ಏಕದಿನ ಕ್ರಿಕೆಟ್: ಡಬ್ಬಲ್ ಸೆಂಚುರಿ ಸ್ಟಾರ್ಸ್ ಪೈಕಿ ರೋಹಿತ್ ನಂ.1
ಮೊಹಾಲಿ, ಡಿಸೆಂಬರ್ 13 : ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರು ಏಕದಿನ ಪಂದ್ಯದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಬುಧವಾರ ಮೊಹಲಿಯಲ್ಲಿ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ 3ನೇ ದ್ವಿಶತಕ ಸಿಡಿಸುವುದರೊಂದಿಗೆ ಇತಿಹಾಸ ಬರೆದರು.
ಏಕದಿನ ಕ್ರಿಕೆಟ್ ನಲ್ಲಿ ಯಾವೊಬ್ಬ ಬ್ಯಾಟ್ಸ್ ಮನ್ ಮೂರು ಬಾರಿ ದ್ವಿಶತಕ ಬಾರಿಸಿಲ್ಲ. ಇದೀಗ ರೋಹಿತ್ ಶರ್ಮಾ ಮೂರು ಬಾರಿ ದ್ವಿಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಎರಡು ಬಾರಿ ಶ್ರೀಲಂಕಾ ವಿರುದ್ಧ ಒಂದು ಬಾರಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ದ್ವಿಶತಕ ಬಾರಿಸಿದ್ದಾರೆ.
2013ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ 209 ರನ್ ಬಾರಿಸಿದ್ದರು, 2014ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಬಾರಿಸಿ ಹೊಸ ದಾಖಲೆ ನಿರ್ಮಿಸಿದ್ದರು.
ಇದೀಗ ಮತ್ತೆ (2017) ಶ್ರೀಲಂಕಾ ವಿರುದ್ಧ ಅಜೇಯರಾಗಿ 208 ರನ್ ಬಾರಿಸುವ ಮೂಲಕ ಏಕದಿನ ಕ್ರಿಕೆಟ್ ಮೂರನೇ ದ್ವಿಶತಕ ಸಿಡಿಸಿ ಹೊಸ ಮೈಲುಗಲ್ಲು ಸೃಷ್ಟಿಸಿದರು.
ನಾಯಕನಾಗಿ ಏಕದಿನ ಪಂದ್ಯದಲ್ಲಿ ಇಲ್ಲಿಯವರೆಗೂ ಯಾವೊಬ್ಬ ಬ್ಯಾಟ್ಸ್ ಮೆನ್ ಕೂಡ ದ್ವಿಶತಕ ಬಾರಿಸಿಲ್ಲ.ಇದೀಗ ನಾಯಕನಾಗಿ ದ್ವಿಶತಕ ಸಿಡಿಸಿ ನೂತನ ದಾಖಲೆ ರೋಹಿತ್ ಅವರ ಮುಡಿಗೆ ಸೇರಿದೆ.
ಈವರೆಗೆ ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ ಸರದಾರರು

2010ರಲ್ಲಿ ದ.ಆ ವಿರುದ್ಧ ಸಚಿನ್ ತೆಂಡೂಲ್ಕರ್ ದ್ವಿಶತಕ
ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟರ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು 2010ರಲ್ಲಿ ಗ್ವಾಲಿಯರ್ ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಅಜೇಯ 200 ರನ್ ಬಾರಿಸಿದ್ದರು.

2011ರಲ್ಲಿ ಲಂಕಾ ವಿರುದ್ಧ ಸೆಹ್ವಾಗ್ ದ್ವಿಶತಕ
2011ರಲ್ಲಿ ಶ್ರೀಲಂಕಾ ವಿರುದ್ಧ ಇಂದೋರ್ ನಲ್ಲಿ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್ 219ರನ್ ಡಿಸಿದ್ದರು.

2013ರಲ್ಲಿ ರೋಹಿತ್ ಶರ್ಮಾ ದ್ವಿಶತಕ
2013ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ 209 ರನ್ ಬಾರಿಸಿದ್ದರು.

2014ರಲ್ಲಿ ರೋಹಿತ್ ಶರ್ಮಾ ದ್ವಿಶತಕ
2014ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧರೋಹಿತ್ ಶರ್ಮಾ 264 ರನ್ ಬಾರಿಸಿ ಹೊಸ ದಾಖಲೆ ನಿರ್ಮಿಸಿದ್ದರು. ಇದು ಏಕದಿನ ಕ್ರಿಕೆಟ್ ನಲ್ಲಿ ವೈಯಕ್ತಿ ಅತಿ ಹೆಚ್ಚು ರನ್ ಎನಿಸಿಕೊಂಡಿದೆ.

2015ರಲ್ಲಿ ವಿಂಡೀಸ್ ನ ಕ್ರಿಸ್ ಗೇಲ್ ದ್ವಿಶತಕ
2015ರಲ್ಲಿ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಆಸ್ಟ್ರೇಲಿಯಾದಲ್ಲಿ ಜಿಂಬ್ಬಾಬೆ ವಿರುದ್ಧ 215ರನ್ ಚಚ್ಚಿದ್ದರು.

ನ್ಯೂಜಿಲೆಂಡ್ ನ ಮಾರ್ಟಿನ್ ಗುಫ್ತಿಲ್ ದ್ವಿಶತಕ
ನ್ಯೂಜಿಲೆಂಡ್ ನ ಮಾರ್ಟಿನ್ ಗುಫ್ತಿಲ್ ಅವರು ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 237ರನ್ ಬಾರಿಸಿದ್ದಾರೆ. ಇದು ಏಕದಿನ ಕ್ರಿಕೆಟ್ ನಲ್ಲಿ ಅವರ ಗರಿಷ್ಟ ವೈಯಕ್ತಿಕ ಸ್ಕೋರ್ ಆಗಿದೆ.

2017ರಲ್ಲಿ ಲಂಕಾ ವಿರುದ್ಧ ರೋಹಿತ್ ದ್ವಿಶತಕ
ಶ್ರಿಲಂಕಾ ವಿರುದ್ಧ ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಸ್ಟಾರ್ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಭರ್ಜರಿ ಮೂರನೇ ದ್ವಿಶತಕ ಸಿಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications