For Quick Alerts
ALLOW NOTIFICATIONS  
For Daily Alerts
 

ಧೋನಿಯನ್ನು ಮೀರಿಸಿ ವಿಶ್ವದಾಖಲೆ ಸರಿಗಟ್ಟಿದ ರಿಷಬ್ ಪಂಥ್‌

INDIA vs AUSTRALIA : ಧೋನಿಯನ್ನು ಮೀರಿಸಿದ ರಿಷಬ್ ಪಂಥ್‌..! | Oneindia Kannada
Rishab Pant set a new record by taking 11 catches in one match

ಅಡಿಲೇಡ್, ಡಿಸೆಂಬರ್ 10: ಭಾರತವು 11 ವರ್ಷಗಳ ನಂತರ ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಪಂದ್ಯವನ್ನು ಗೆದ್ದಿದೆ. ಈ ಐತಿಹಾಸಿಕ ಪಂದ್ಯದಲ್ಲಿ ತಂಡದ ಸದಸ್ಯರಾಗಿದ್ದ ರಿಷಬ್‌ ಪಂಥ್‌ ಸಹ ಒಂದು ವಿನೂತನ ವಿಶ್ವದಾಖಲೆ ಮಾಡಿದ್ದಾರೆ.

ಹೌದು, ಎಂ.ಎಸ್.ಧೋನಿ ಸಹಿತ ಭಾರತದ ಹಿರಿಯ ವಿಕೆಟ್‌ ಕೀಪರ್‌ಗಳ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿ ತಾವೇ ಒಂದು ಹೊಸ ದಾಖಲೆ ಬರೆದಿದ್ದಾರೆ ರಿಷಬ್ ಪಂಥ್‌.

ಅಡಿಲೇಡ್‌ನಲ್ಲಿ ನಡೆದ ಮೊದಲ ಆಸ್ಟ್ರೇಲಿಯಾ-ಭಾರತ ಟೆಸ್ಟ್‌ನಲ್ಲಿ ರಿಷಬ್ ಪಂಥ್‌ ಒಟ್ಟು 11 ಕ್ಯಾಚುಗಳನ್ನು ಪಡೆದಿದ್ದಾರೆ. ಭಾರತದ ವಿಕೆಟ್ ಕೀಪರ್ ಒಬ್ಬ ಟೆಸ್ಟ್‌ ಪಂದ್ಯವೊಂದರಲ್ಲಿ ಇಷ್ಟು ಕ್ಯಾಚುಗಳನ್ನು ಪಡೆದ ಇತಿಹಾಸವೇ ಇಲ್ಲ.

11 ಕ್ಯಾಚ್‌ಗಳನ್ನು ಪಡೆದಿರುವ ರಿಷಬ್ ಪಂತ್‌ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಇಷ್ಟೆ ಕ್ಯಾಚುಗಳನ್ನು ಪಡೆದಿರುವ ಎ.ಬಿ.ಡಿವಿಲಿಯರ್ಸ್‌ ಮತ್ತು ಜಾಕ್ ರಸಲ್ಸ್‌ ಅವರ ಜೊತೆಯಾಗಿ ನಿಂತಿದ್ದಾರೆ.

ಟೆಸ್ಟ್‌ ಒಂದರಲ್ಲಿ ಅತಿ ಹೆಚ್ಚು ಕ್ಯಾಚುಗಳನ್ನು ಪಡೆದ ಭಾರತದ ವಿಕೆಟ್ ಕೀಪರ್‌ ಎಂಬ ಹಿರಿಮೆಗೆ ರಿಷಬ್ ಪಾತ್ರವಾಗಿದ್ದಾರೆ. ಅವರು ವೃದ್ಧಿಮಾನ್ ಸಹಾ ಹಾಗೂ ಧೋನಿ ಅವರ ದಾಖಲೆಗಳನ್ನು ಅಳಿಸಿ ಹಾಕಿದ್ದಾರೆ. ಸಹಾ ಪಂದ್ಯವೊಂದರಲ್ಲಿ 10 ಕ್ಯಾಚು ಪಡೆದಿದ್ದರೆ, ಧೋನಿ 9 ಕ್ಯಾಚು ಪಡೆದಿದ್ದರು.

ಮೊದಲ ಟೆಸ್ಟ್‌ನಲ್ಲಿ ಬ್ಯಾಟಿನಿಂದ ಸಾಧಾರಣ ಪ್ರದರ್ಶನವನ್ನಷ್ಟೆ ತೋರಿದ್ದ ರಿಷಬ್ ಪಂಥ್‌ ಕೀಪಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 25 ರನ್ ಗಳಿಸಿದ ಪಂಥ್‌ ಎರಡನೇ ಇನ್ನಿಂಗ್ಸ್‌ನಲ್ಲಿ 28 ರನ್‌ ಗಳಿಸಲಷ್ಟೇ ಶಕ್ತರಾದರು.

Story first published: Monday, December 10, 2018, 12:30 [IST]
Other articles published on Dec 10, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+