ರಿವರ್ಸ್ ಸ್ವೀಪ್ ಮೂಲಕ ಆಂಗ್ಲರ ದಂಗುಡಿಸಿದ ರಿಷಭ್ ಪಂತ್: ವಿಡಿಯೋ

ಅಹ್ಮದಾಬಾದ್: ಭಾರತೀಯ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಉಳಿದ ಆಟಗಾರರಿಗೆ ಹೋಲಿಸಿದರೆ ಕೊಂಚ ವಿಭಿನ್ನ ಸ್ವಭಾವದವರು. ಉಳಿದ ಆಟಗಾರರು ಪರಿಸ್ಥಿತಿಗೆ ತಕ್ಕಂತೆ ಒತ್ತಡ ಅನುಭವಿಸಿದರೆ, ಪಂತ್ ಒತ್ತಡವನ್ನು ತೋರಿಕೊಳ್ಳೋದೇಯಿಲ್ಲ. ಎಂಥಾ ಪರಿಸ್ಥಿತಿಯಿದ್ದರೂ ಪಂತ್ ತನ್ನದೇನಿದೆಯೋ ಅದೇ ದಿಟ್ಟ ಆಟ ಆಡ್ತಾರೆ.
ಈ ದಿಟ್ಟ ಬ್ಯಾಟಿಂಗ್ ಶೈಲಿಗಾಗೇ ರಿಷಭ್ ಪಂತ್ ಸೆಳೆಯುತ್ತಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಪಂತ್ ಆಕರ್ಷಕ ಹೊಡೆತಗಳಿಗೆ ಗಮನ ಸೆಳೆದಿದ್ದಾರೆ. ಅದರಲ್ಲೂ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಎಸೆತಕ್ಕೆ ಪಂತ್ ರಿವರ್ಸ್ ಸ್ವೀಪ್ ಬಾರಿಸಿದ್ದಂತೂ ಭಾರತೀಯ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.
ಶುಕ್ರವಾರ ಎರಡನೇ ದಿನದಾಟದ ವೇಳೆ 83ನೇ ಓವರ್‌ನ ಮೊದಲ ಎಸೆತಕ್ಕೆ ಪಂತ್ ರಿವರ್ಸ್ ಸ್ವೀಪ್ ಬಾರಿಸಿದ್ದರು. ಆ ಹೊಡೆತಕ್ಕೆ ಚೆಂಡು ಸ್ಲಿಪ್ ಭಾಗದಿಂದ ಹಾದು ಬೌಂಡರಿ ಗೆರೆ ತಲುಪಿತು. ಪಂತ್ ಅವರ ಈ ಹೊಡೆತಕ್ಕೆ ಬೌಲಿಂಗ್ ಮಾಡುತ್ತಿದ್ದ ಆ್ಯಂಡರ್ಸನ್ ಮಾತ್ರ ಅಲ್ಲ, ಪೂರ್ತಿ ಆಂಗ್ಲ ತಂಡವೇ ಬೆರಗಾಗಿತ್ತು.
ಯಾಕೆಂದರೆ ಆ್ಯಂಡರ್ಸನ್ ಅವರಂತ ಪ್ರಮುಖ ಬೌಲರ್‌ಗಳಿರುವಾಗ ಬ್ಯಾಟ್ಸ್‌ಮನ್‌ಗಳು ಹುಚ್ಚು ಹೊಡೆತಗಳಿಗೆ ಮುಂದಾಗುವುದು ಕಡಿಮೆ. ಆದರೆ ಪಂತ್ ಅದ್ಯಾವುದನ್ನೂ ಲೆಕ್ಕಿಸದೆ ಬ್ಯಾಟ್ ಬೀಸಿ ತಂಡಕ್ಕೆ ರನ್ ಬಲ ತುಂಬಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಪಂತ್ 118 ಎಸೆತಗಳಲ್ಲಿ 101 ರನ್ ಕೊಡುಗೆ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications