Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಿಷಭ್ ಪಂತ್ ಫಾರ್ಮ್, ಟೀಂ ಇಂಡಿಯಾಗೆ ತಲೆ ನೋವಾಗಲಿದೆ: ಡೇನಿಯಲ್ ವೆಟ್ಹೋರಿ

Daniel vettori

ಟೀಂ ಇಂಡಿಯಾ ಎಲ್ಲಾ ಮೂರು ವಿಭಾಗದಲ್ಲಿ ನ್ಯೂಜಿಲೆಂಡ್ ತಂಡವನ್ನ ಹಿಂದಿಕ್ಕಿ ಟಿ20 ಸರಣಿಯಲ್ಲಿ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ ಎಂದು ನ್ಯೂಜಿಲೆಂಡ್‌ನ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಹೇಳಿದ್ದಾರೆ.

ಭಾರತವು ಉತ್ತಮ ಪ್ರದರ್ಶನ ತೋರಿದರೂ ಸಹ ಕೆಲವು ಕ್ಷೇತ್ರಗಳಲ್ಲಿ ತಮ್ಮನ್ನು ಸುಧಾರಿಸಿಕೊಳ್ಳಬೇಕು ಎಂದು ವೆಟ್ಟೋರಿ ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಸರಣಿಯಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಸ್ಥಿರ ಪ್ರದರ್ಶನ ನೀಡಿದರು. ಆದರೆ ತಂಡದ ಮಧ್ಯಮ ಕ್ರಮಾಂಕವು ಸಂಪೂರ್ಣ ಉತ್ತಮ ಸ್ಥಿತಿಯಲ್ಲಿರಲಿಲ್ಲ. ಅದ್ರಲ್ಲು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಫಾರ್ಮ್ ವೈಫಲ್ಯ ಅನುಭವಿಸುತ್ತಿದ್ದಾರೆ ಎಂದು ವೆಟ್ಟೋರಿ ಆ ಅಂಶವನ್ನ ಎತ್ತಿಹಿಡಿದಿದ್ದಾರೆ.

ವೆಟ್ಟೋರಿ ಪ್ರಕಾರ, ಪಂತ್ ಅವರ ಫಾರ್ಮ್ ಭಾರತಕ್ಕೆ ಪ್ರಮುಖ ಕಾಳಜಿಯಾಗಿದೆ. ಸ್ಫೋಟಕ ಬ್ಯಾಟ್ಸ್‌ಮನ್ ತಂಡದಲ್ಲಿ ವಿಶೇಷವಾಗಿ ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ ಅವರ ಪಾತ್ರದ ಬಗ್ಗೆ ಸ್ವಲ್ಪ ಅಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

"ಅವರು ಟಿ20 ಕ್ರಿಕೆಟ್‌ನಲ್ಲಿ ಅವರ ಗತಿಯನ್ನು ಸರಿಯಾಗಿ ಪಡೆದಿಲ್ಲ. ನಿರ್ದಿಷ್ಟವಾಗಿ ಈ ಸರಣಿಯಲ್ಲಿ ಅವರು ತಮ್ಮ ಪಾತ್ರವನ್ನು ಅರ್ಥಮಾಡಿಕೊಂಡಿಲ್ಲ. ಕೆಲವೊಮ್ಮೆ ಅವನು ಅತಿಯಾಗಿ ಜಾಗರೂಕನಾಗಿರುತ್ತಾನೆ ಮತ್ತು ನಂತರ ಅವನು ಅಜಾಗರೂಕನಾಗಿರುತ್ತಾನೆ. ಒಬ್ಬ ಶ್ರೇಷ್ಠ ಟಿ20 ಬ್ಯಾಟ್ಸ್‌ಮನ್ ಉತ್ತಮವಾಗಿ ಬ್ಯಾಟಿಂಗ್ ಮಾಡುವುದನ್ನು ನೀವು ನೋಡಿದಾಗ, ಅದು ಫ್ಳೋ, ವೇಗ ಮತ್ತು ಆ ಲಯವನ್ನು ಸಹ ನೀವು ಕಾಣುತ್ತೀರಿ. ಆದ್ರೆ ಆತ ನಿಜವಾಗಿಯೂ ಅದನ್ನು ಇನ್ನೂ ಪಡೆದಿಲ್ಲ, "ಎಂದು ಡೇನಿಯಲ್ ವೆಟ್ಟೋರಿ ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಜೊತೆ ಮಾತನಾಡುವಾಗ ಹೇಳಿದರು.

ಮೂರು ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ, ಪಂತ್ ನ್ಯೂಜಿಲೆಂಡ್ ವಿರುದ್ಧ ಕೇವಲ 32 ರನ್ ಗಳಿಸಲು ಸಾಧ್ಯವಾಯಿತು. ಇನ್ನು ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ರಿಷಭ್ ಪಂತ್‌ಗೆ ವಿಶ್ರಾಂತಿ ನೀಡಲಾಗಿದೆ.

ರಿಷಭ್ ಪಂತ್ ಅವರ ಮೇಲಿನ ಜವಾಬ್ದಾರಿ ಅರಿತು ಬ್ಯಾಟಿಂಗ್ ಸುಧಾರಿಸಿಕೊಂಡರೆ ಉತ್ತಮ ಇಲ್ಲದೇ ಹೋದಲ್ಲಿ ಟೀಂ ಇಂಡಿಯಾ ಇಶಾನ್ ಕಿಶನ್ ಕಡೆಗೆ ಗಮನ ಹರಿಸಬಹುದು. ಹೀಗಾಗಿ ಪಂತ್ ಅವರು ಸಿಕ್ಕ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

Story first published: Tuesday, November 23, 2021, 10:19 [IST]
Other articles published on Nov 23, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+