುಟ್ಟಿಗೆ ಕಾರಣ ಎಂದು ಹೇಳಲು ಸಾಧ್ಯವಿಲ್ಲ ಎಂದು ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಬಾಂಗ್ಲಾ ಪ್ರವಾಸ ವೇಳಾಪಟ್ಟಿ]

ದೇಶದ ಪರ ಆಡಿ ನನ್ನ ಆಯ್ಕೆಗೆ ತಕ್ಕದಾದ ಪ್ರದರ್ಶನ ನೀಡುವುದು ನನ್ನ ಮುಂದಿನ ಗುರಿ. ನನ್ನ ಬೌಲಿಂಗ್ ನಲ್ಲಿ ಇನ್ನು ಹೆಚ್ಚಿನ ಸುಧಾರಣೆಗೆ ಗಮನ ನೀಡುತ್ತೇನೆ ಎಂದು ಕಪಿಲ್ ದೇವ್ ಮತ್ತು ಅನಿಲ್ ಕುಂಬ್ಳೆ ನಂತರ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಹೇಳಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+