Rishabh Pant: ಕ್ರಿಕೆಟ್ ಆಡದಿದ್ರೂ ₹ 21 ಕೋಟಿ ಸಂಬಳ ಪಡೆಯಲಿರುವ ಪಂತ್!

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಬ್ ಪಂತ್ ಕನಿಷ್ಠ 9 ತಿಂಗಳು ಕ್ರಿಕೆಟ್‌ನಿಂದ ದೂರವುಳಿಯಲಿದ್ದಾರೆ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿರುವ ರಿಷಬ್ ಪಂತ್ 2023ರ ಐಪಿಎಲ್ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. ಈ ಬಾರಿಯ ಐಪಿಎಲ್ ಆಡದಿದ್ದರೂ ಬಿಸಿಸಿಐ ಅವರಿಗೆ ಪೂರ್ತಿ ಸಂಬಳ ನೀಡಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು 16 ಕೋಟಿ ರುಪಾಯಿಗೆ ಖರೀದಿ ಮಾಡಿತ್ತು, ಈ ಬಾರಿ ಐಪಿಎಲ್ ಆಡದಿದ್ದರೂ ಪಂತ್ 16 ಕೋಟಿ ರುಪಾಯಿಯನ್ನು ಪಡೆದುಕೊಳ್ಳಲಿದ್ದಾರೆ.
ಐಪಿಎಲ್‌ನಲ್ಲಿ ಸಂಬಳ 16 ಕೋಟಿ ರುಪಾಯಿ ಜೊತೆಗೆ, ಬಿಸಿಸಿಐ ಜೊತೆ ಒಪ್ಪಂದದ ಪ್ರಕಾರ ಪಡೆಯುತ್ತಿದ್ದ 5 ಕೋಟಿ ರುಪಾಯಿಯನ್ನು ಪಡೆಯಲಿದ್ದಾರೆ. ಈ ವರ್ಷ ಬಹುತೇಕ ಕ್ರಿಕೆಟ್ ಆಡದಿದ್ದರೂ ಕೂಡ ಅವರು ಸಂಪೂರ್ಣ ವೇತನ ಪಡೆಯಲಿದ್ದಾರೆ.
ಇದೆಲ್ಲದರ ಜೊತೆಗೆ ರಿಷಬ್ ಪಂತ್‌ರ ಚಿಕಿತ್ಸೆಯ ವೆಚ್ಚವನ್ನು ಕೂಡು ಬಿಸಿಸಿಐ ಭರಿಸಲಿದೆ. ಪಂತ್ ವಿಚಾರದಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ತೆಗೆದುಕೊಂಡ ನಿರ್ಣಯ ಇತರೆ ಕ್ರಿಕೆಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಪಂತ್ ಮಾತ್ರವೇ ಅಲ್ಲ ಐಪಿಎಲ್ ಒಪ್ಪಂದ ಪಡೆದ ಯಾವುದೇ ಆಟಗಾರ ಗಾಯಗೊಂಡು ಕ್ರಿಕೆಟ್‌ನಿಂದ ಹೊರಗುಳಿದರೂ, ಸಂಪೂರ್ಣ ವೇತನವನ್ನು ಪಡೆಯಲು ಅವಕಾಶವಿದೆ.

ವಿಮಾ ಕಂಪನಿ ನೀಡಲಿಗೆ ಸಂಬಳ
ರಿಷಬ್ ಪಂತ್ ಕೇಂದ್ರೀಯ ಒಪ್ಪಂದದ ಕ್ರಿಕೆಟಿಗ, ಅವರಿಗೆ ಬಿಸಿಸಿಐ ವರ್ಷಕ್ಕೆ 5 ಕೋಟಿ ರುಪಾಯಿ ಪಾವತಿಸುತ್ತದೆ. ಕ್ರಿಕೆಟ್ ಆಡದಿದ್ದರೂ ಕೂಡ 2023ರ ವರ್ಷದ ಹಣವನ್ನು ಅವರನ್ನು ಪಡೆಯಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ರಿಷಬ್ ಪಂತ್ ಜೊತೆ 16 ಕೋಟಿ ರುಪಾಯಿಗೆ ಒಪ್ಪಂದ ಮಾಡಿಕೊಂಡಿದೆ. ಗಾಯಗೊಂಡಿರುವ ಕಾರಣ, ರಿಷಬ್ ಪಂತ್ ಈ ಬಾರಿ ಐಪಿಎಲ್‌ನಲ್ಲಿ ಆಡುವುದಿಲ್ಲ, ಈ ಬಾರಿಯ ಅವರ ಐಪಿಎಲ್ ಸಂಬಳವನ್ನು ಪಾವತಿಸುವ ಜವಾಬ್ದಾರಿಯನ್ನು ಬಿಸಿಸಿಐ ತೆಗೆದುಕೊಳ್ಳಲಿದೆ.
ಎಲ್ಲಾ ಕೇಂದ್ರೀಯ ಒಪ್ಪಂದ ಆಟಗಾರರಿಗೆ ವಿಮೆ ಮಾಡಲಾಗಿರುತ್ತದೆ, ಬಿಸಿಸಿಐ ನಿಯಮಗಳ ಪ್ರಕಾರ ಈ ಆಟಗಾರರು ಗಾಯಗೊಂಡು ಐಪಿಎಲ್‌ನಿಂದ ಹೊರಗುಳಿದರೂ ಕೂಡ ಸಂಪೂರ್ಣ ಹಣವನ್ನು ಪಡೆಯುತ್ತಾರೆ. ವಿಮಾ ಕಂಪನಿ ಈ ಸಂಬಳವನ್ನು ಪಾವತಿ ಮಾಡಬೇಕಾಗುತ್ತದೆ.
ಈತ ಎಬಿಡಿಗಿಂತಲೂ ಅಮೂಲ್ಯ ಆಟಗಾರ: ಭಾರತೀಯ ಆಟಗಾರನ ಬಗ್ಗೆ ಅಜಯ್ ಜಡೇಜಾ ಪ್ರಶಂಸೆ

ಮುಂಬೈನಲ್ಲೇ ಪಂತ್‌ಗೆ ಶಸ್ತ್ರಚಿಕಿತ್ಸೆ
ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ರಿಷಬ್ ಪಂತ್ ಯಶಸ್ವಿಯಾಗಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮುಂಭಾಗದ ಕ್ರೂಸಿಯೇಟ್ ಲಿಜಮೆಂಟ್ (ACL) ಮತ್ತು ಮಧ್ಯದ ಕೊಲ್ಯಾಟರಲ್ ಲಿಜಮೆಂಟ್ (MCL) ಮೇಲೆ ಆಗಿದ್ದ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ರಿಷಬ್ ಪಂತ್‌ಗೆ ವೈದ್ಯ ದಿನ್ಶಾ ಪರ್ದಿವಾಲಾ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಅವರು ಕನಿಷ್ಠ 6 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರವುಳಿಯಲಿದ್ದಾರೆ ಎನ್ನಲಾಗಿದ್ದರೂ, 2023ರ ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಕೂಡ ಅನುಮಾನವಾಗಿದೆ.

ಏಕದಿನ ವಿಶ್ವಕಪ್‌ಗೂ ಅಲಭ್ಯ
ರಿಷಬ್ ಪಂತ್ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡ ಅವರು ಸಂಪೂರ್ಣವಾಗಿ ಫಿಟ್ ಆಗಲು ಎಷ್ಟು ಸಮಯ ಬೇಕು ಎಂದು ಹೇಳಲು ಸಾಧ್ಯವಿಲ್ಲ. ಈಗ ನಡೆದಿರುವ ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಅವರಿಗೆ ಕನಿಷ್ಠ 4 ತಿಂಗಳು ಮತ್ತು ಫಿಟ್ ಆಗಲು 2 ತಿಂಗಳು ಸಮಯ ಬೇಕಾಗುತ್ತದೆ.
ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪಂತ್ ನಂತರ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಎರಡು ಶಸ್ತ್ರಚಿಕಿತ್ಸೆಗಳಿಂದ ಅವರು ಸುಧಾರಿಸಿಕೊಳ್ಳಲು 9 ತಿಂಗಳ ಸಮಯ ಬೇಕು ಎಂದು ಆಸ್ಪತ್ರೆಯ ವೈದ್ಯರ ನಿಕವರ್ತಿಗಳು ತಿಳಿಸಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications