ಕ್ರಿಕೆಟ್ ಜಗತ್ತಿನಲ್ಲಿ ಅದೆಷ್ಟೋ ದಾಖಲೆಗಳು ಅಳಿಸಲು ಆಗದೆ ಉಳಿಯುವಂತಿವೆ. ಅಂತಹ ಅದೆಷ್ಟೋ ದಾಖಲೆಗಳಿಗೆ ಭಾರತದ ಸಚಿನ್ ತೆಂಡೂಲ್ಕರ್ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಈ ದಿಗ್ಗಜ ಆಟಗಾರ ಮೋಡಿ ಆಟಕ್ಕೆ ವಿಶ್ವವೇ ತಲೆ ಬಾಗಿದೆ. ಇನ್ನು ಹಲವು ಸಚಿನ್ ಅವರ ದಾಖಲೆಗಳನ್ನು ಈಗಾಗಲೇ ಅಳಿಸಲಾಗಿದೆ.
ಸಚಿನ್ ಅವರ ಅದೆಷ್ಟೋ ದಾಖಲೆಗಳನ್ನು ಮುರಿಯುವುದು ಯಾವುದೇ ಆಟಗಾರನಿಗೆ ಸುಲಭದ ಕೆಲಸವಲ್ಲ. ಇದರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಇದೆ. ಸಚಿನ್ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ ರನ್ ಕಲೆ ಹಾಕಿದ ದಾಖಲೆ ಬರೆದಿದ್ದಾರೆ. ಇವರು ಅವರು 200 ಟೆಸ್ಟ್ ಪಂದ್ಯಗಳಲ್ಲಿ 53.78 ರ ಸರಾಸರಿಯಲ್ಲಿ 15921 ರನ್ ಗಳಿಸಿದ್ದಾರೆ. ಸಚಿನ್ ಅವರ ಈ ದಾಖಲೆಯನ್ನು ಮುರಿಯಲು ಇನ್ನು ಯಾವೊಬ್ಬ ಬ್ಯಾಟರ್‌ಗೆ ಸಾಧ್ಯವೇ ಆಗಲಿಲ್ಲ. ಆದರೆ ಈ ದಾಖಲೆ ಮುರಿಯಬಹುದಾದ ಆಟಗಾರನ ಹೆಸರನ್ನು ರಿಕಿ ಪಾಂಟಿಗ್ ಬಹಿರಂಗ ಪಡಿಸಿದ್ದಾರೆ.

ರಿಕಿ ಪಾಂಟಿಂಗ್ ಈ ದಾಖಲೆಯನ್ನು ಮುರಿಯ ಬಲ್ಲ ಆಟಗಾರನ ಹೆಸರು ಸೂಚಿಸಿದ್ದಾರೆ. ಈ ದಾಖಲೆಯನ್ನು ಯಾವುದೇ ಭಾರತೀಯ ಆಟಗಾರ ಮುರಿಯಲು ಆಗದು. ಈ ದಾಖಲೆಯನ್ನು ಇಂಗ್ಲೆಂಡ್ ತಂಡದ ಆಟಗಾರನೊಬ್ಬ ಮುರಿಯಬಲ್ಲ ಎಂದು ತಿಳಿಸಿದ್ದಾರೆ. ಇಂಗ್ಲೆಂಡ್ ತಂಡದ ಭರವಸೆಯ ಬ್ಯಾಟರ್ ಜೋ ರೂಟ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಬಹುದು ಎಂದಿದ್ದಾರೆ.
ಜೋ ರೂಟ್ ಅವರಿಗೆ ಈಗ 33 ವರ್ಷ. ಇನ್ನು ಅವರಲ್ಲಿ ಸಾಕಷ್ಟು ಕ್ರಿಕೆಟ್ ಬಾಕಿ ಇದೆ. ರೂಟ್ ಸಚಿನ್ ದಾಖಲೆಗಿಂತ ಕೇವಲ 4000 ರನ್ ಹಿಂದಿದ್ದಾರೆ. ರೂಟ್ ಇನ್ನು ಎಷ್ಟು ವರ್ಷಗಳಕಾಲ ಟೆಸ್ಟ್ ಕ್ರಿಕೆಟ್ ಆಡುತ್ತಾರೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ರೂಟ್ ಅವರಿಗೆ ನಾಲ್ಕು ಸಾವಿರ ರನ್‌ಗಳ ಗಡಿಯನ್ನು ದಾಟಲು ಇನ್ನು ಕನಿಷ್ಠ 3 ರಿಂದ 4 ವರ್ಷ ಬೇಕಾಗಬಹುದು. ರೂಟ್ ಒಂದು ವರ್ಷದಲ್ಲಿ 10 ರಿಂದ 14 ಟೆಸ್ಟ್ ಪಂದ್ಯಗಳನ್ನು ಆಡಿದರೆ, ಈ ದಾಖಲೆಯನ್ನು ಮುರಿಬಹುದು.
ಕಳೆದ ಸಾಲಿನ ರೂಟ್ ಪ್ರದರ್ಶನ ಮೊದಲಿಗಿಂತಲೂ ಉತ್ತಮವಾಗಿದೆ. ಈ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ರೂಟ್ ಈ ದಾಖಲೆಯನ್ನು ಮುರಿಯಬಹುದು ಎಂದು ತಿಳಿಸಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ರೂಟ್ ಯಶಸ್ವಿ ಆದರೆ, ಈ ದಾಖಲೆಯ ಸನಿಹಕ್ಕೆ ಬಂದು ನಿಲ್ಲಬಹುದು.

ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರೂಟ್‌ಗೆ ಏಳನೇ ಸ್ಥಾನ. ರೂಟ್ ಈ ವರೆಗೆ 143 ಟೆಸ್ಟ್ ಪಂದ್ಯಗಳನ್ನು ಇಂಗ್ಲೆಂಡ್ ಪರ ಆಡಿದ್ದು, 12027 ರನ್ ಸಿಡಿಸಿದ್ದಾರೆ. ಇಂಗ್ಲೆಂಡ್ ಮುಂದಿನ ದಿನಗಳಲ್ಲಿ ಶ್ರೀಲಂಕಾ ವಿರುದ್ಧ 3 ಟೆಸ್ಟ್ ಪಂದ್ಯ ಆಡಲಿದೆ. ಈ ವೇಳೆ ಅವರು ಸಂಗಕ್ಕಾರ ಮತ್ತು ಅಲೆಸ್ಟರ್ ಕುಕ್ ಅವರ ದಾಖಲೆಯನ್ನು ಹಿಂದಿಕ್ಕಬಹುದು. ಸಂಗಕ್ಕಾರ ಟೆಸ್ಟ್‌ನಲ್ಲಿ 12400 ರನ್ ಗಳಿಸಿದ್ದರೆ, ಕುಕ್ ಅವರ ಹೆಸರಿನಲ್ಲಿ 12472 ರನ್ ಗಳಿಸಿದ್ದಾರೆ.
ರಿಕಿ ಪಾಂಟಿಂಗ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಎರಡನೇ ಆಟಗಾರ. ಇವರು ಒಟ್ಟು 168 ಪಂದ್ಯಗಳನ್ನು ಆಸೀಸ್ ಪರ ಆಡಿದ್ದು 13378 ರನ್‌ಗಳನ್ನು ಕಲೆ ಹಾಕಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಕಲೆ ಹಾಕಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.