ಕ್ರಿಕೆಟ್ ದಿಗ್ಗಜ ಸಚಿನ್ ಹಿಂದಿಕ್ಕಿದ ವಿರಾಟ್ ಕೊಹ್ಲಿ
ಬೆಂಗಳೂರು, ಡಿ.24: ಟೀಂ ಇಂಡಿಯಾದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಮತ್ತೊಂದು ವಿಕ್ರಮ ಸಾಧಿಸಿದ್ದಾರೆ. ಹಾಲಿ ನಾಯಕ ಎಂಎಸ್ ಧೋನಿ ಅವರ ಸ್ಥಾನಕ್ಕೇರುವ ಎಲ್ಲಾ ಅರ್ಹತೆ ಹೊಂದಿರುವ ಪ್ರತಿಭಾವಂತ ಕ್ರಿಕೆಟರ್ ಈಗ ಜನಪ್ರಿಯತೆಯ ವಿಷಯದಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನೇ ಹಿಂದಿಕ್ಕಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅದರಲ್ಲೂ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಸದ್ಯದ ಅಗ್ರಗಣ್ಯ ಬ್ಯಾಟ್ಸ್ ಮನ್ ಆಗಿರುವ ವಿರಾಟ್ ಕೊಹ್ಲಿ ತ್ವರಿತಗತಿಯಿಂದ ರನ್ ಪೇರಿಸುತ್ತಿರುವುದನ್ನು ಗಮನಿಸಿದರೆ ಸಚಿನ್ ಅವರ ಶತಕಗಳ ದಾಖಲೆ ಧೂಳಿಪಟವಾಗುವ ಸಾಧ್ಯತೆಯಿದೆ. [ಧವನ್ - ಕೊಹ್ಲಿ ಫೈಟ್..?]

ಮೈದಾನದ ಹೊರಗೂ ಸಚಿನ್ ಅವರ ಬೆನ್ನು ಬಿದ್ದಿರುವ ಕೊಹ್ಲಿ ಈಗ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದೆ ಹಾಕಿದ್ದಾರೆ. ಈ ಮುಂಚೆ ಇಬ್ಬರು ಆಟಗಾರರು 4 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದರು. ಈಗ ಸಚಿನ್ ಗಿಂತ ಕೊಹ್ಲಿ 5000 ಹೆಚ್ಚು ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ.
ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಕೊಹ್ಲಿ 4 ಮಿಲಿಯನ್ ಹಿಂಬಾಲಕರನ್ನು ಪಡೆದುಕೊಂಡಿದ್ದರು. ನಂತರ ಅಕ್ಟೋಬರ್ 2 ರಂದು ಈ ಬಗ್ಗೆ ಸೆಲ್ಫಿ ಜೊತೆಗೆ ಟ್ವೀಟ್ ಮಾಡಿದ್ದರು. ಕೊಹ್ಲಿ ಸೆಪ್ಟೆಂಬರ್ 2009ರಲ್ಲಿ ಟ್ವಿಟ್ಟರ್ ಖಾತೆ ಆರಂಭಿಸಿದ್ದರೆ, ಸಚಿನ್ ತೆಂಡೂಲ್ಕರ್ ಅವರು 2010ರ ಏಪ್ರಿಲ್ ನಲ್ಲಿ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಗೆ ಕಾಲಿಟ್ಟಿದ್ದರು. [ಬೌನ್ಸರ್ ಪೆಟ್ಟು ತಿಂದ ಶತಕ ವೀರ ಕೊಹ್ಲಿ]
ಡಿ.24,2014, 12 PM IST ಸಮಯಕ್ಕೆ ಇಬ್ಬರ ಜನಪ್ರಿಯತೆ ಹೀಗಿದೆ:
ವಿರಾಟ್ ಕೊಹ್ಲಿ (@imVkohli) 4,878,842
ಸಚಿನ್ ತೆಂಡೂಲ್ಕರ್ (@sachin_rt) 4,872,483
ಅಡಿಲೇಡ್ ನಲ್ಲಿ ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾವನ್ನು ಆಸ್ಟ್ರೇಲಿಯಾ ವಿರುದ್ಧ ಸಮರ್ಥವಾಗಿ ಮುನ್ನಡೆಸಿ ಶತಕ ಬಾರಿಸಿದರು. ಈ ಮೂಲಕ ಟೆಸ್ಟ್ ನಾಯಕತ್ವಕ್ಕೂ ರೆಡಿ ಎಂದು ಸಾರಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications