Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Reece Topley : ರೀಸ್ ಟೋಪ್ಲಿ ಗಾಯದ ಬಗ್ಗೆ ಮಹತ್ವದ ಮಾಹಿತಿ ನೀಡಿದ ದಿನೇಶ್ ಕಾರ್ತಿಕ್

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ತನ್ನ ಮೊದಲನೇ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆದರೆ, ಮೊದಲನೇ ಪಂದ್ಯದಲ್ಲೇ ಎಡಗೈ ವೇಗದ ಬೌಲರ್ ರೀಸ್ ಟೋಪ್ಲೆ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಭುಜದ ನೋವಿಗೆ ಒಳಗಾಗಿದ್ದು, ಆತಂಕಕ್ಕೆ ಕಾರಣವಾಯಿತು. ಎರಡು ಓವರ್ ಬೌಲಿಂಗ್ ಮಾಡಿದ ಅವರು ಕ್ಯಾಮೆರಾನ್ ಗ್ರೀನ್ ಅವರನ್ನು ಬೌಲ್ಡ್ ಮಾಡುವ ಮೂಲಕ ಐಪಿಎಲ್‌ನ ಮೊದಲ ವಿಕೆಟ್ ಪಡೆದರು.

ಆದರೆ, ನಂತರ ಫೀಲ್ಡಿಂಗ್ ಮಾಡುವ ವೇಳೆ ಭುಜದ ನೋವಿಗೆ ತುತ್ತಾದ ಬಳಿಕ ಮೈದಾನದಿಂದ ಹೊರಗುಳಿಯಬೇಕಾಯಿತು. ಮುಂಬೈನ ಬ್ಯಾಟಿಂಗ್‌ನ 8ನೇ ಓವರ್‌ನಲ್ಲಿ ಚೆಂಡನ್ನು ತಡೆಯಲು ಡೈವ್ ಮಾಡಲು ಟೋಪ್ಲಿ ಪ್ರಯತ್ನ ಪಟ್ಟರು, ಡೈವ್ ಮಾಡುವ ಸಂದರ್ಭದಲ್ಲಿ ಸಮತೋಲನ ಕಳೆದುಕೊಂಡ ಅವರು ಕೆಳಗೆ ಬಿದ್ದಾಗ ದೇಹದ ತೂಕ ಭುಜದ ಮೇಲೆ ಬಿದ್ದಿದ್ದರಿಂದ ನೋವಿನಿಂದ ನರಳಿದರು. ನಂತರ ಫಿಸಿಯೋ ಸಹಾಯದೊಂದಿಗೆ ಮೈದಾನದಿಂದ ಹೊರ ನಡೆದರು. ಉಳಿದ ಎರಡು ಓವರ್ ಬೌಲಿಂಗ್ ಮಾಡಲು ಅವರು ವಾಪಸ್ ಬರಲಿಲ್ಲ.

Reece Topley RCB

ಪಂದ್ಯದ ಬಳಿಕ ಮಾತನಾಡಿದ ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ಟೋಪ್ಲೆ ಗಾಯದ ಬಗ್ಗೆ ಮಾಹಿತಿ ನೀಡಿದರು. ಟೋಪ್ಲಿಯ ಭುಜದ ಮೂಳೆ ಸ್ವಲ್ಪ ಹೊರಬಂದಿತ್ತು (ಪಾಪ್ ಔಟ್), ಆದರೆ ಮತ್ತೆ ಅದು ಮೊದಲಿನ ಸ್ಥಾನಕ್ಕೆ ಮರಳುವಲ್ಲಿ ಯಶಸ್ವಿಯಾಗಿದೆ. ಅವರು ಸ್ಕ್ಯಾನ್‌ಗೆ ಒಳಗಾಗಲು ಹೋಗಿದ್ದಾರೆ. ಹೆಚ್ಚಿನ ನೋವು ಇರಲಿಲ್ಲ, ಸ್ಕ್ಯಾನಿಂಗ್ ವರದಿ ಬಳಿಕ ಸರಿಯಾದ ವಿವರ ತಿಳಿಯಲಿದೆ ಎಂದು ತಿಳಿಸಿದರು.

ರೀಸ್‌ ಟೋಪ್ಲಿ ಉತ್ತಮವಾಗಿದ್ದಾರೆ

ಪಂದ್ಯದ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕ್ರಿಕೆಟ್‌ನ ನಿರ್ದೇಶಕ ಮೈಕ್ ಹೆಸ್ಸನ್ ಕೂಡ ರೀಸ್ ಟೋಪ್ಲೆ ಗಾಯದ ಬಗ್ಗೆ ಪ್ರಮುಖವಾದ ಮಾಹಿತಿಯನ್ನು ನೀಡಿದರು. ಭುಜದ ಮೂಳೆ ಸ್ಥಳಾಂತರದ ಬಗ್ಗೆ ನಿರ್ಣಯಿಸಲು ಅವರನ್ನು ಸ್ಕ್ಯಾನ್‌ಗಾಗಿ ಕಳುಹಿಸಲಾಗಿದೆ ಎಂದು ಹೆಸ್ಸನ್ ತಿಳಿಸಿದರು.

"ದುರದೃಷ್ಟವಶಾತ್, ಟೋಪ್ಲಿಯ ಮೊಣಕಾಲು ನೆಲದಲ್ಲಿ ಜಾರದ ಕಾರಣ ಅವರು ಸ್ಪಷ್ಟವಾಗಿ ಭುಜದ ಮೇಲೆ ಹೆಚ್ಚಿನ ಒತ್ತಡ ಬಿಟ್ಟರು. ಭುಜದ ಮೂಳೆ ಪಾಪ್ ಔಟ್ ಆಗಿತ್ತು, ಅದೃಷ್ಟ ಚೆನ್ನಾಗಿದ್ದ ಕಾರಣ ಅದನ್ನು ಮತ್ತೆ ಕೂಡಿಸಲು ಸಾಧ್ಯವಾಯಿತು" ಎಂದರು. "ಅವರು ಮುಂಜಾಗ್ರತಾ ಕ್ರಮವಾಗಿ ಸ್ಕ್ಯಾನ್‌ಗೆ ಒಳಗಾಗಿದ್ದಾರೆ. ಆರಂಭಿಕ ವರದಿಗಳು ಉತ್ತಮವಾಗಿದೆ, ಅವರು ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನುವ ವಿಶ್ವಾಸ ಇದೆ. ವರದಿ ಬರುವವರೆಗೆ ಕಾದು ನೋಡಬೇಕಾಗುತ್ತದೆ ಎಂದು ಹೇಳಿದರು."

Reece Topley RCB

2022ರ ಟಿ20 ವಿಶ್ವಕಪ್‌ನಲ್ಲಿ ಕೂಡ ಗಾಯದ ಕಾರಣ ಇಂಗ್ಲೆಂಡ್‌ ವೇಗಿ ಟೋಪ್ಲಿ ಪಂದ್ಯಾವಳಿಯಿಂದ ಹೊರಗುಳಿಯಬೇಕಾಯಿತು. ಗಬ್ಬಾದಲ್ಲಿ ಬೌಂಡರಿ ಸ್ಪಂಜಿನ ಮೇಲೆ ಜಾರಿಬಿದ್ದ ಬಳಿಕ, ಪಾದ ತಿರುಚಿದ್ದರಿಂದ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. 2023 ಐಪಿಎಲ್ ಮಿನಿ ಹರಾಜಿನಲ್ಲಿ ಅವರು ಆರ್ ಸಿಬಿ ತಂಡಕ್ಕೆ ಆಯ್ಕೆಯಾದರು. ಜೋಶ್ ಹೇಜಲ್‌ವುಡ್ ಅನುಪಸ್ಥಿತಿಯಲ್ಲಿ ಮೊದಲನೇ ಪಂದ್ಯದಲ್ಲೇ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಏಪ್ರಿಲ್ 6 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ಈ ಪಂದ್ಯ ನಡೆಯಲಿದೆ. ಎರಡನೇ ಪಂದ್ಯದ ವೇಳೆಗೆ ಟೋಪ್ಲಿ ಫಿಟ್ ಆಗುವ ಸಾಧ್ಯತೆ ಇದೆ. ಒಂದು ವೇಳೆ ಟೋಪ್ಲಿ ಫಿಟ್ ಆಗದಿದ್ದರೆ, ಮತ್ತೊಬ್ಬ ಇಂಗ್ಲೆಂಡ್ ವೇಗಿ ಡೇವಿಡ್ ವಿಲ್ಲಿ ಅವಕಾಶ ಪಡೆಯಲಿದ್ದಾರೆ.

Story first published: Monday, April 3, 2023, 12:46 [IST]
Other articles published on Apr 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+