Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುಜುವೇಂದ್ರ ಚಾಹಲ್ ಚಿತ್ರಕ್ಕೆ ಪ್ರತಿಕ್ರಿಯಿಸಿದ ರೋಹಿತ್ ಪತ್ನಿ ರಿತಿಕಾ

Ritika Sajdeh reacts on Yuzvendra Chahal’s throwback picture with Rohit Sharma

ಮುಂಬೈ, ಜುಲೈ 16: ಭಾರತದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಕಡೇಯ ಪಂದ್ಯವ್ನಾಡಿದ್ದು ಕಳೆದ ಫೆಬ್ರವರಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್‌ಗೆ ಪ್ರವಾಸ ಹೋಗಿದ್ದಾಗ. ಆವತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಚಾಹಲ್ ಉತ್ತಮ ಪ್ರದರ್ಶನವೇನೂ ನೀಡಿರಲಿಲ್ಲ. ಸರಣಿಯಲ್ಲಿ ಭಾರತ ತಂಡ 3-0ಯ ಹೀನಾಯ ಸೋಲನುಭವಿಸಿತ್ತು.

ಇತ್ತೀಚೆಗೆ ಟಿಕ್‌ಟಾಕ್‌ನಲ್ಲಿ ಚಾಹಲ್ ಒಂದಿಷ್ಟು ತಮಾಷೆಯ ವೀಡಿಯೋಗಳನ್ನು ಹಂಚಿಕೊಂಡಿದ್ದರು. ತನ್ನ ತರ್ಲೆ-ತಮಾಷೆಯ ವಿಚಾರಕ್ಕಾಗಿಯೇ ಚಾಹಲ್ ಹೆಚ್ಚು ಗಮನ ಸೆಳೆದಿದ್ದರು. ಚಾಹಲ್ ತೀರಾ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಂದು ಫೋಟೋ ಶೇರ್ ಮಾಡಿಕೊಂಡಿದ್ದರು. ಇದು ಭಾರತ ತಂಡ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಿದ್ದಾಗಿನ ಫೋಟೋ.

ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಿದ್ದ ಭಾರತ ಅಲ್ಲಿ ಭಾರತ 5 ಪಂದ್ಯಗಳ ಟಿ20 ಸರಣಿಯನ್ನು 5-0ಯಿಂದ ಗೆದ್ದಿತ್ತು. ಇದಕ್ಕೆ ಪ್ರತೀಕಾರವಾಗಿ ನ್ಯೂಜಿಲೆಂಡ್, 3 ಪಂದ್ಯಗಳ ಏಕದಿನವನ್ನು 3-0ಯಿಂದ, 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0ಯಿಂದ ಗೆದ್ದಿತ್ತು. ಈ ಪ್ರವಾಸ ಸರಣಿಯಲ್ಲಿ ಟಿ20ಯಲ್ಲಿ ಆಡಿದ್ದ ರೋಹಿತ್ ಶರ್ಮಾ ಆ ಬಳಿಕ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದರು.

Ritika Sajdeh reacts on Yuzvendra Chahal’s throwback picture with Rohit Sharma

ನ್ಯೂಜಿಲೆಂಡ್ ಪ್ರವಾಸದ ವೇಳೆ ಶರ್ಮಾ ಜೊತೆಗಿದ್ದ ಫೋಟೋ ಹಂಚಿಕೊಂಡಿದ್ದ ಚಾಹಲ್, 'ನನಗೆ ಸೂಪರ್ ಹೀರೋ ಬೇಕಾಗಿಲ್ಲ, ನನಗೆ ದೊಡ್ಡ ಅಣ್ಣನಿದ್ದಾನೆ,' ಎಂದು ಬರೆದುಕೊಂಡಿದ್ದರು. ಇದಕ್ಕೆ ರೋಹಿತ್ ಶರ್ಮಾ ಪತ್ನಿ, ರಿತಿಕಾ ಸಜ್ದೇ, 'ಆ...ವ್' (Aaawwwww) ಎಂದು ಪ್ರತಿಕ್ರಿಯಿಸಿದ್ದಾರೆ.

Story first published: Friday, July 17, 2020, 10:12 [IST]
Other articles published on Jul 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+