LSG vs CSK IPL 2025: ಲಯಕ್ಕೆ ಮರಳಿದ ಪಂತ್: ಚೆನ್ನೈಗೆ 167 ರನ್ ಗುರಿ ನೀಡಿದ ಎಲ್‌ಎಸ್‌ಜಿ
ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಬ್ ಪಂತ್ ರನ್ ಕಲೆ ಹಾಕದ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದರು. ಆದರೆ ಲಕ್ನೋ ಎಕಾನಾ ಮೈದಾನದಲ್ಲಿ ರಿಷಭ್ ಪಂತ್ ತಮ್ಮ ಹಳೆಯ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ಗಮನ ಸೆಳೆದರು. ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲಾರದರೂ ಪಂತ್ ಏಕಾಂಗಿ ಹೋರಾಟ ನಡೆಸಿದರು. ಇವರ ಅರ್ಧಶತಕದ ಬಲದಿಂದ ಎಲ್‌ಎಸ್‌ಜಿ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ನೀಡಿದೆ
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಬ್ಯಾಟಿಂಗ್ ಮಾಡಲು ಸೂಚಿಸಿತು. ಈ ವೇಳೆ ತಂಡದ ಭರವಸೆಯ ಆಟಗಾರರಾದ ಐಡೇನ್ ಮಾರ್ಕ್ರಮ್ 6 ರನ್ ಬಾರಿಸಿದ್ದಾಗ ಖಲೀಲ್ ಅಹ್ಮದ್ ಎಸೆತದಲ್ಲಿ ರಾಹುಲ್ ತ್ರಿಪಾಠಿ ಹಿಡಿದ ಅಮೋಘ ಕ್ಯಾಚ್‌ಗೆ ಬಲಿಯಾದರು.

ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ನಿಕೋಲಸ್ ಪೂರನ್ ಸೋಮವಾರ ನಿರಾಸೆ ಅನುಭವಿಸಿದರು. ಇವರು ಅನ್ಶುಲ್ ಕಾಂಬೋಜ್ ಅವರ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು.
ಮೂರನೇ ವಿಕೆಟ್‌ಗೆ ಮಿಚೆಲ್ ಸ್ಟಾರ್ಕ್ ಅವರೊಂದಿಗೆ ಸೇರಿಕೊಂಡ ನಾಯಕ ರಿಷಭ್ ಪಂತ್ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡರು. 23 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಈ ಜೋಡಿ ಆಧಾರವಾಯಿತು. ಮಾರ್ಷ್ ಹಾಗೂ ಪಂತ್ ಜೊತೆಗೂಡಿ 33 ಎಸೆತಗಳಲ್ಲಿ 50 ರನ್ ಸಿಡಿಸಿತು. ಆರಂಭಿಕ ಮಿಚೆಲ್ ಮಾರ್ಷ್ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 30 ರನ್ ಸಿಡಿಸಿ ಔಟ್ ಆದರು.
ಆಯುಷ್ ಬದೋನಿ 17 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 22 ರನ್ ಬಾರಿಸಿ ರವೀಂದ್ರ ಜಡೇಜಾ ಎಸೆತದಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಸ್ಟಂಪ್ ಔಟ್ ಆದರು.
ಐದನೇ ವಿಕೆಟ್ ಅರ್ಧಶತಕದ ಜೊತೆಯಾಟ
ನಾಯಕ ರಿಷಭ್ ಪಂತ್ ಹಾಗೂ ಅಬ್ದುಲ್ ಸಮದ್ ಜೋಡಿ ಚೆನ್ನೈ ಬೌಲರ್‌ಗಳನ್ನು ಕಾಡಿತು. ಈ ಜೋಡಿ 33 ಎಸೆತಗಳಲ್ಲಿ 53 ರನ್ ಸೇರಿಸಿತು. ಈ ವೇಳೆ ಅಬ್ದುಲ್ ಸಮದ್ 2 ಸಿಕ್ಸರ್ ಸಹಾಯದಿಂದ 20 ರನ್ ಬಾರಿಸಿದ್ದಾಗ ಇಲ್ಲದ ರನ್ ಕದಿಯಲು ಹೋಗಿ, ಧೋನಿ ಉತ್ತಮ ಥ್ರೋಗೆ ಬಲಿಯಾದರು.

ನಾಯಕ ರಿಷಭ್ ಪಂತ್ ಅವರು ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ನಡೆಸಿದರು. ಪ್ರಸಕ್ತ ಲೀಗ್‌ನಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದ ಪಂತ್, ಇದೇ ಮೊದಲ ಬಾರಿಗೆ 18ನೇ ಆವೃತ್ತಿಯಲ್ಲಿ ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಇವರು 49 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 63 ರನ್ ಸಿಡಿಸಿ ಮತೀಶ್ ಪತಿರಾಣ ಎಸೆತದಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಧೋನಿಗೆ ಕ್ಯಾಚ್ ನೀಡಿದರು.
ಅಂತಿಮವಾಗಿ ಎಲ್‌ಎಸ್‌ಜಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 166 ರನ್ ಸೇರಿಸಿತು. ಸಿಎಸ್‌ಕೆ ಪರ ಮತೀಶ್ ತೀಕ್ಷಣ ಹಾಗೂ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications