Rishabh Pant: ನೆಟ್ಸ್‌ನಲ್ಲಿ 140 Kmph ವೇಗದ ಬೌಲಿಂಗ್ ದಾಳಿ ಎದುರಿಸಿದ ರಿಷಭ್ ಪಂತ್
ಭಾರತ ತಂಡದ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್‌ಮನ್ ರಿಷಭ್ ಪಂತ್ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡು, ಸದ್ಯ ಚೇತರಿಸಿಕೊಂಡಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ ಮಾಡುವತ್ತ ಸಣ್ಣ ಹೆಜ್ಜೆಗಳನ್ನಿಡುತ್ತಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ರಿಷಭ್ ಪಂತ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನರ್ವಸತಿ ಪಡೆಯುತ್ತಿದ್ದು, ನೆಟ್ಸ್‌ನಲ್ಲಿ ಬ್ಯಾಟಿಂಗ್ ಪುನರಾರಂಭಿಸಿದ್ದಾರೆ. ಅಲ್ಲದೆ ವೇಗದ ಬೌಲರ್‌ಗಳನ್ನು ಸಹ ಎದುರಿಸುತ್ತಿದ್ದಾರೆ.

ಈ ಹಿಂದೆ ರಿಷಭ್ ಪಂತ್ ಬ್ಯಾಟಿಂಗ್ ಪುನರಾರಂಭಿಸಿದಾಗ, ಅವರು ಕೇವಲ ಥ್ರೋಡೌನ್‌ಗಳನ್ನು ಎದುರಿಸುತ್ತಿದ್ದರು. ಇತ್ತೀಚೆಗೆ 140 Kmph ವೇಗದ ಬೌಲಿಂಗ್ ದಾಳಿಯನ್ನು ಎದುರಿಸುತ್ತಿದ್ದಾರೆ.
ಸ್ಟಾರ್ ಭಾರತೀಯ ಕ್ರಿಕೆಟಿಗನ ಕುರಿತ ಈ ಸುದ್ದಿ ಭಾರತೀಯ ಕ್ರಿಕೆಟ್ ಮತ್ತು ಅಭಿಮಾನಿಗಳು ಸಂತಸಗೊಂಡಿದ್ದಾರೆ. ಆದರೂ, 2023ರ ಏಕದಿನ ವಿಶ್ವಕಪ್‌ಗೆ ಮುನ್ನ ರಿಷಭ್ ಪಂತ್ ಪುನರಾಗಮನ ಮಾಡುವ ಸಾಧ್ಯತೆ ಕಡಿಮೆ ಇದೆ.
ನೆಟ್ಸ್‌ನಲ್ಲಿ ವೇಗದ ಬೌಲರ್‌ಗಳನ್ನು ಎದುರಿಸುವಾಗ ರಿಷಭ್ ಪಂತ್ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿಲ್ಲ ಎಂದು ರೆವ್‌ಸ್ಪೋರ್ಟ್ಜ್ ವರದಿ ಮಾಡಿದೆ. 25ರ ಹರೆಯದ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಕೂಡ ಆರಂಭಿಸಿದ್ದಾರೆ.
ಇನ್ನು ರಿಷಭ್ ಪಂತ್ ಚೇತರಿಕೆಯ ಮೇಲೆ ಕಣ್ಣಿಟ್ಟಿರುವ ವೈದ್ಯಕೀಯ ಸಿಬ್ಬಂದಿ ಹೆಚ್ಚು ಗ್ಲೋವ್‌ವರ್ಕ್ ಅಭ್ಯಾಸದ ಮೂಲಕ ಆತನಿಗೆ ಒತ್ತಡ ಹೇರುತ್ತಿಲ್ಲ. ಪಂತ್ ಬ್ಯಾಟಿಂಗ್ ಮಾಡುವಾಗ ಕ್ರೀಸ್‌ನಲ್ಲಿ ಸಣ್ಣ ಚಲನೆ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಬ್ಯಾಟಿಂಗ್ ಮಾಡುವಾಗ ದೊಡ್ಡ ಚಲನೆ ಮಾಡುವುದು ರಿಷಭ್ ಪಂತ್‌ಗೆ ಇನ್ನೂ ಕಷ್ಟವಾಗುತ್ತಿದೆ. ಪಂತ್ ಚೇತರಿಸಿಕೊಳ್ಳುವ ಉಸ್ತುವಾರಿ ನೋಡಿಕೊಳ್ಳುತ್ತಿರುವ ವೈದ್ಯಕೀಯ ತಂಡದ ಪ್ರಕಾರ, ರಿಷಭ್ ಪಂತ್ ಅವರು ಒಂದೆರಡು ತಿಂಗಳಲ್ಲಿ ದೊಡ್ಡ ಚಲನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ.
ಮುಂದಿನ ವರ್ಷ ಜನವರಿಯಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಪುನರಾಗಮನ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ತ್ವರಿತವಾಗಿ ಚೇತರಿಸಿಕೊಂಡಿರುವ ರಿಷಭ್ ಪಂತ್ ಬೆಂಗಳೂರಿನ ಎನ್‌ಸಿಎಯಲ್ಲಿನ ವೈದ್ಯಕೀಯ ಸಿಬ್ಬಂದಿಯನ್ನು ಅಚ್ಚರಿಗೊಳಿಸಿದ್ದರು. ತಮ್ಮ ಮನೋಬಲದಿಂದ ಚೇತರಿಸಿಕೊಳ್ಳಲು ಶ್ರಮಿಸಿದ್ದಾರೆ. ಅಲ್ಲದೆ, ದಿನನಿತ್ಯದ ನಿಶ್ಚಿತ ದಿನಚರಿಗಳನ್ನು ಮಾಡುತ್ತಿದ್ದಾರೆ. ಒಂದು ತಿಂಗಳ ಹಿಂದೆ, ಪಂತ್ ಊರುಗೋಲುಗಳ ಬೆಂಬಲದೊಂದಿಗೆ ನಡೆಯುವುದನ್ನು ಕೈಬಿಟ್ಟರು.
ಸ್ಫೋಟಕ ಬ್ಯಾಟರ್ ರಿಷಭ್ ಪಂತ್ ಶೀಘ್ರದಲ್ಲೇ ಮೈದಾನಕ್ಕಿಳಿಯಲಿದ್ದಾರೆ ಎಂದು ಭಾರತ ಕ್ರಿಕೆಟ್ ಅಭಿಮಾನಿಗಳು ಆಶಿಸುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದ ಪಂತ್ ಅವರು ವಿಶ್ವಕಪ್ ಆಡುವ ಸಾಧ್ಯತೆ ಇಲ್ಲ ಎಂಬ ಸುದ್ದಿ ಹೊರಬಿದ್ದಿದೆ.
ಇಷ್ಟೊತ್ತಿಗೆ ಫಿಟ್ ಆಗಿದ್ದರೆ, ರಿಷಭ್ ಪಂತ್ ಸುಲಭವಾಗಿ 2023ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಭಾರತ ತಂಡಕ್ಕೆ ಆಯ್ಕೆಯಾಗುತ್ತಿದ್ದರು. ಪಂತ್ 30 ಏಕದಿನ ಪಂದ್ಯಗಳನ್ನು ಆಡಿದ್ದು, 34.6ರ ಸರಾಸರಿಯಲ್ಲಿ 865 ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications