ಟ್ವಿಟ್ಟರ್‌ನಲ್ಲಿ ಹೇಗೆ ಪ್ರತಿಕ್ರಿಯೆಗಳು ಬಂದಿವೆ ಎಂಬುದನ್ನು ಇಲ್ಲಿ ಗಮನಿಸಿ
"ರಿಷಭ್ ಪಂತ್ ಅತ್ಯಂತ ವೇಗವಾಗಿ ಮತ್ತು ಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ! ರಿಷಭ್ ಪಂತ್ ಹುಷಾರಾಗಿರಿ," ಎಂದು ಭಾರತದ ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.
"ರಿಷಭ್ ಪಂತ್ ಆರೋಗ್ಯವಾಗಿದ್ದಾರೆ ಎಂದು ಭಾವಿಸುತ್ತೇನೆ. ಕಾರು ಸಂಪೂರ್ಣವಾಗಿ ಭಸ್ಮವಾಗಿದೆ ಎಂದು ಕಾಣುತ್ತದೆ. ನೋಡಲು ಭಯಾನಕವಾಗಿದೆ," ಎಂದು ಭಾರತೀಯ ಕ್ರಿಕೆಟಿಗ ಅಭಿನವ್ ಮುಕುಂದ್ ಟ್ವೀಟ್ ಮಾಡಿದ್ದಾರೆ.
"ರಿಷಭ್ ಪಂತ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಅವರು ಸುರಕ್ಷಿತವಾಗಿ ಮತ್ತು ಸ್ಥಿರವಾಗಿದ್ದಾರೆ ಎಂದು ಕೇಳಿ ಸಮಾಧಾನವಾಯಿತು," ಎಂದು ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಟ್ವೀಟ್ ಮಾಡಿದ್ದಾರೆ.
ವೀರೇಂದ್ರ ಸೆಹ್ವಾಗ್ ಟ್ವೀಟ್ ಮೂಲಕ ಹಾರೈಸಿದ್ದಾರೆ
"ಪ್ರಿಯ ರಿಷಭ್ ಪಂತ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಬಹುತ್ ಹೈ ಜಲ್ದ್ ಸ್ವಸ್ತ್ ಹೋ ಜಾವೋ," ಎಂದು ಭಾರತದ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಟ್ವೀಟ್ ಮೂಲಕ ಹಾರೈಸಿದ್ದಾರೆ.
"ರಿಷಭ್ ಪಂತ್‌ಗಾಗಿ ಪ್ರಾರ್ಥನೆ. ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ರಿಷಭ್ ಪಂತ್ ಬಹಳ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಚಾಂಪ್ ಬೇಗ ಗುಣಮುಖರಾಗಿ," ಎಂದು ಭಾರತದ ಮಾಜಿ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
"ಇಂದು ಬೆಳಿಗ್ಗೆಯಿಂದ ರಿಷಭ್ ಪಂತ್ ಬಗ್ಗೆ ಯೋಚಿಸುತ್ತಿದ್ದೇನೆ. ಅವರು ಚೆನ್ನಾಗಿದ್ದಾರೆ ಮತ್ತು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ಆಶಿಸುತ್ತಿದ್ದೇನೆ," ಎಂದು ಹಿರಿಯ ಕ್ರಿಕೆಟ್ ವಿಶ್ಲೇಷಕ ಮತ್ತು ಕಾಮೆಂಟೇಟರ್ ಹರ್ಷಾ ಭೋಗ್ಲೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಮಾಡಿದ್ದಾರೆ.
ರಿಷಭ್ ಪಂತ್ ಡೆಹ್ರಾಡೂನ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ
'ರಿಷಭ್ ಪಂತ್ ಬೇಗ ಗುಣಮುಖರಾಗಿ' ಎಂದು ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.
"ಹರಿದ್ವಾರ ಜಿಲ್ಲೆಯ ಮಂಗಳೌರ್ ಮತ್ತು ನರ್ಸನ್ ನಡುವೆ ರಿಷಭ್ ಪಂತ್ ಅಪಘಾತಕ್ಕೀಡಾಗಿದ್ದಾರೆ. ರೂರ್ಕಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಅವರನ್ನು ಡೆಹ್ರಾಡೂನ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ," ಎಂದು ಪಂತ್ ಅವರ ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಜೂಲನ್ ಗೋಸ್ವಾಮಿ ಅವರು ಟ್ವೀಟ್ ಮಾಡಿ, "ರಿಷಭ್ ಪಂತ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ನಮ್ಮ ಪ್ರಾರ್ಥನೆ ಮತ್ತು ಹಾರೈಕೆಗಳು ಸದಾ ನಿಮ್ಮೊಂದಿಗಿರುತ್ತವೆ. ಬೇಗ ಗುಣಮುಖರಾಗಿ," ಎಂದು ಟ್ವೀಟ್ ಮಾಡಿದ್ದಾರೆ.

2-0 ಅಂತರದಲ್ಲಿ ಗೆದ್ದಿದ್ದ ಭಾರತ ತಂಡದ ಭಾಗವಾಗಿದ್ದರು
ರಿಷಭ್ ಪಂತ್ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದಿದ್ದ ಭಾರತ ತಂಡದ ಭಾಗವಾಗಿದ್ದರು. ಅವರು ಮೊದಲ ಮತ್ತು ಎರಡನೇ ಟೆಸ್ಟ್‌ನಲ್ಲಿ ಅನುಕ್ರಮವಾಗಿ 46 ಮತ್ತು 93 ರನ್‌ಗಳಿಂದ ಪ್ರಭಾವಿ ಪ್ರದರ್ಶನ ನೀಡಿದ್ದರು.
ಆದರೆ ಶ್ರೀಲಂಕಾ ವಿರುದ್ಧದ ಸರಣಿಗಾಗಿ ಘೋಷಿಸಲಾದ ಟಿ20 ಮತ್ತು ಏಕದಿನ ತಂಡದಿಂದ ಅವರನ್ನು ಇತ್ತೀಚೆಗೆ ಕೈಬಿಡಲಾಯಿತು. ಆಸ್ಟ್ರೇಲಿಯಾ ವಿರುದ್ಧದ ಫೆಬ್ರವರಿಯ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲು ಶಕ್ತಿ ಮತ್ತು ಕಂಡೀಷನಿಂಗ್ ತರಬೇತಿಗಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಸೇರಬೇಕಿತ್ತು. ಅದಕ್ಕೂ ಮುನ್ನ ಈ ಅವಘಡ ಸಂಭವಿಸಿದೆ.


Click it and Unblock the Notifications
