Rinku Singh ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ: ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ
ವಡೋದರಾ: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಐದು ಟಿ20 ಪಂದ್ಯಗಳ ಸರಣಿಯ ನಾಲ್ಕನೇ ಪಂದ್ಯ ಬುಧವಾರ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. 50 ರನ್‌ಗಳಿಂದ ಗೆದ್ದ ನ್ಯೂಜಿಲೆಂಡ್ ಭರ್ಜರಿ ಜಯ ದಾಖಲಿಸಿದೆ. ಸರಣಿಯಲ್ಲಿ ಮೊದಲ ಗೆಲುವಿನ ನಗೆ ಬೀರಿರುವ ಕಿವೀಸ್ ಅಬ್ಬರಿಸಿದೆ. ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ಪರ ಶಿವಂ ದುಬೆ ಅಬ್ಬರದ ಅರ್ಧಶತಕ ಬಾರಿಸಿ ಮಿಂಚಿದರೆ, ರಿಂಕು ಸಿಂಗ್ ಸಹ ಸ್ಥಿರ ಬ್ಯಾಟಿಂಗ್ ನಡೆಸಿದರು. ಅಲ್ಲದೆ ರಿಂಕು ಸಹ ಈ ಪಂದ್ಯದಲ್ಲಿ ವಿಶೇಷ ಸಾಧನೆಯನ್ನು ಮಾಡಿದ್ದಾರೆ.
ನಾಲ್ಕನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ನಡೆಸಿತು. ನ್ಯೂಜಿಲೆಂಡ್ ತಂಡದ ಆರಂಭಿಕರು ಭರ್ಜರಿ ಆರಂಭ ನೀಡಿದ್ದರಿಂದ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಅಲೌಟ್ ಆಯಿತು.

ಬುಧವಾರ ನಡೆದ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟರ್‌ಗಳು ರನ್ ಕಲೆ ಹಾಕಿ ಅಬ್ಬರಿಸಿದರು. ಭಾರತದ ಪರ ಮೊದಲ ವಿಕೆಟ್ ಕುಲ್‌ದೀಪ್ ಯಾದವ್ ಪಡೆದರು. ಇವರು ಡೆವೋನ್ ಕಾನ್ವೆ ಅವರಿಗೆ ಖೆಡ್ಡಾ ತೋಡಿದರು. ಕುಲ್‌ದೀಪ್ ಯಾದವ್ ಭರ್ಜರಿ ಕ್ಯಾಚ್ ಪಡೆದು ಮಿಂಚಿದರು. ಕಿವೀಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಆಟಗಾರರು ಸ್ಥಿರ ಪ್ರದರ್ಶನ ನೀಡಲಿಲ್ಲ. ಪರಿಣಾಮ ಒಂದೊಂದು ವಿಕೆಟ್ ಬೀಳುತ್ತಾ ಸಾಗಿತು.
ರಿಂಕು ಕಮಾಲ್
ಭಾರತದ ಪರ ಈ ಪಂದ್ಯದಲ್ಲಿ ರಿಂಕು ಸಿಂಗ್ ಅಬ್ಬರಿಸಿದರು. ಇವರು ಸತತ ಕ್ಯಾಚ್‌ಗಳನ್ನು ಪಡೆದು ಮಿಂಚಿದರು. 18ನೇ ಓವರ್‌ನಲ್ಲಿ ಜಾಕ್ ಫೋಕ್ಸ್ ಅವರ ಕ್ಯಾಚ್ ಪಡೆದ ರಿಂಕು ಹೊಸ ಇತಿಹಾಸ ನಿರ್ಮಿಸಿದರು. ಈ ಪಂದ್ಯದಲ್ಲಿ ರಿಂಕು ಸಿಂಗ್ ಒಟ್ಟು 4 ಕ್ಯಾಚ್ ಪಡೆದರು. ಈ ಮೂಲಕ ಟಿ20 ಕ್ರಿಕೆಟ್‌ನ ಒಂದೇ ಪಂದ್ಯದಲ್ಲಿ ನಾಲ್ಕು ಕ್ಯಾಚ್ ಪಡೆದ ಎರಡನೇ ಭಾರತೀಯ ಆಟಗಾರ ಎಂಬ ಶ್ರೇಯ ಇವರದ್ದಾಯಿತು. ಈ ಪ್ರದರ್ಶನದ ಮೂಲಕ ರಿಂಕು, ಅಜಿಂಕ್ಯ ರಹಾನೆ ಸಾಧನೆಯ ಸಮಕ್ಕೆ ನಿಂತರು.

ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತೀಯ ಫೀಲ್ಡರ್‌ಗಳು
ಅಜಿಂಕ್ಯ ರಹಾನೆ - ಇಂಗ್ಲೆಂಡ್ ವಿರುದ್ಧ 4 ಕ್ಯಾಚ್‌ಗಳು (2014)
ರಿಂಕು ಸಿಂಗ್ - ನ್ಯೂಜಿಲೆಂಡ್ ವಿರುದ್ಧ 4 ಕ್ಯಾಚ್‌ಗಳು (2026)
ರೋಹಿತ್ ಶರ್ಮಾ - ದಕ್ಷಿಣ ಆಫ್ರಿಕಾ ವಿರುದ್ಧ 3 ಕ್ಯಾಚ್‌ಗಳು (2012)
ಸುರೇಶ್ ರೈನಾ - ದಕ್ಷಿಣ ಆಫ್ರಿಕಾ ವಿರುದ್ಧ 3 ಕ್ಯಾಚ್‌ಗಳು (2012)
ಇದೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಭರವಸೆಯ ಆಲ್‌ರೌಂಡರ್ ಶಿವಂ ದುಬೆ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಈ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications