For Quick Alerts
ALLOW NOTIFICATIONS  
For Daily Alerts
 

ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಬಗ್ಗೆ ಕ್ರಿಕೆಟಿಗ ರಿಷಬ್ ಪಂತ್ ಗರಂ! ವಿವಾದ ಹುಟ್ಟುಹಾಕಿದ ಪೋಸ್ಟ್‌

Urvashi vs Pant
ಊರ್ವಶಿ ರೌಟೇಲಾ ಹೇಳಿಕೆಗೆ ಫುಲ್ ಗರಂ‌ ಆದ ರಿಷಬ್ ಪಂತ್ ತಿರುಗೇಟು ಕೊಟ್ಟಿದ್ದು ಹೀಗೆ.. | *Cricket | OneIndia

ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಬಗ್ಗೆ ಕ್ರಿಕೆಟಿಗ ರಿಷಬ್ ಪಂತ್ ಅವರು ಇನ್‌ಸ್ಟಾಗ್ರಾಮ್‌ ಸ್ಟೋರಿ ಪೋಸ್ಟ್ ಮಾಡಿದ್ದು ,ಅಂತರ್ಜಾಲದಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಜೊತೆಗೆ ಇದನ್ನು ಪೋಸ್ಟ್‌ ಮಾಡಿದ ಕೆಲವೇ ನಿಮಿಷಗಳಲ್ಲಿ ಪಂತ್ ಡಿಲೀಟ್ ಮಾಡಿದ್ದಾರೆ.

ಬಾಲಿವುಡ್‌ನ ಉದಯೋನ್ಮುಖ ನಟಿ ಊರ್ವಶಿ ರೌಟೇಲಾ ಅವರು ಇತ್ತೀಚೆಗೆ ತಮಿಳಿನ ಲೆಜೆಂಡ್ ಚಿತ್ರದಲ್ಲಿ ನಟಿಸಿದ್ದಾರೆ. ಅವರು ಇತ್ತೀಚೆಗೆ ನೀಡಿರುವ ಟಿವಿ ಸಂದರ್ಶನವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡಿತು. ಇದರಲ್ಲಿ ಹೆಸರನ್ನು ಪೂರ್ಣವಾಗಿ ಘೋಷಿಸದೇ RP ಹೆಸರಿನ ವ್ಯಕ್ತ ನನಗಾಗಿ ಹೋಟೆಲ್‌ನಲ್ಲಿ ಸಾಕಷ್ಟು ಸಮಯ ಕಾದಿದ್ದರು ಎಂದು ಕಾಮೆಂಟ್ ಮಾಡಿದ್ದರು.

ಬಾಲಿವುಡ್ ಹಂಗಾಮಾ ಟಿವಿಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಊರ್ವಶಿ ರೌಟೇಲಾ ಅವರು ಒಮ್ಮೆ ದೆಹಲಿಯಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಾಗ 10 ಗಂಟೆಗಳಿಗೂ ಹೆಚ್ಚು ಕಾಲ ಶೂಟಿಂಗ್ ನಡೆದಿತ್ತು. ಆದರೆ 'ಆರ್‌ಪಿ' ಅಕ್ಷರದಿಂದ ಹೆಸರು ಪ್ರಾರಂಭವಾಗುವ ಸೆಲೆಬ್ರಿಟಿಗಳು ಗಂಟೆಗಟ್ಟಲೆ ಹೋಟೆಲ್‌ನಲ್ಲಿ ನನಗಾಗಿ ಕಾಯುತ್ತಿದ್ದರು. ನನ್ನೊಂದಿಗೆ ಮಾತನಾಡಲು ಹರಸಾಹಸ ಪಟ್ಟಿದ್ದಾರೆ ಎಂದರು.

ಆರ್‌ಪಿ ಎಂದು ಕರೆಯುವ ಸೆಲೆಬ್ರಿಟಿ ಭಾರತೀಯ ಕ್ರಿಕೆಟಿಗ ರಿಷಬ್ ಪಂತ್. 2018 ರಲ್ಲಿ, ರಿಷಬ್ ಪಂತ್ ಮತ್ತು ಊರ್ವಶಿ ಪ್ರೀತಿಸುತ್ತಿದ್ದಾರೆ ಎಂದು ವರದಿಯಾಗಿದೆ. ಮತ್ತು ಹಲವು ಬಾರಿ ಇಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಿಗೆ ನಡೆದಾಡುತ್ತಿರುವ ಫೋಟೋಗಳೂ ಪ್ರಕಟವಾಗಿವೆ. ಆದರೆ 2019ರಲ್ಲಿ ರಿಷಬ್ ಪಂತ್ ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು. ನಟಿ ಇಶಾ ನೇಗಿ ತನ್ನ ಗೆಳತಿ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡರು.

ಮತ್ತೊಂದೆಡೆ ಊರ್ವಶಿ ರೌಟೇಲಾ ಕೂಡ ನಾನು ಹಾಗೂ ರಿಷಭ್ ಪಂತ್ ಡೇಟಿಂಗ್ ಮಾಡುತ್ತಿಲ್ಲ, ಆ ತರಹದ ಯಾವುದೇ ಸಂಬಂಧಗಳಿಲ್ಲ ಎಂದಿದ್ದರು. ಕಾರ್ಯಕ್ರಮವೊಂದರಲ್ಲಿ ಎರಡು ಮೂರು ಸಲ ಒಟ್ಟಾಗಿ ಕಾಣಿಸಿಕೊಂಡಿದ್ದವು. ನಮ್ಮಿಬ್ಬರ ಡೇಟಿಂಗ್ ವಿಚಾರ ಸುಳ್ಳು ಎಂದು ಸ್ಪಷ್ಟಪಡಿಸಿದ್ದರು.

ಆದ್ರೆ ಇಬ್ಬರ ನಡುವೆ ಏನೋ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಊರ್ವಶಿ ರೌಟೇಲಾ ರಿಷಬ್ ಪಂತ್‌ ಬಗ್ಗೆ ಆ ರೀತಿಯಾದ ಕಾಮೆಂಟ್ ಮಾಡಿದ್ದಾರೆ. ಭಾರತದ ಖ್ಯಾತ ಕ್ರಿಕೆಟಿಗ ಬಹಳ ಸಮಯ ಹೋಟೆಲ್‌ನಲ್ಲಿ ಕಾದು ನಟಿಯೊಂದಿಗೆ ಮಾತನಾಡಿದ್ದಾರಾ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಲೇವಡಿ ಮಾಡುತ್ತಿದ್ದಾರೆ.

pant post

ಈ ವೇಳೆ ರಿಷಬ್ ಪಂತ್ ಇದಕ್ಕೆ ದಿಟ್ಟ ಉತ್ತರ ನೀಡಿದ್ದಾರೆ. ಅದನ್ನೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯಾಗಿ ಪೋಸ್ಟ್ ಮಾಡಿದ್ದು, ಜನಪ್ರಿಯತೆ ಪಡೆಯಲು ಕೆಲವರು ಸಂದರ್ಶನದಲ್ಲಿ ಹೇಗೆ ಸುಳ್ಳು ಹೇಳುತ್ತಾರೆ ಎಂಬುದು ತಮಾಷೆಯಾಗಿದೆ. ಮತ್ತೊಂದೆಡೆ, ಯಾರಾದರೂ ಖ್ಯಾತಿಗಾಗಿ ಈ ರೀತಿ ಅಲೆದಾಡುವುದು ಬೇಸರದ ಸಂಗತಿ. ದೇವರು ಅವರಿಗೆ ಸರಿಯಾದ ದಾರಿ ತೋರಿಸಲಿ ಎಂದು ಪೋಸ್ಟ್ ಮಾಡಿದ್ದಾರೆ.

ಪೋಸ್ಟ್ ಮಾಡಿದ 10 ನಿಮಿಷಗಳಲ್ಲಿ ರಿಷಬ್ ಪಂತ್ ಅದನ್ನು ಡಿಲೀಟ್ ಮಾಡಿದ್ದಾರೆ. ಆದರೆ, ಇದರ ಸ್ಕ್ರೀನ್‌ಶಾಟ್‌ ತೆಗೆದುಕೊಂಡ ಅಭಿಮಾನಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪಂತ್‌ಗೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಪಂತ್ ಪ್ರಸ್ತುತ ಭಾರತದ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದು, ಈ ವೇಳೆ ಅವರ ಹೆಸರನ್ನು ಬಳಸಿ ಹೀಗೆ ಮಾತನಾಡುವುದು ಅವರ ಕ್ರಿಕೆಟ್ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಪಂತ್ ಪರ ಮಾತನಾಡಿದ್ದಾರೆ.

Story first published: Friday, August 12, 2022, 10:24 [IST]
Other articles published on Aug 12, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+