Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ 'ಅತ್ಯಂತ ಮೌಲ್ಯಯುತ ತಂಡ'ದಲ್ಲಿ ಏಕೈಕ ಭಾರತೀಯ ಆಟಗಾರ್ತಿಗೆ ಸ್ಥಾನ

Richa Ghosh Only Indian Player Named In ICC Womens T20 World Cup Most Valuable Team

ಭಾನುವಾರ, ಫೆಬ್ರವರಿ 26ರಂದು ದಕ್ಷಿಣ ಆಫ್ರಿಕಾದಲ್ಲಿ ಮುಕ್ತಾಯಗೊಂಡ 2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ತಂಡವನ್ನು ಮಣಿಸಿ ಆಸ್ಟ್ರೇಲಿಯಾ ಮಹಿಳಾ ತಂಡ ಸತತ ಮೂರನೇ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿ ಎತ್ತಿ ಹಿಡಿದಿದೆ.

ಇನ್ನು ಇದಕ್ಕೂ ಮುನ್ನ ಕೇಪ್ ಟೌನ್‌ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದ ಸಂದರ್ಭದಲ್ಲಿ ಭಾರತದ ವಿಕೆಟ್ ಕೀಪರ್- ಬ್ಯಾಟರ್ ರಿಚಾ ಘೋಷ್ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಸೋಮವಾರ, ಫೆಬ್ರವರಿ 27ರಂದು ಪ್ರಕಟಿಸಲಾದ ಐಸಿಸಿಯ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯ "ಅತ್ಯಂತ ಮೌಲ್ಯಯುತ ತಂಡ'ದಲ್ಲಿ ಸ್ಥಾನ ಪಡೆದಿದ್ದಾರೆ.

19 ವರ್ಷದ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್ ರಿಚಾ ಘೋಷ್ ಗ್ರೂಪ್ ಹಂತದಲ್ಲಿ ಐರ್ಲೆಂಡ್ ವಿರುದ್ಧ ಖಾತೆ ತೆರೆಯದೆ ಔಟಾದರೆ, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದು ಬಿಟ್ಟರೆ, ಉಳಿದ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದರು.

ಪಾಕಿಸ್ತಾನ ವಿರುದ್ಧ ಅಜೇಯ 31 ರನ್, ವೆಸ್ಟ್ ಇಂಡೀಸ್ ವಿರುದ್ಧ ಔಟಾಗದೆ 44 ರನ್ ಮತ್ತು ಇಂಗ್ಲೆಂಡ್ ವಿರುದ್ಧ ಅಜೇಯ 47 ರನ್ ಮೂಲಕ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ 136 ರನ್‌ಗಳೊಂದಿಗೆ ಪಂದ್ಯಾವಳಿ ಮುಗಿಸಿದರು.

Richa Ghosh Only Indian Player Named In ICC Womens T20 World Cup Most Valuable Team

ಇನ್ನು ವಿಶ್ವದಾಖಲೆಯ ಆರನೇ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಎತ್ತಿಹಿಡಿದ ಆಸ್ಟ್ರೇಲಿಯಾ ತಂಡದ ನಾಲ್ವರು ಆಟಗಾರ್ತಿಯರು ಅತ್ಯಂತ ಮೌಲ್ಯಯುತ ತಂಡದ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ಅವರೆಂದರೆ, 47.25 ಸರಾಸರಿಯಲ್ಲಿ 189 ರನ್ ಮತ್ತು 4 ವಿಕೆಟ್‌ಗಳೊಂದಿಗೆ ಆಸ್ಟ್ರೇಲಿಯಾದ ವಿಕೆಟ್‌ಕೀಪರ್-ಆರಂಭಿಕ ಬ್ಯಾಟರ್ ಅಲಿಸ್ಸಾ ಹೀಲಿ, 36.66 ಸರಾಸರಿಯಲ್ಲಿ 110 ರನ್ ಮತ್ತು 12.50 ಎಕಾನಮಿಯಲ್ಲಿ 10 ವಿಕೆಟ್‌ಗಳೊಂದಿಗೆ ಆಲ್‌ರೌಂಡರ್ ಆಶ್ಲೀಗ್ ಗಾರ್ಡ್ನರ್, 15ರ ಎಕಾನಮಿ ದರದಲ್ಲಿ ಏಳು ವಿಕೆಟ್ ಪಡೆದ ಡಾರ್ಸಿ ಬ್ರೌನ್ ಮತ್ತು 12.50 ಎಕಾನಮಿ ದರದಲ್ಲಿ 10 ವಿಕೆಟ್ ಪಡೆದ ಮೆಗನ್ ಶುಟ್ ಕಾಣಿಸಿಕೊಂಡಿದ್ದಾರೆ.

Richa Ghosh Only Indian Player Named In ICC Womens T20 World Cup Most Valuable Team

ಐಸಿಸಿ ಮಹಿಳಾ 20 ವಿಶ್ವಕಪ್‌ನ ಅತ್ಯಂತ ಮೌಲ್ಯಯುತ ತಂಡದಲ್ಲಿ ಸ್ಥಾನ ಪಡೆದ ಇತರ ಆಟಗಾರ್ತಿಯರೆಂದರೆ ತಜ್ಮಿನ್ ಬ್ರಿಟ್ಸ್ (ದಕ್ಷಿಣ ಆಫ್ರಿಕಾ), ಲಾರಾ ವೊಲ್ವಾರ್ಡ್ಟ್ (ದಕ್ಷಿಣ ಆಫ್ರಿಕಾ), ನ್ಯಾಟ್-ಸ್ಕೀವರ್-ಬ್ರಂಟ್ (ನಾಯಕಿ, ಇಂಗ್ಲೆಂಡ್), ಕರಿಷ್ಮಾ ರಾಮ್ಹರಕ್ (ವೆಸ್ಟ್ ಇಂಡೀಸ್), ಶಬ್ನಿಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ) ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದರೆ, 12ನೇ ಆಟಗಾರ್ತಿಯಾಗಿ ಐರ್ಲೆಂಡ್‌ನ ಓರ್ಲಾ ಪ್ರೆಂಡರ್‌ಗಾಸ್ಟ್ ಅವರನ್ನು ಆಯ್ಕೆ ಮಾಡಲಾಗಿದೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಅತ್ಯಂತ ಮೌಲ್ಯಯುತ ತಂಡವನ್ನು ಕಾಮೆಂಟೇಟರ್ ಮತ್ತು ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಇಯಾನ್ ಬಿಷಪ್ ಮತ್ತು ಆಸ್ಟ್ರೇಲಿಯಾದ ಮಾಜಿ ಮಹಿಳಾ ಕ್ರಿಕೆಟರ್ ಮೆಲಾನಿ ಜೋನ್ಸ್ ಸೇರಿದಂತೆ ತಜ್ಞರ ಸಮಿತಿಯು ಆಯ್ಕೆ ಮಾಡಿದೆ.

Story first published: Monday, February 27, 2023, 18:28 [IST]
Other articles published on Feb 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+