ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ : 1ನೇ ದಿನದ ಅಂತ್ಯಕ್ಕೆ ಧವನ್ 150, ವಿಜಯ್ 89

By Mahesh

ಫಾತುಲ್ಲಾ(ಬಾಂಗ್ಲಾದೇಶ), ಜೂ.10: ಬಾಂಗ್ಲಾದೇಶ ವಿರುದ್ದದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲ ನೀಡಿದೆ.

ಟೀಂ ಇಂಡಿಯಾ ಪರ ಉತ್ತಮ ಆರಂಭ ಒದಗಿಸಿರುವ ಶಿಖರ್ ಧವನ್ ಆಕರ್ಷಕ 150 ರನ್ ಪೂರೈಸಿದ್ದಾರೆ. ಮೊದಲ ದಿನದ ಅಂತ್ಯಕ್ಕೆ ಟೀಂ ಇಂಡಿಯಾ 56 ಓವರ್ ಗಳಲ್ಲಿ 239/0 ಸ್ಕೋರ್ ಮಾಡಿದೆ. ವಿಜಯ್ 89 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.

| ಚಿತ್ರಗಳು | ಪಂದ್ಯದ ಮುನ್ನೋಟ

ಮೊದಲ ದಿನ ಮೊದಲ ಇನ್ನಿಂಗ್ಸ್ ಭೋಜನ ವಿರಾಮದ ವೇಳೆಗೆ ಪಂದ್ಯಕ್ಕೆ ಮಳೆ ಅಡ್ಡಿಯಾದಾಗ ಭಾರತ 107/0, ಶಿಖರ್ ಧವನ್ 71 ಎಸೆತಗಳಲ್ಲಿ 74 ರನ್ (12X4), ಮುರಳಿ ವಿಜಯ್ 33 ರನ್ (4X4). ವಿಳಂಬದ ನಂತರ ಮತ್ತೆ ಪಂದ್ಯ ಆರಂಭ.

101 ಎಸೆತಗಳಲ್ಲಿ ತಮ್ಮ ಟೆಸ್ಟ್ ವೃತ್ತಿ ಬದುಕಿನ ಮೂರನೇ ಶತಕವನ್ನು ಶಿಖರ್ ಧವನ್ ಸಿಡಿಸಿದರು. ನಂತರ 56 ಓವರ್ ಮುಗಿಯುವ ವೇಳೆಗೆ ಧವನ್ 150 ರನ್ (21 ಬೌಂಡರಿ) ಪೂರೈಸಿದರು. ಮುರಳಿ ವಿಜಯ್ 89 ರನ್ (178ಎಸೆತ, 8X4, 1X6).

ಧವನ್ ಹಾಗೂ ಮುರಳಿ ವಿಜಯ್ 14 ಇನ್ನಿಂಗ್ಸ್‌ನಿಂದ 1000 ರನ್‌ಗಳ ಜೊತೆಯಾಟ ಆಡುವ ಮೂಲಕ ಇಂತಹ ಸಾಧನೆ ಬರೆದ 6 ಆರಂಭಿಕ ಜೋಡಿ ಎಂಬ ಕೀರ್ತಿಗೆ ಭಾಜನವಾಯಿತು. [ಬಾಂಗ್ಲಾ ಟೆಸ್ಟ್ :ಮೊದಲ ದಿನವೇ ದಾಖಲೆಗಳ ಸುರಿಮಳೆ ]

ಸುಮಾರು 2 ವರ್ಷ ಗಳ ನಂತರ ಹರ್ಭಜನ್ ಸಿಂಗ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಆರ್ ಅಶ್ವಿನ್ ಸೇರಿದಂತೆ ಐವರು ಬೌಲರ್ ಗಳನ್ನು ಕೊಹ್ಲಿ ಕಣಕ್ಕಿಳಿಸಿದ್ದಾರೆ. ಭಾರತ ಇದುವರೆವಿಗೂ ಬಾಂಗ್ಲಾ ವಿರುದ್ಧ ಟೆಸ್ಟ್ ಪಂದ್ಯವನ್ನು ಸೋತಿಲ್ಲ.

Harbhajan returns as India bat first against Bangladesh

ಚೇತೇಶ್ವರ್ ಪೂಜಾರಾ, ಭುವನೇಶ್ವರ್ ಕುಮಾರ್ ಹಾಗೂ ಲೆಗ್ ಸ್ಪಿನ್ನರ್ ಕರಣ್ ಶರ್ಮಗೆ ಸ್ಥಾನ ಸಿಕ್ಕಿಲ್ಲ. ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರು ಅನಾರೋಗ್ಯದ ಕಾರಣ ಟೂರ್ನಿಯಿಂದ ಹೊರ ಬೀಳಬೇಕಾಯಿತು. ಬಾಂಗ್ಲಾ ಪರ ಲಿಟ್ಟನ್ ದಾಸ್ ಮೊದಲ ಟೆಸ್ಟ್ ಪಂದ್ಯವಾಡುತ್ತಿದ್ದಾರೆ.

ಬಾಂಗ್ಲಾದೇಶ: ಮುಷ್ಫಿಕರ್ ರಹೀಂ(ನಾಯಕ), ತಮೀಮ್ ಇಕ್ಬಾಲ್, ಇಮ್ರುಲ್ ಕೇಯ್ಸ್, ಮೊಮಿನುಲ್ ಹಕ್, ಶಕೀಬ್ ಅಲ್ ಹಸನ್, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್ (ವಿಕೆಟ್ ಕೀಪರ್) ಶುವಗತರ ಸೋಮ್, ತೈಜುಲ್ ಇಸ್ಲಾಂ, ಮೊಹಮ್ಮದ್ ಶಹೀದ್, ಜುಬೇರ್, ಹುಸೇನ್,

ಭಾರತ: ವಿರಾಟ್ ಕೊಹ್ಲಿ (ಭಾರತ), ಮುರಳಿ ವಿಜಯ್, ಶಿಖರ್ ಧವನ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಆರ್ ಅಶ್ವಿನ್, ಹರ್ಭಜನ್ ಸಿಂಗ್, ಉಮೇಶ್ ಯಾದವ್, ವರುಣ್ ಅರೋನ್, ಇಶಾಂತ್ ಶರ್ಮ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Read in English: Shikhar Dhawan hits century
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X