For Quick Alerts
ALLOW NOTIFICATIONS  
For Daily Alerts
 

ಗಾಯದಿಂದ ಚೇತರಿಸಿಕೊಂಡು ಮೈದಾನಕ್ಕೆ ಮರಳುತ್ತಲೇ ರಿಷಭ್‌ಗೆ ನಾಯಕತ್ವ

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ವಿಕೆಟ್‌ ಕೀಪರ್ ರಿಷಭ್ ಪಂತ್ ಇಂಗ್ಲೆಂಡ್ ಪ್ರವಾಸದ ವೇಳೆ ಗಾಯಕ್ಕೆ ತುತ್ತಾಗಿದ್ದರು. ಇದೇ ಕಾರಣದಿಂದ ಇವರು ಇಂಗ್ಲೆಂಡ್ ಪ್ರವಾಸದಲ್ಲಿ ನಡೆದ ಕೊನೆಯ ಪಂದ್ಯದಿಂದ ದೂರ ಉಳಿದಿದ್ದರು. ಈಗ ಇವರು ಚೇತರಿಸಿಕೊಂಡಿದ್ದು ತಂಡಕ್ಕೆ ಮರಳಲು ತಯಾರಾಗಿದ್ದಾರೆ. ಇವರು ಬರುತ್ತಿದ್ದಂತೆ ಆಯ್ಕೆ ಸಮಿತಿ ಇವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ನೀಡಿದ್ದು ನಾಯಕತ್ವವನ್ನು ನೀಡಿದೆ. ಹಾಗಿದ್ದರೆ ಪಂತ್ ಯಾವ ಸರಣಿಯಲ್ಲಿ, ಯಾವ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಟೀಮ್ ಇಂಡಿಯಾದ ಭರವಸೆಯ ವಿಕೆಟ್ ಕೀಪರ್ ಬ್ಯಾಟರ್‌ಗಳಲ್ಲಿ ರಿಷಭ್ ಪಂತ್ ಅವರಿಗೆ ಅಗ್ರ ಸ್ಥಾನ. ಇವರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸುವ ಆಟಗಾರ. ಇವರ ಇಂಗ್ಲೆಂಡ್‌ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು. ಆದರೆ ಆ ಬಳಿಕ ಗಾಯಕ್ಕೆ ತುತ್ತಾಗಿ ಏಷ್ಯಾ ಕಪ್ ಟಿ20 ಹಾಗೂ ಭಾರತದಲ್ಲಿ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಿಂದಲೂ ಮಿಸ್ ಆಗಿದ್ದರು. ಆದರೆ ರಿಷಭ್ ಫುಲ್ ಚೇತರಿಸಿಕೊಂಡಿದ್ದು, ಮತ್ತೆ ಮೈದಾನದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇವರು ಫಿಟ್ ಆಗಿ ಮೈದಾನಕ್ಕೆ ಬರುತ್ತಲೇ ಇವರಿಗೆ ನಾಯಕತ್ವವನ್ನು ನೀಡಲಾಗಿದೆ.

Rishabh Pant Returns Named India A Captain for South Africa A Unofficial Tests

ಪಂತ್‌ಗೆ ಪಟ್ಟ

ರಿಷಭ್ ಪಂತ್ ಅವರು ಫಿಟ್ ಆಗುತ್ತಿದ್ದಂತೆ ಅಕ್ಟೋಬರ್ 25 ರಿಂದ ನಡೆಯಲಿರುವ ದೆಹಲಿ ಹಾಗೂ ಹಿಮಾಚಲ ಪ್ರದೇಶ ವಿರುದ್ಧದ ರಣಜಿ ಪಂದ್ಯಕ್ಕೆ ಇವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈಗ ಇವರನ್ನು ದಕ್ಷಿಣ ಆಫ್ರಿಕಾ "ಎ" ವಿರುದ್ಧ ನಡೆಯಲಿರುವ ನಾಲ್ಕು ದಿನಗಳ ಅನಧಿಕೃತ ಟೆಸ್ಟ್‌ ಪಂದ್ಯಕ್ಕೆ ತಂಡದಲ್ಲಿ ಸೇರಿಸಿಕೊಳ್ಳಲಾಗಿದ್ದು ದೊಡ್ಡ ಜವಾಬ್ದಾರಿಯನ್ನು ನೀಡಲಾಗುದೆ. ಅಕ್ಟೋಬರ್ 30 ರಂದು ನಡೆಯಲಿರುವ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಪಂತ್ ಭಾರತ "ಎ" ತಂಡವನ್ನು ಮುನ್ನಡೆಸಲಿದ್ದಾರೆ. ಈ ತಂಡದಲ್ಲಿ ಕರ್ನಾಟಕದ ಭರವಸೆಯ ಬ್ಯಾಟರ್ ದೇವದತ್ ಪಡಿಕ್ಕಲ್ ಅವರಿಗೆ ಎರಡೂ ಪಂದ್ಯಗಳಲ್ಲಿ ಸ್ಥಾನ ನೀಡಲಾಗಿದೆ. ಇವರು ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.

1ನೇ ಪಂದ್ಯಕ್ಕೆ ಭಾರತ ತಂಡ: ರಿಷಭ್ ಪಂತ್ (ನಾಯಕ), ಆಯುಷ್ ಮಹಾತ್ರೆ, ಎನ್ ಜಗದೀಸನ್, ಸಾಯಿ ಸುದರ್ಶನ್ (ಉಪ ನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸುತಾರ್, ಅನ್ಶುಲ್ ಕಾಂಬೋಜ್, ಯಶ್ ಠಾಕೂರ್, ಆಯುಷ್ ಬದೋನಿ, ಸಾರಾಂಶ ಜೈನ್.

2ನೇ ಪಂದ್ಯಕ್ಕೆ ಭಾರತ ತಂಡ: ರಿಷಭ್ ಪಂತ್ (ನಾಯಕ), ಕೆ ಎಲ್ ರಾಹುಲ್, ಧ್ರುವ್ ಜುರೆಲ್, ಸಾಯಿ ಸುದರ್ಶನ್ (ಉಪ ನಾಯಕ), ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸುತಾರ್, ಖಲೀಲ್ ಅಹ್ಮದ್, ಗುರ್ನೂರ್ ಬ್ರಾರ್, ಅಭಿಮನ್ಯು ಈಶ್ವರನ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

Story first published: Tuesday, October 21, 2025, 14:15 [IST]
Other articles published on Oct 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+