Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

6, 6, 6, 6, 6, ಎಂಎಸ್ ಧೋನಿ ಭರ್ಜರಿ ಕಮ್‌ಬ್ಯಾಕ್‌ ಮುನ್ಸೂಚನೆ: ವೀಡಿಯೋ

Returning CSK captain MS Dhoni lights up Chepauk ahead of IPL 2020

ಚೆನ್ನೈ, ಮಾರ್ಚ್ 6: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 13ನೇ ಆವೃತ್ತಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕತ್ವ ವಹಿಸಿಕೊಂಡಿರುವ ಧೋನಿ, ಈ ಬಾರಿ ಉತ್ತಮ ಪ್ರದರ್ಶನ ನೀಡುವುದರಲ್ಲಿದ್ದಾರೆ.

ಮಾರ್ಚ್ 3ರಿಂದಲೇ ಸಿಎಸ್‌ಕೆ ತಂಡ ತಯಾರಿಯನ್ನಾರಂಭಿಸಿದೆ. ದೀರ್ಘ ಕಾಲದ ಬಳಿಕ ಮೈದಾನಕ್ಕಿಳಿದಿರುವ ಕೂಲ್ ಕ್ಯಾಪ್ಟನ್ ಧೋನಿ, ನೆಟ್ ಅಭ್ಯಾಸದ ವೇಳೆ ದೊಡ್ಡ ಹೊಡೆತಗಳನ್ನು ಬಾರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.

ಚೆನ್ನೈನ ಚೆಪಕ್ ಸ್ಟೇಡಿಯಂನಲ್ಲಿ ನಡೆಸಿದ ಅಭ್ಯಾಸದ ವೇಳೆ ಧೋನಿ ಐದು ಎಸೆತಗಳಲ್ಲಿ ಸತತ ಐದು ಸಿಕ್ಸ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಭರ್ಜರಿ ಕಮ್‌ಬ್ಯಾಕ್‌ನ ಮುನ್ಸೂಚನೆ ನೀಡಿದ್ದಾರೆ. ಇಲ್ಲಿ ಚೆಂಡು ಎಸೆದಿದ್ದು ಬೌಲರೋ ಅಥವಾ ಬಾಲ್ ಮೆಶೀನೋ ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ಧೋನಿ ಸಿಕ್ಸ್ ಮೇಲೆ ಸಿಕ್ಸ್ ಚಚ್ಚಿದ್ದು ಮಾತ್ರ ನಿಜವೆ.

ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ 2019ರಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತ ಕೊನೇ ಪಂದ್ಯವನ್ನಾಡಿತ್ತು. ಆ ಪಂದ್ಯದಲ್ಲಿ ಭಾರತ ಸೋತು ಸ್ಪರ್ಧೆ ಮುಗಿಸಿತ್ತು. ಧೋನಿ ಅಂತಾರಾಷ್ಟ್ರೀಯ ಕಡೇ ಪಂದ್ಯವನ್ನಾಡಿದ್ದೂ ಆವತ್ತೇ. ಅದಾಗಿ ಧೋನಿ ಈ ಐಪಿಎಲ್‌ನಲ್ಲಿ ಬ್ಯಾಟ್‌ ಬೀಸಲಿದ್ದಾರೆ. ಇಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡಿದರೆ, ಈ ಬಾರಿಯ ಟಿ20ಐ ವಿಶ್ವಕಪ್‌ನಲ್ಲಿ ಧೋನಿ ಭಾರತ ತಂಡದಲ್ಲಿ ಕಾಣಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

Story first published: Friday, March 6, 2020, 18:58 [IST]
Other articles published on Mar 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+