Reece Topley Injury Update: ಕೋಲ್ಕತ್ತಾಗೆ ಪ್ರಯಾಣಿಸಿದ ರೀಸ್ ಟೋಪ್ಲಿ ಈಗ ಹೇಗಿದ್ದಾರೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ವೇಗದ ಬೌಲರ್ ರೀಸ್ ಟೋಪ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲನೇ ಪಂದ್ಯದಲ್ಲಿ ಗಾಯಗೊಂಡಿದ್ದು ತಂಡದ ಆತಂಕಕ್ಕೆ ಕಾರಣವಾಗಿತ್ತು. ಜೋಶ್ ಹೇಜಲ್‌ವುಡ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ರೀಸ್ ಟೋಪ್ಲಿ ತಂಡದ ಪ್ರಮುಖ ಬೌಲರ್ ಆಗಿದ್ದರು. ಮೊದಲನೇ ಪಂದ್ಯದಲ್ಲೇ ಅಪಾಯಕಾರಿ ಬ್ಯಾಟರ್ ಕ್ಯಾಮೆರಾನ್ ಗ್ರೀನ್ ಅವರ ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರು.
ಮೊದಲನೇ ಪಂದ್ಯದಲ್ಲಿ ಅವರು ಕೇವಲ 2 ಓವರ್ ಮಾತ್ರ ಬೌಲಿಂಗ್ ಮಾಡಿದ್ದರು, 8ನೇ ಓವರ್ ನಲ್ಲಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಗಾಯಗೊಂಡ ಬಳಿಕ ಅವರು ಫಿಸಿಯೋ ಜೊತೆ ಮೈದಾನದಿಂದ ಹೊರ ನಡೆದಿದ್ದರು. ತಕ್ಷಣವೇ ಅವರನ್ನು ಸ್ಕ್ಯಾನ್‌ಗೆ ಒಳಪಡಿಸಲಾಯಿತು. ಭುಜದ ಮೂಳೆ ಪಾಪ್ ಔಟ್ ಆಗಿದ್ದರೂ, ತಕ್ಷಣವೇ ಅದನ್ನು ಯಥಾಸ್ಥಿತಿಗೆ ತರುವಲ್ಲಿ ಫಿಸಿಯೋಗಳು ಯಶಸ್ವಿಯಾಗಿದ್ದಾರೆ. ದಿನೇಶ್ ಕಾರ್ತಿಕ್ ಕೂಡ ಮಾಹಿತಿ ನೀಡಿ, ಹೆಚ್ಚಿನ ಅಪಾಯವಿಲ್ಲ ಎಂದು ಭರವಸೆ ನೀಡಿದ್ದರು.

ಸದ್ಯದ ಮಾಹಿತಿ ಪ್ರಕಾರ ರೀಸ್ ಟೋಪ್ಲಿ ಗಾಯದ ಪ್ರಮಾಣ ಗಂಭೀರವಾಗಿಲ್ಲ ಎಂದು ಹೇಳಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಮುಂದಿನ ಪಂದ್ಯಕ್ಕಾಗಿ ಕೋಲ್ಕತ್ತಾಗೆ ಪ್ರಯಾಣ ಮಾಡಿದ್ದು, ತಂಡದ ಜೊತೆ ರೀಸ್ ಟೋಪ್ಲಿ ಕೂಡ ತೆರಳಿದಿದ್ದಾರೆ. ಬೇಜಾರಿನ ವಿಚಾರ ಎಂದರೆ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.

ಮೂರನೇ ಪಂದ್ಯಕ್ಕೆ ವಾಪಸಾಗಲಿರುವ ಟೋಪ್ಲಿ
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡರೂ, ಅವರು ಆರ್ ಸಿಬಿಯ ಮೂರನೇ ಪಂದ್ಯಕ್ಕೆ ವಾಪಸಾಗುವುದು ಬಹುತೇಕ ಖಚಿತವಾಗಿದೆ. ಏಪ್ರಿಲ್ 10ರಂದು ಸೋಮವಾರ ಆರ್ ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೂರನೇ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ರೀಸ್ ಟೋಪ್ಲಿ ಆಡಲಿದ್ದಾರೆ ಎಂದು ಹೇಳಲಾಗಿದೆ.
ರೀಸ್ ಟೋಪ್ಲಿ ಅನುಪಸ್ಥಿತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್‌ನ ಮತ್ತೊಬ್ಬ ವೇಗದ ಬೌಲರ್ ಡೇವಿಡ್ ವಿಲ್ಲಿ ಆಡುವ ಸಾಧ್ಯತೆ ಇದೆ. ಡೇವಿಡ್ ವಿಲ್ಲಿ ಕೂಡ ಎಡಗೈ ಮಧ್ಯಮ ವೇಗದ ಬೌಲರ್ ಆಗಿದ್ದು, ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮದಲ್ಲಿ ಮತ್ತೊಬ್ಬ ವೇಗಿ ಅವಿನಾಶ್ ಸಿಂಗ್ ಕೂಡ ಮೊದಲನೇ ಪಂದ್ಯವನ್ನು ಆಡುವ ಸಾಧ್ಯತೆ ಇದೆ.
ಈಗಾಗಲೇ ಮೊದಲನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿರುವ ಆರ್ ಸಿಬಿ ಎರಡನೇ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಅತ್ಯುತ್ತಮ ಫಾರ್ಮ್‌ನಲ್ಲಿರುವುದು ತಂಡದ ಬಲವನ್ನು ಹೆಚ್ಚಿಸಿದೆ. ಮೈಕೆಲ್ ಬ್ರೇಸ್‌ವೆಲ್, ಗ್ಲೆನ್ ಮ್ಯಾಕ್ಸ್‌ವೆಲ್ ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಆರ್ ಸಿಬಿ ಸಂಭಾವ್ಯ ಆಡುವ ಬಳಗ
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೈಕೆಲ್ ಬ್ರೇಸ್‌ವೆಲ್, ದಿನೇಶ್ ಕಾರ್ತಿಕ್, ಡೇವಿಡ್ ವಿಲ್ಲಿ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಕರಣ್ ಶರ್ಮಾ. ಇಂಪ್ಯಾಕ್ಟ್ ಪ್ಲೇಯರ್ : ಸುಯೇಶ್ ಪ್ರಭುದೇಸಾಯಿ, ಅವಿನಾಶ್ ಸಿಂಗ್, ಅನುಜ್ ರಾವತ್, ಮಹಿಪಾಲ್ ಲೊಮ್ರೊರ್, ಅನುಜ್ ರಾವತ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications