Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ricky Ponting: ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನು ಈ ಪ್ಲೇಯರ್‌ ಮುರಿಯಲಿದ್ದಾರೆ ರಿಕ್ಕಿ ಪಾಂಟಿಂಗ್‌ ಭವಿಷ್ಯ

ಪಾಕಿಸ್ತಾನ ಆಯೋಜಿತ ಚಾಂಪಿಯನ್ಸ್‌ ಟ್ರೋಫಿ 2025 ನಡೆಯುತ್ತಿದೆ. ಟೀಮ್ ಇಂಡಿಯಾ ಸಹ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಈ ಟೂರ್ನಿ ಹೈ ಬ್ರೀಡ್ ಮಾದರಿಯಲ್ಲಿ ನಡೆಯುತ್ತಿದೆ. ಈ ಮೆಗಾ ಟೂರ್ನಿಯಲ್ಲಿ ಬಿಗ್ ಸ್ಟಾರ್ ಪ್ಲೇಯರ್‌ಗಳು ದೊಡ್ಡ ಸಾಧನೆಯನ್ನು ಮಾಡುತ್ತಿದ್ದಾರೆ. ಈ ವೇಳೆ ಟೀಮ್ ಇಂಡಿಯಾ ಸಹ ಸ್ಥಿರ ಪ್ರದರ್ಶನ ನೀಡುತ್ತಿದೆ. ತಂಡದ ಆಟದ ಬಗ್ಗೆ ಹಲವು ಆಟಗಾರರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಈ ಸಾಲಿಗೆ ಹಲವು ಮಾಜಿ ಆಟಗಾರರು ಸೇರಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ರಿಕ್ಕಿ ಪಾಂಟಿಂಗ್ ಸಹ ಈ ಸಾಲಿಗೆ ಸೇರಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿಯ "ಎ" ಗುಂಪಿನ ಪಂದ್ಯದಲ್ಲಿ ಭಾರತ ಹಾಗೂ ಪಾಕ್‌ ತಂಡಗಳು ದುಬೈನಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆರು ವಿಕೆಟ್‌ಗಳಿಂದ ಪಾಕ್ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಹತ್ತಿರವಾಗಿತ್ತು. ಈ ವೇಳೆ ಸೂಪರ್ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಇವರು ಈ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ. ವಿರಾಟ್ ಆಟ ಕಂಡು ರಿಕ್ಕಿ ಪಾಂಟಿಂಗ್ ದೊಡ್ಡ ಹೇಳಿಕೆ ನೀಡಿದ್ದಾರೆ.

Ricky Ponting Predicts Virat Kohli Will Break Sachin Tendulkar s ODI Runs Record

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ಗಿಂತ ಉತ್ತಮ ಆಟಗಾರನನ್ನು ನೋಡಿಲ್ಲ. ವಿರಾಟ್‌, ಸಚಿನ್ ತೆಂಡೂಲ್ಕರ್ ಅವರ ಹೆಚ್ಚು ರನ್‌ಗಳ ದಾಖಲೆಯನ್ನು ಮುರಿಯಬಲ್ಲರು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 14 ಸಾವಿರ ರನ್ ಕಲೆ ಹಾಕಿದ ದಾಖಲೆಯನ್ನು ಮಾಡಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಈ ದಾಖಲೆ ಮಾಡಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೇ ಪಂದ್ಯದಲ್ಲಿ ವಿರಾಟ್‌ ಶತಕ ಬಾರಿಸಿದರು. ಇದು ಅವರ ಏಕದಿನ ವೃತ್ತಿ ಜೀವನದ 51ನೇ ಶತಕವಾಗಿದೆ.

Ricky Ponting Predicts Virat Kohli Will Break Sachin Tendulkar s ODI Runs Record

ಪಾಂಟಿಂಗ್‌ ಹೇಳಿದ್ದೇನು?

ವಿರಾಟ್‌ ಕೊಹ್ಲಿ ಒನ್‌ ಡೇ ಫಾರ್ಮೆಟ್‌ನ ಸರ್ವಕಾಲಿಕ ಬೆಸ್ಟ್ ಬ್ಯಾಟರ್. ವಿರಾಟ್‌ಗೆ ಸಚಿನ್‌ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸುವ ಎಲ್ಲ ಅವಕಾಶಗಳು ಇವೆ. ಸದ್ಯ ವಿರಾಟ್‌ ಸಚಿನ್‌ರಿಗಿಂತ 4241 ರನ್‌ಗಳಿಂದ ಹಿಂದಿದ್ದಾರೆ. ಈ ಗುರಿಯನ್ನು ಕೊಹ್ಲಿ ಮುಟ್ಟಬಲ್ಲರು ಎಂದು ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ವಿರಾಟ್‌ ಫಿಟ್‌ ಆಗಿದ್ದು, ಮೈದಾನದಲ್ಲಿ ಶ್ರಮಿಸುತ್ತಿದ್ದಾರೆ. ಅವರ ಹಸಿವು ಇನ್ನು ಕಡಿಮೆ ಆಗಿಲ್ಲ. ವಿರಾಟ್‌ಗೆ ರನ್‌ ಬಾರಿಸುವ ಬಯಕೆ ಇದ್ದರೆ, ಇವರು ಸಚಿನ್‌ ತೆಂಡೂಲ್ಕರ್ ಅವರ ದಾಖಲೆ ಮುರಿಯಬಹುದು ಎಂದಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿಯ ಪಾಕ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಅಮೋಘ ಬ್ಯಾಟಿಂಗ್ ನಡೆಸಿದ್ದರು. ಈ ಪಂದ್ಯದಲ್ಲಿ ವಿರಾಟ್‌ 111 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 90 ರ ಸರಾಸರಿಯಲ್ಲಿ ಅಜೇಯ 100 ರನ್‌ ಸಿಡಿಸಿದರು. ಈ ಮೂಲಕ ಕಳೆದ ಕೆಲವು ದಿನಗಳಿಂದ ಹುಡುಕುತ್ತಿದ್ದ ಫಾರ್ಮ್‌ಗೆ ಮರಳಿದರು.

Story first published: Tuesday, February 25, 2025, 14:00 [IST]
Other articles published on Feb 25, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+