For Quick Alerts
ALLOW NOTIFICATIONS  
For Daily Alerts
 

ರೋಡ್‌ ಸೇಫ್ಟಿ ವರ್ಲ್ಡ್ ಸೀರೀಸ್ : ಭಾರತದ ದಿಗ್ಗಜರಿಗೆ ಇಂದು ಇಂಗ್ಲೆಂಡ್ ಲೆಜೆಂಡ್‌ಗಳ ಸವಾಲು

Road Safety World Series 2021 India Legends vs England Legends Preview

ರೋಡ್‌ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ಮಂಗಳವಾರ ಭಾರತದ ದಿಗ್ಗಜ ಕ್ರಿಕೆಟಿಗರ ತಂಡ ಇಂಗ್ಲೆಂಡ್ ದಿಗ್ಗಜರ ತಂಡದ ಸವಾಲನ್ನು ಎದುರಿಸಲಿದೆ. ಎರಡು ತಂಡಗಳಲ್ಲಿ ಹಲವಾರು ಪ್ರಮುಖ ದಿಗ್ಗಜ ಆಟಗಾರರು ಇರು ಕಾರಣ ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಸಾಕಷ್ಟು ಕುತೂಹಲದಿಂದ ಕಾಯುವಂತೆ ಮಾಡಿದೆ. ಇದರ ಜೊತೆಗೆ ಎರಡು ತಂಡಗಳು ಈ ಆವೃತ್ತಿಯಲ್ಲಿ ಒಂದೂ ಸೋಲು ಕಾಣದಿರುವುದು ಈ ಕಾದಾಟದ ಮೇಲೆ ಕುತೂಹಲ ಹೆಚ್ಚಾಗುವಂತೆ ಮಾಡಿದೆ.

ರೋಡ್‌ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತ ಲೆಜೆಂಡ್ ತಂಡ ಅದ್ಭುತ ಪ್ರದರ್ಶನವನ್ನು ನೀಡುತ್ತಿದೆ. ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಿದ ಭಾರತ ಲೆಜೆಂಡ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ.

ಬಾಂಗ್ಲಾದೇಶದ ವಿರುದ್ಧಧ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಮಿಂಚಿದ ಭಾರತ ಲೆಜೆಂಡ್ ತಂಡ ಬಾಂಗ್ಲಾದೇಶ ಲೆಜೆಂಡ್ ತಂಡವನ್ನು 109 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ವಿನಯ್ ಕುಮಾರ್, ಪ್ರಗ್ಯಾನ್ ಓಝಾ ಹಾಗೂ ಯುವರಾಜ್ ತಲಾ ಎರಡು ವಿಕೆ್ ಕಿತ್ತು ಮಿಂಚಿದ್ದರು. ಬಳಿಕ ಬ್ಯಾಟಿಂಗ್‌ನಲ್ಲಿ ಆರಂಬಿಕ ಜೋಡಿಯಾದ ವೀರೋಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ವಿಕೆಟ್ ಕಳೆದುಕೊಳ್ಳದೆ ಈ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು.

ಇಂಗ್ಲೆಂಡ್ ದಿಗ್ಗಜರ ತಂಡವೂ ಕೂಡ ಸರಣಿಯ ಟೂರ್ನಿಯ ಆರಂಭಿಕ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧವೇ ಆಡುವ ಮೂಲಕ ಕಣಕ್ಕಿಳಿದಿತ್ತು. ಈ ಪಂದ್ಯವನ್ನು ಇಂಗ್ಲೆಂಡ್ 7 ವಿಕೆಟ್‌ಗಳಿಂದ ಜಯಿಸಿದೆ. ಮೊಹಮ್ಮದ್ ರೀಫ್ ಬಳಗವನ್ನು 113 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಇಂಗ್ಲೆಂಡ್ ದಿಗ್ಗಜರು ಯಶಸ್ವಿಯಾಗಿದ್ದರು.

ಮಂಗಳವಾರ ನಡೆಯುತ್ತಿರುವ ಈ ಪಂದ್ಯದಲ್ಲಿ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಕೆವಿನ್ ಪೀಟರ್ಸನ್, ಮಾಂಟಿ ಪನೆಸರ್ ಅವರಂತಾ ಆಟಗಾರರು ಕಣಕ್ಕಿಳಿಯುತ್ತಿದ್ದು ಅಭಿಮಾನಿಗಳು ಕುತೂಹಲದಿಂದ ಕಾಯುವಂತೆ ಮಾಡಿದೆ.

Story first published: Tuesday, March 9, 2021, 13:55 [IST]
Other articles published on Mar 9, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+