ತನಗಿಂತ ದೊಡ್ಡವಳ ಜತೆ ಲವ್‌ನಲ್ಲಿ ಬಿದ್ದ ಪಂತ್: ವಯಸ್ಸಿನ ಅಂತರವೆಷ್ಟು? ಪಂತ್ ಪ್ರೇಯಸಿಯ ಉದ್ಯೋಗ?

ಸದ್ಯ ವಿಶ್ವ ಕ್ರಿಕೆಟ್‍ನಲ್ಲಿ ಸದ್ದು ಮಾಡುತ್ತಿರುವ ಭಾರತೀಯ ಕ್ರಿಕೆಟಿಗರಲ್ಲಿ ರಿಷಭ್ ಪಂತ್ ಕೂಡ ಓರ್ವರು. ಟೀಮ್ ಇಂಡಿಯಾ ಪರ ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯುವ ರಿಷಭ್ ಪಂತ್ ವಿದೇಶಿ ನೆಲಗಳಲ್ಲಿ ಅಬ್ಬರದ ಶತಕಗಳನ್ನು ಸಿಡಿಸುವುದರ ಮೂಲಕ ಸಾಕಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಮುಂಬರುವ ಪ್ರತಿಷ್ಠಿತ ಟೂರ್ನಿಗಳಾದ ಏಷ್ಯಾಕಪ್ ಹಾಗೂ ಟಿ ಟ್ವೆಂಟಿ ವಿಶ್ವಕಪ್‌ಗಳಿಗೆ ಪ್ರಕಟವಾಗುವ ಭಾರತ ತಂಡದಲ್ಲಿ ಖಡಾಖಂಡಿತವಾಗಿ ಸ್ಥಾನ ಗಿಟ್ಟಿಸಿಕೊಳ್ಳುವ ಆಟಗಾರನಾಗಿರುವ ರಿಷಭ್ ಪಂತ್ ಸದ್ಯ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿದ್ದಾರೆ. ಮೂಲತಃ ಉತ್ತರಾಖಂಡದ ಈ ಪ್ರತಿಭೆ ಸಾಮಾನ್ಯ ಕುಟುಂಬದಿಂದ ಬೆಳೆದು ಬಂದು ಸದ್ಯ ಸ್ಟಾರ್ ಆಟಗಾರನಾಗಿ ಮಿಂಚುತ್ತಿದ್ದು, ಸಾಮಾನ್ಯವಾಗಿ ಪ್ರತಿ ಕ್ರಿಕೆಟಿಗರ ಜೀವನದಲ್ಲಿ ಕೇಳಿಬರುವಂತೆ ರಿಷಭ್ ಪಂತ್ ಜೀವನದಲ್ಲಿಯೂ ಸಹ ಪ್ರೀತಿ ಪ್ರೇಮದ ವಿಚಾರವಾಗಿ ಸಾಕಷ್ಟು ಸುದ್ದಿಗಳಿವೆ.
ಹೌದು, 24 ವರ್ಷದ ರಿಷಭ್ ಪಂತ್ ಕೂಡ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವಿಷಯ 2019ರ ಹೊಸ ವರ್ಷಾಚರಣೆಯಿಂದಲೇ ಬಯಲಾಗಿತ್ತು. ಅಂದು ರಿಷಭ್ ಪಂತ್ ಜತೆ ಹೊಸವರ್ಷದ ಸಂಭ್ರಮಾಚರಣೆಯನ್ನು ಆಚರಿಸಿದ ನಂತರ ಯುವತಿಯೋರ್ವಳು ರಿಷಭ್ ಪಂತ್ ಜತೆಗಿನ ಚಿತ್ರವನ್ನು ಹಂಚಿಕೊಂಡು ಬರೆದುಕೊಂಡಿದ್ದ ಸಾಲುಗಳನ್ನು ಓದಿದ್ದ ನೆಟ್ಟಿಗರು ಇಬ್ಬರೂ ಸಹ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬುದನ್ನು ಅರಿಯುವುದಕ್ಕೆ ಕ್ಷಣಗಳು ಸಾಕಾಗಿತ್ತು. ಹೀಗೆ ರಿಷಭ್ ಪಂತ್ ಪ್ರೀತಿಸುತ್ತಿರುವ ಆ ಯುವತಿ ಯಾರು ಮತ್ತು ಆಕೆಯ ಕುರಿತಾದ ಕಿರು ವಿವರ ಈ ಕೆಳಕಂಡಂತಿದೆ.

ರಿಷಭ್ ಪಂತ್ ಪ್ರೇಯಸಿ ಇಶಾ ನೀಗಿ
ಮೂಲತಃ ಮುಂಬೈ ಮೂಲದ ಇಶಾ ನೇಗಿ ಬಿಎ ಪದವೀಧರೆಯಾಗಿದ್ದು, ನೊಯಿಡಾದ ಅಮಿಟಿ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿದ್ದಾರೆ. ಸದ್ಯ ಡೆಹ್ರಾಡೂನ್ ನಗರದಲ್ಲಿರುವ ತಮ್ಮ ಕುಟುಂಬದ ಉದ್ಯಮವೊಂದರಲ್ಲಿ ಇಶಾ ನೀಗಿ ವಾಣಿಜ್ಯೋದ್ಯಮಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ವಾಣಿಜ್ಯೋದ್ಯಮಿ ಆಗಿರುವುದರ ಜತೆಗೆ ಇಂಟೀರಿಯರ್ ಡಿಸೈನರ್ ಆಗಿ ಕೂಡ ಇಶಾ ನೇಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು 2019ರ ಜನವರಿಯಲ್ಲಿ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ರಿಷಭ್ ಪಂತ್ ಜತೆಗಿನ ಫೋಟೋವನ್ನು ಹಂಚಿಕೊಂಡ ಇಶಾ ನೇಗಿ 'ಮೈ ಮ್ಯಾನ್, ಮೈ ಸೋಲ್ ಮೇಟ್, ಮೈ ಬೆಸ್ಟ್ ಫ್ರೆಂಡ್, ದ ಲವ್ ಆಫ್ ಲೈಫ್' ಎಂದು ಬರೆದುಕೊಂಡಿದ್ದರು. ಈ ಮೂಲಕ ಇಬ್ಬರು ಸಹ ಪರಸ್ಪರ ಪ್ರೀತಿಯಲ್ಲಿರುವ ವಿಚಾರ ಬಹಿರಂಗವಾಯಿತು. ನಂತರ ಇಶಾ ನೇಗಿಯ ಅನುಯಾಯಿಗಳ ಸಂಖ್ಯೆ ಕೂಡ ಗಣನೀಯ ಏರಿಕೆ ಕಂಡಿತು.

ಇಬ್ಬರ ನಡುವಿನ ಅಂತರವೆಷ್ಟು?
ರಿಷಭ್ ಪಂತ್ 1997ರ ಅಕ್ಟೋಬರ್ 4ರಂದು ಜನಿಸಿದ್ದರೆ, ಅದೇ ವರ್ಷದ ಫೆಬ್ರವರಿ 20ರಂದು ಇಶಾ ನೇಗಿ ಜನಿಸಿದ್ದರು. ಈ ಮೂಲಕ ರಿಷಬ್ ಪಂತ್ ಮತ್ತು ಪ್ರೇಯಸಿ ಇಶಾ ನೇಗಿಯ ನಡುವಿನ ವಯಸ್ಸಿನ ಅಂತರ ಸುಮಾರು ಏಳೂವರೆ ತಿಂಗಳು. ರಿಷಭ್ ಪಂತ್ ವಯಸ್ಸಿನಲ್ಲಿ ತನಗಿಂತ ಏಳೂವರೆ ತಿಂಗಳು ದೊಡ್ಡವಳ ಜತೆ ಪ್ರೇಮದಲ್ಲಿ ಬಿದ್ದಿದ್ದಾರೆ.

ಪಂತ್ ಬೆಳೆದು ಬಂದ ಹಾದಿಯ ಕಿರುಪರಿಚಯ
ರಿಷಭ್ ಪಂತ್ ಉತ್ತರಾಖಂಡ್ ರಾಜ್ಯದ ರೂರ್ಕಿ ಎಂಬಲ್ಲಿ ರಾಜೇಂದ್ರ ಪಂತ್ ಮತ್ತು ಸರೋಜ್ ಪಂತ್ ಎಂಬ ದಂಪತಿಗಳಿಗೆ 1997ರ ಅಕ್ಟೋಬರ್ 4ರಂದು ಜನಿಸಿದರು. ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್ ಆಟದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದ ರಿಷಭ್ ಪಂತ್ 12ನೇ ವಯಸ್ಸಿನಲ್ಲಿ ತಮ್ಮ ತಾಯಿ ಜತೆ ವಾರಾಂತ್ಯದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿ ಸೊನೆಟ್ ಕ್ರಿಕೆಟ್ ಅಕಾಡೆಮಿಯಲ್ಲಿ ತಾರಕ್ ಸಿನ್ಹಾ ಅಡಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದರು. ಇನ್ನು ದೆಹಲಿಯಲ್ಲಿ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರಿಷಭ್ ಪಂತ್ ಮತ್ತು ಆತನ ತಾಯಿ ಮೋತಿಬಾಗ್ ನ ಗುರುದ್ವಾರದಲ್ಲಿ ಉಳಿದುಕೊಳ್ಳುತ್ತಿದ್ದರು. ಹೀಗೆ ಚಿಕ್ಕ ವಯಸ್ಸಿನಿಂದಲೂ ಸಹ ಕ್ರಿಕೆಟ್ ಪರ ತೀವ್ರ ಆಸಕ್ತಿ ಹೊಂದಿದ್ದ ರಿಷಭ್ ಪಂತ್ ಜೀವನಕ್ಕೆ ತಿರುವು ಸಿಕ್ಕಿದ್ದು ಆತ ಅಸ್ಸಾಂ ವಿರುದ್ಧ ಡೆಲ್ಲಿ ಪರ ಅಂಡರ್ 19 ಪಂದ್ಯವನ್ನು ಆಡಿದಾಗ.
ಈ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 35 ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ 150 ರನ್ ಬಾರಿಸಿ ಬೆಳಕಿಗೆ ಬಂದ ರಿಷಬ್ ಪಂತ್ ನಂತರ 2016ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ನೇಪಾಳದ ವಿರುದ್ಧ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ನಂತರ ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಗಳಲ್ಲಿ ಮಿಂಚಿದ ಪಂತ್ 2017ರಲ್ಲಿ ಭಾರತ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯುವ ಅವಕಾಶವನ್ನು ಗಿಟ್ಟಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications