ಧರ್ಮಶಾಲಾ, ಮಾರ್ಚ್ 28: ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು 2-1ರಲ್ಲಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಈಗ ಎಲ್ಲಾ ಟೆಸ್ಟ್ ಆಡುವ ರಾಷ್ಟ್ರಗಳ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ದಾಖಲೆ ಹೊಂದಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಈ ಸಾಧನೆಯನ್ನು ಎರಡು ಬಾರಿ ಹಾಗೂ ದಕ್ಷಿಣ ಆಫ್ರಿಕಾ ಒಂದು ಬಾರಿ ಸಾಧಿಸಿದೆ.
| ಗ್ಯಾಲರಿ | ಟ್ವೀಟ್ ಅಭಿನಂದನೆ
ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ 8 ವಿಕೆಟ್ ಗಳ ಸುಲಭ ಜಯ ದಾಖಲಿಸಿದೆ. ಕೆಎಲ್ ರಾಹುಲ್ ಅಜೇಯ 51 ಹಾಗೂ ನಾಯಕ ಅಜಿಂಕ್ಯ ರಹಾನೆ ಅಜೇಯ 38 ರನ್ ಗಳಿಸಿ, 107ರನ್ ಗಳನ್ನು ಸುಲಭವಾಗಿ ಚೇಸ್ ಮಾಡಿದರು.
ಈ ಗೆಲುವಿನ ಮೂಲಕ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಟೆಸ್ಟ್ ತಂಡ ಎನಿಸಿಕೊಂಡು ದಂಡ/ಗದೆ (mace) ಹೊಂದಲಿದೆ. ಒಂದು ಸೀಮಿತ ಅವಧಿಯಲ್ಲಿ ಎಲ್ಲಾ ಟೆಸ್ಟ್ ಆಡುವ ರಾಷ್ಟ್ರಗಳ ಮೇಲೆ ಸರಣಿ ಸಾಧಿಸಿದ ದಾಖಲೆ ಭಾರತ ಬರೆದಿದೆ.[ಆಸೀಸ್ ಬಗ್ಗುಬಡಿದ ಟೀಂ ಇಂಡಿಯಾಕ್ಕೆ ನಗದು ಬಹುಮಾನ ]

2012-13ರಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ಈ ಸಾಧನೆ ಮಾಡಿತ್ತು. ಮಾರ್ಚ್ 28ರಂದು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕರಾಗಿ ಅಜಿಂಕ್ಯ ರಹಾನೆ ಅವರು ಈ ಸಾಧನೆಗೆ ಸಾಕ್ಷಿಯಾದರು.