ಐಪಿಎಲ್: 'ಬಲ್ ಅಪರೂಪ'ದ ಕ್ಷಣಕ್ಕೆ ಸಾಕ್ಷಿಯಾದ ಪಂತ್-ರೈನಾ-ವಿಡಿಯೋ

ವಿಶಾಖಪಟ್ಟಣ, ಮೇ 11: ಬದ್ಧ ಎದುರಾಳಿ ತಂಡಗಳ ಮಧ್ಯೆ ಜಿದ್ದಾಜಿದ್ದಿಯ ಪಂದ್ಯವಿದ್ದಾಗ ಭಾರತೀಯ ಆಟಗಾರರೂ ಬಿಗು ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದ್ದ ಸಂಗತಿಗಳಿವೆ. ಆದರೆ ಐಪಿಎಲ್ ಕ್ವಾಲಿಫೈಯರ್-2 ಪಂದ್ಯದ ವೇಳೆ ಇದಕ್ಕೆ ವ್ಯತಿರಿಕ್ತ ದೃಶ್ಯ ಕಾಣಸಿಕ್ಕಿತು. ರಿಷಬ್ ಪಂತ್ ಮತ್ತು ಅನುಭವಿ ಆಟಗಾರ ಸುರೇಶ್ ರೈನಾ ಅಪರೂಪದ ಕ್ಷಣವೊಂದಕ್ಕೆ ಗಮನ ಸೆಳೆದರು.
ಡಾ. ವೈಡಸ್ ರಾಜಶೇಖರ್ ರೆಡ್ಡಿ ವಿಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಡಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಸಿಎಸ್‌ಕೆ ಬೌಲಿಂಗ್ ಆಯ್ದುಕೊಂಡಿತ್ತು.
ಡೆಲ್ಲಿ ಇನ್ನಿಂಗ್ಸ್ ವೇಳೆ ತಂಡದ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರ ಶೂ ಲೇಸ್ ಕಳಚಿತ್ತು. ಆಗ ಎದುರಾಳಿ ತಂಡದ ಆಟಗಾರ ರೈನಾ ಬಂದು ಪಂತ್ ಎರಡೂ ಕಾಲಿನ ಶೂ ಲೇಸ್ ಕಟ್ಟಿ ಸಹಾಯ ಮಾಡಿದ್ದರು. ಪಂದ್ಯದ ವೇಳೆ ಆಟಗಾರರು ಹೀಗೆ ಶೂ ಲೇಸ್ ಕಟ್ಟಿಕೊಳ್ಳುವ ದೃಶ್ಯ ಆಗಾಗ ಕಣಸಿಗುತ್ತದಾದರೂ, ಇದು ಕೊಂಚ ಅಪರೂಪವೆಂಬಂತೆ ಗಮನ ಸೆಳೆದಿತ್ತು.
ಪಂದ್ಯದಲ್ಲಿ ಶೇನ್ ವ್ಯಾಟ್ಸನ್ (50) ಮತ್ತು ಫಾ ಡು ಪ್ಲೆಸಿಸ್ (50) ಅರ್ಧಶತಕದ ಬೆಂಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ವಿರುದ್ಧ 6 ವಿಕೆಟ್ ಜಯದೊಂದಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಡಿಸಿಯ ಐಪಿಎಲ್ ಚೊಚ್ಚಲ ಫೈನಲ್ ಪ್ರವೇಶದ ಕನಸು ಈ ಪಂದ್ಯದೊಂದಿಗೆ ಮಣ್ಣು ಪಾಲಾಯ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications