Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಕೊನೇ ಎಸೆತಕ್ಕೆ 5/6 ರನ್ ಬೇಕಿದ್ದಾಗ ಸಿಕ್ಸ್‌ ಚಚ್ಚಿದವರ ಪಟ್ಟಿ!

Records of Hitting a six off the final ball with 5/6 required in IPL

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಶ್ರೀಕರ್ ಭರತ್ ಅಕ್ಷರಶಃ ಹೀರೋ ಆಗಿದ್ದಾರೆ. ಪ್ರಮುಖ ಪಂದ್ಯದಲ್ಲಿ ಕೊನೇ ಎಸೆತಕ್ಕೆ ಆರ್‌ಸಿಬಿ ಗೆಲ್ಲಲು ಸಿಕ್ಸ್‌ನ ಅವಕಶ್ಯಕತೆಯಿದ್ದಾಗ ಸಿಕ್ಸ್ ಬಾರಿಸಿದ್ದ ಭರತ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯ ಗೆಲ್ಲಿಸಿ ಎಲ್ಲರ ಚಿತ್ತ ತನ್ನತ್ತ ಹರಿಸಿಕೊಂಡಿದ್ದರು. ಭರತ್ ಬ್ಯಾಟಿಂಗ್‌ ಅಬ್ಬರಕ್ಕೆ ಈ ಸೀಸನ್‌ನ ಬಲಿಷ್ಠ ತಂಡ ಡೆಲ್ಲಿಯೇ ಒಮ್ಮೆ ಕಂಗಾಲಾಗಿತ್ತು.

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್‌ 8) ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 56ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ 7 ವಿಕೆಟ್ ಜಯ ಗಳಿಸಿತ್ತು. ಇದಕ್ಕೆ ಮುಖ್ಯ ಕಾರಣ ಶ್ರೀಕರ್ ಭರತ್. ಕೊನೇ ಎಸೆತಕ್ಕೆ ಸಿಕ್ಸ್ ಬಾರಿಸಿದ್ದ ಭರತ್ ಪಂದ್ಯ ಗೆಲ್ಲಿಸಿಕೊಟ್ಟಿದ್ದರು.

52 ಎಸೆತಗಳಲ್ಲಿ 78 ರನ್ ಸಿಡಿಸಿದ್ದ ಭರತ್

52 ಎಸೆತಗಳಲ್ಲಿ 78 ರನ್ ಸಿಡಿಸಿದ್ದ ಭರತ್

ಶುಕ್ರವಾರದ ಪಂದ್ಯದಲ್ಲಿ ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಶ್ರೀಕರ್ ಭರತ್ 52 ಎಸೆತಗಳಲ್ಲಿ 78 ರನ್ ಸಿಡಿಸಿದರು. ಕೊನೇ ಎಸೆತಕ್ಕೆ ಸಿಕ್ಸರ್ ಕೂಡ ಸೇರಿ 3 ಫೋರ್, 4 ಸಿಕ್ಸರ್ ಬಾರಿಸಿದ್ದರು. ಆರ್‌ಸಿಬಿ ಪಂದ್ಯ ಗೆಲ್ಲಬೇಕಿದ್ದರೆ ಕೊನೇ ಎಸೆತಕ್ಕೆ ಸಿಕ್ಸ್ ಬಾರಿಸಬೇಕಿತ್ತು. ಆ ವೇಳೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಗ್ಲೆನ್ ಮ್ಯಾಕ್ಸ್‌ವೆಲ್ ಕ್ರೀಸ್‌ನಲ್ಲಿ ಇದ್ದರಾದರೂ ಸ್ಟ್ರೈಕ್, ಭರತ್ ಅವರಿಗೆ ಬಂದಿತ್ತು. ತನ್ನ ಹೆಗಲಿಗೇರಿದ ಜವಾಬ್ದಾರಿಯನ್ನು ಭರತ್ ಚೆನ್ನಾಗೇ ನಿಭಾಯಿಸಿದರು. ಆವೇಶ್ ಖಾನ್ ಅವರ ಕೊನೇ ಎಸೆತಕ್ಕೆ ಭರತ್ ಸಿಕ್ಸ್ ಬಾರಿಸಿ ಆರ್‌ಸಿಬಿ ಗೆಲುವು ಸಾರಿದರು. ಡೆಲ್ಲಿ ವಿರುದ್ಧದ ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ನಲ್ಲಿ ಕೊನೇ ಎಸೆತಕ್ಕೆ ಸಿಕ್ಸ್ ಬಾರಿಸಿ ಪಂದ್ಯ ಗೆದ್ದ ದಾಖಲೆ ಪಟ್ಟಿ ಸೇರಿದೆ. ಶ್ರೀಕರ್ ಭರತ್ ಕೂಡ ದಾಖಲೆ ಪುಟದಲ್ಲಿದ್ದಾರೆ.

ಆರ್‌ಸಿಬಿ vs ಡಿಸಿ ಸ್ಕೋರ್‌ ಮಾಹಿತಿ

ಆರ್‌ಸಿಬಿ vs ಡಿಸಿ ಸ್ಕೋರ್‌ ಮಾಹಿತಿ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 48 (31 ಎಸೆತ), ಶಿಖರ್ ಧವನ್ 43 (35), ರಿಷಭ್ ಪಂತ್ 10, ಶ್ರೇಯಸ್ ಐಯ್ಯರ್ 18, ಶಿಮ್ರನ್ ಹೆಟ್ಮೈಯರ್ 29, ರಿಪಾಲ್ ಪಟೇಲ್ 7 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 164 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರಾಟ್ ಕೊಹ್ಲಿ 4, ಶ್ರೀಕರ್ ಭರತ್ 78, ಎಬಿ ಡಿ ವಿಲಿಯರ್ಸ್ 26, ಗ್ಲೆನ್ ಮ್ಯಾಕ್ಸ್‌ವೆಲ್ 51 (33) ರನ್‌ನೊಂದಿಗೆ 20 ಓವರ್‌ಗೆ 3 ವಿಕೆಟ್ ಕಳೆದು 166 ರನ್ ಗಳಿಸಿತು. ಈ ಜಯದೊಂದಿಗೆ ಅಂಕಪಟ್ಟಿಯಲ್ಲಿ ಆರ್‌ಸಿಬಿ 18 ಪಾಯಿಂಟ್ಸ್‌ನೊಂದಿಗೆ ಮೂರನೇ ಕ್ರಮಾಂಕದಲ್ಲಿ ಲೀಗ್‌ ಹಂತದ ಸ್ಪರ್ಧೆ ಮುಗಿಸಲು ಸಾಧ್ಯವಾಗಿದೆ.

ಕೊನೇ ಎಸೆತಕ್ಕೆ ಸಿಕ್ಸ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ

ಕೊನೇ ಎಸೆತಕ್ಕೆ ಸಿಕ್ಸ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ

(ಐಪಿಎಲ್‌ನಲ್ಲಿ ಪಂದ್ಯ ಗೆಲ್ಲಲು 5/6 ರನ್ ಬೇಕಿದ್ದಾಗ ಕೊನೇ ಎಸೆತಕ್ಕೆ ಸಿಕ್ಸ್ ಬಾರಿಸಿ ಪಂದ್ಯ ಗೆಲ್ಲಿಸಿದವರ ದಾಖಲೆ ಪಟ್ಟಿ)
* ಡ್ವೇನ್ ಬ್ರಾವೋ, ರಜತ್ ಭಾಟಿಯಾ ಎಸೆತಕ್ಕೆ, ಕೋಲ್ಕತ್ತಾ, 2012
* ಎಂಎಸ್ ಧೋನಿ, ಅಕ್ಷರ್ ಪಟೇಲ್ ಎಸೆತಕ್ಕೆ, ವಿಶಾಖ ಪಟ್ಟಣ, 2016
* ಕೆಎಸ್ ಭರತ್, ಆವೇಶ್ ಖಾನ್ ಎಸೆತಕ್ಕೆ, ದುಬೈ, 2021

* ಕೊನೇ ಎಸೆತಕ್ಕೆ 4 ರನ್‌ಗಳು ಬೇಕಿದ್ದಾಗ ಸಿಕ್ಸ್ ಬಾರಿಸಿದ್ದು
- ಅಂಬಾಟಿ ರಾಯುಡು, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, 2011

* ಕೊನೇ ಎಸೆತಕ್ಕೆ 3 ರನ್ ಬೇಕಿದ್ದಾಗ ಸಿಕ್ಸ್ ಬಾರಿಸಿದ್ದು
- ರೋಹಿತ್ ಶರ್ಮಾ, ಡೆಕ್ಕನ್ ಚಾರ್ಜರ್ಸ್ ವಿರುದ್ಧ, 2012
- ಸೌರಭ್ ತಿವಾರಿ, ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ, 2012
- ಮಿಚೆಲ್ ಸ್ಯಾಂಟ್ನರ್, ರಾಜಸ್ಥಾನ್ ರಾಯಲ್ಸ್ ವಿರುದ್ಧ, 2019

Story first published: Saturday, October 9, 2021, 21:03 [IST]
Other articles published on Oct 9, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+