ಬಾಂಗ್ಲಾ ಟೆಸ್ಟ್ :ಮೊದಲ ದಿನವೇ ದಾಖಲೆಗಳ ಸುರಿಮಳೆ
ಫಾತುಲ್ಲಾ (ಬಾಂಗ್ಲಾದೇಶ), ಜೂ.10: ಬಾಂಗ್ಲಾದೇಶ ವಿರುದ್ದದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ಟೀಂ ಇಂಡಿಯಾ ಭರ್ಜರಿ ಆಟ ಪ್ರದರ್ಶಿಸಿದೆ. ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲಾಭ ಪಡೆದ ಶಿಖರ್ ಧವನ್ ಆಕರ್ಷಕ ಶತಕ ಹಾಗೂ ಮುರಳಿ ವಿಜಯ್ ಅವರ ಅರ್ಧಶತಕದ ನೆರವಿನಿಂದ ಹಲವು ದಾಖಲೆಗಳು ಧೂಳಿಪಟವಾಗಿವೆ.
ಮಳೆಗೆ ಆಹುತಿಯಾಗಬೇಕಿದ್ದ ಪಂದ್ಯ ಭೋಜನ ವಿರಾಮದ ನಂತರ ಚುರುಕುಗೊಂಡಿತು. ಆದರೂ ದಿನದ ಅಂತ್ಯಕ್ಕೆ ಬಾಂಗ್ಲಾ ತಂಡಕ್ಕೆ 56 ಓವರ್ ಗಳಷ್ಟೇ ಎಸೆಯಲು ಸಾಧ್ಯವಾಯಿತು.

ಖಾನ್ ಶಾಹೆಬ್ ಒಸ್ಮನ್ ಅಲಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಮೊದಲ ದಿನದ ಅಂತ್ಯಕ್ಕೆ ಭಾರತ 56 ಓವರ್ ಗಳಲ್ಲಿ 239/0 ಸ್ಕೋರ್ ಮಾಡಿದೆ. ಮುರಳಿ ವಿಜಯ್ 89 ರನ್ ಹಾಗೂ ಶಿಖರ್ ಧವನ್ 150 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.
ಮೊದಲ ದಿನದ ಮುಖ್ಯಾಂಶಗಳು. ದಾಖಲೆಗಳು ಇಲ್ಲಿವೆ:
* 239ರನ್ ಜೊತೆಯಾಟ(ಇನ್ನೂ ಮುರಿದಿಲ್ಲ) : ಬಾಂಗ್ಲಾದೇಶ ವಿರುದ್ಧ ಭಾರತದ ಅತ್ಯಧಿಕ ಆರಂಭಿಕ ವಿಕೆಟ್ ಗೆ ಗಳಿಸಿದ ಮೊತ್ತ ಇದಾಗಿದೆ. 2ನೇ ವಿಕೆಟ್ ಗೆ ರಾಹುಲ್ ದ್ರಾವಿಡ್ ಹಾಗೂ ಗೌತಮ್ ಗಂಭೀರ್ 2004ರಲ್ಲಿ 259ರನ್ ಗಳಿಸಿದ್ದು ಸಾಧನೆ.
| ಚಿತ್ರಗಳು | ಪಂದ್ಯದ 1ನೇ ದಿನದ ವರದಿ
* ಧವನ್ ಹಾಗೂ ಮುರಳಿ ವಿಜಯ್ 14 ಇನ್ನಿಂಗ್ಸ್‌ನಿಂದ 1000 ರನ್‌ಗಳ ಜೊತೆಯಾಟ ಗಳಿಸಿದರು. ಇಂಥ ಸಾಧನೆ ಬರೆದ ಭಾರತದ 6ನೇ ಆರಂಭಿಕ ಜೋಡಿ.

* 239 ರನ್ ಆರಂಭಿಕ ಜೊತೆಯಾಟ ಸದ್ಯಕ್ಕೆ ನಾಲ್ಕನೇ ಸ್ಥಾನದಲ್ಲಿದೆ. ಭಾರತದ ಅರಂಭಿಕ ಜೋಡಿ ದಾಖಲೆ 1956 ರಲ್ಲಿ ವಿನೂ ಮಂಕಡ್-ಪಂಕಜ್ ರಾಜ್ ಹೆಸರಿನಲ್ಲಿದೆ -413 ರನ್)
* ಬಾಂಗ್ಲಾದೇಶದ ವಿರುದ್ಧ ನಾಲ್ಕನೇ ಬಾರಿಗೆ 200ಕ್ಕೂ ಅಧಿಕ ರನ್ ಜೊತೆಯಾಟ ಕಂಡು ಬಂದಿದೆ.
* ಶಿಖರ್ ಧವನ್ ಅವರ 150 ರನ್ 5ನೇ ವೈಯಕ್ತಿಕ ಅತ್ಯಧಿಕ ಮೊತ್ತವಾಗಿದೆ. 2004ರಲ್ಲಿ ಸಚಿನ್ ಬಾರಿಸಿದ 248 ನಾಟೌಟ್ ಅತ್ಯಧಿಕ ಮೊತ್ತ.
* ಗಂಭೀರ್ ಹಾಗೂ ಸೆಹ್ವಾನ್ (2 ಬಾರಿ ) ನಂತರ ಧವನ್ ಹಾಗೂ ವಿಜಯ್ ಇಬ್ಬರು ಎರಡನೇ ಬಾರಿಗೆ ದ್ವಿಶತಕ ಜೊತೆಯಾಟ ದಾಖಲಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications