ಎಲ್‌ಎಸ್‌ಜಿ ನಾಯಕತ್ವ ತ್ಯಜಿಸಿದ ರಿಷಭ್ ಪಂತ್; ಕಾರಣವೇನು?
19ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಯಾರು? ಎಂಬ ಪ್ರಶ್ನೆಗೆ ಭಾನುವಾರ ಉತ್ತರ ಸಿಗಲಿದೆ. ಈ ಲೀಗ್‌ನಲ್ಲಿ ಆರ್‌ಸಿಬಿ, ಜಿಟಿ, ಆರ್‌ಆರ್, ಎಸ್‌ಆರ್‌ಎಚ್ ತಂಡಗಳನ್ನು ಹೊರತು ಪಡಿಸಿ ಉಳಿದ ಎಲ್ಲ ತಂಡಗಳು ಲೀಗ್ ಹಂತದಲ್ಲೇ ಟೂರ್ನಿಗೆ ಗುಡ್ ಬಾಯ್ ಹೇಳಿವೆ. ಈ ಲೀಗ್‌ನ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾದ ತಂಡಗಳು ಮಹತ್ವದ ನಿರ್ಧಾರವನ್ನು ಕೈಗೊಳ್ಳಲು ಮುಂದಾಗುತ್ತಿವೆ. ಈ ವೇಳೆ ಎಲ್‌ಎಸ್‌ಜಿ ಕ್ಯಾಂಪ್‌ನಿಂದಲೂ ಇಂತಹದ್ದೇ ಒಂದು ಸುದ್ದಿ ಹೊರ ಬಂದಿದೆ.
2026 ರ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕಳಪೆ ಪ್ರದರ್ಶನ ನೀಡಿದೆ. ಈ ಋತುವಿನಲ್ಲಿ ಎಲ್‌ಎಸ್‌ಗೆ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಐಪಿಎಲ್ 2026 ರ ಮುಕ್ತಾಯದ ಮೊದಲು ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಎಲ್‌ಎಸ್‌ಜಿ ಫ್ರಾಂಚೈಸಿಗೆ ನಾಯಕತ್ವದ ಜವಾಬ್ದಾರಿಯಿಂದ ತಮ್ಮನ್ನು ಮುಕ್ತಗೊಳಿಸುವಂತೆ ವಿನಂತಿಸಿದ್ದಾರೆ. ಲಕ್ನೋ ಫ್ರಾಂಚೈಸಿ ತನ್ನ ಸಾಮಾಜಿಕ ಮಾಧ್ಯಮದ ಮೂಲಕ ಈ ಸುದ್ದಿಯನ್ನು ಪ್ರಕಟಿಸಿದೆ.

ಎಲ್‌ಎಸ್‌ಜಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ರಿಷಭ್ ಪಂತ್ ಇನ್ನು ಮುಂದೆ ತಂಡದ ನಾಯಕರಾಗಿರುವುದಿಲ್ಲ ಎಂದು ಅಧಿಕೃತ ಹೇಳಿಕೆ ನೀಡಿದೆ. ಪಂತ್ ಅವರ ನಿರ್ಧಾರವನ್ನ ಫ್ರಾಂಚೈಸಿ ಒಪ್ಪಿಕೊಂಡಿದೆ. ಐಪಿಎಲ್ 2025 ರ ಮೊದಲು ನಡೆದ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ₹27 ಕೋಟಿಗೆ ಖರೀದಿಸಿತ್ತು. ಅಂದಿನಿಂದ ಅವರು ತಂಡದ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೋಚ್ ಹೇಳಿದ್ದೇನು?
ಎಲ್‌ಎಸ್‌ಜಿ ತಂಡದ ನಾಯಕತ್ವ ತ್ಯಜಿಸುವಂತೆ ಮ್ಯಾನೇಜ್ಮೆಂಟ್ ಕೇಳಿಕೊಂಡಿತ್ತು. ಇದಕ್ಕೆ ಸಮ್ಮತಿಸಿದ ಪಂತ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಇಂತಹ ನಿರ್ಧಾರಗಳು ಯಾವಾಗಲೂ ಸುಲಭದ್ದಾಗಿರುವುದಿಲ್ಲ. ಪಂತ್ ನಾಯಕರಾಗಿ ನೀಡಿದ ಕೊಡುಗೆ ದೊಡ್ಡದು. ಈಗ, ನಮ್ಮ ಸಂಪೂರ್ಣ ಗಮನ ತಂಡವನ್ನು ಪುನರ್ನಿರ್ಮಿಸುವುದು ಮತ್ತು ಪ್ರದರ್ಶನವನ್ನು ಸುಧಾರಿಸುವುದರ ಮೇಲೆ ನೆಟ್ಟಿದೆ ಎಂದು ಎಲ್‌ಎಸ್‌ಜಿ ತಂಡದ ಕೋಚ್ ಟಾಮ್ ಮೂಡಿ ತಿಳಿಸಿದ್ದಾರೆ. ಫ್ರಾಂಚೈಸಿ ಇನ್ನು ಹೊಸ ನಾಯಕನ ಘೋಷಣೆ ಮಾಡಿಲ್ಲ.
ರಿಷಭ್ ಪತ್ ಸಾಧನೆ
ಎಲ್‌ಎಸ್‌ಜಿ ನಾಯಕನಾಗಿ ರಿಷಭ್ ಪಂತ್ ಅವರ ಪ್ರದರ್ಶನ ಕಳಪೆಯಾಗಿದೆ. ಕಳೆದ ಎರಡು ಋತುಗಳಲ್ಲಿ ಅವರು 28 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಕೇವಲ 10 ಗೆಲುವುಗಳು ಮತ್ತು 18 ಸೋಲುಗಳು ಕಂಡಿದೆ. ಈ ಋತುವಿನ ಐಪಿಎಲ್‌ನಲ್ಲಿ, ಎಲ್‌ಎಸ್‌ಜಿ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು ಕೊನೆಯ ಸ್ಥಾನದಲ್ಲಿದೆ. ಇನ್ನು ಬ್ಯಾಟಿಂಗ್‌ನಲ್ಲೂ ರಿಷಭ್ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಇವರು ಆಡಿದ ರಿಷಭ್ 26 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ 26.40 ಸರಾಸರಿಯಲ್ಲಿ 581 ರನ್ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications