For Quick Alerts
ALLOW NOTIFICATIONS  
For Daily Alerts
 

Road Safety World Series 2022 Schedule : ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್: ದಿಗ್ಗಜರ ಸೆಣೆಸಾಟಕ್ಕೆ ವೇಳಾಪಟ್ಟಿ ಪ್ರಕಟ

Road Safety World Series 2022 2nd season Schedule announced starts from September 10

ಸಚಿನ್ ತೆಂಡೂಲ್ಕರ್, ಯುವರಾಜ್ ಸೇರಿದಂತೆ ವಿಶ್ವದ ದಿಗ್ಗಜ ಕ್ರಿಕೆಟಿಗರು ಭಾಗವಹಿಸುವ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಕುತೂಹಲಕಾರಿ ಟೂರ್ನಿಯ ಎರಡನೇ ಆವೃತ್ತಿಗೆ ದಿನಾಂಕ ಪ್ರಕಟವಾಗಿದ್ದು ಸೆಪ್ಟೆಂಬರ್ 10ರಿಂದ ಕಾನ್ಪುರದಲ್ಲಿ ಈ ಟೂರ್ನಿ ಆರಂಭವಾಗಲಿದೆ.

ಇಂಡಿಯಾ ಲೆಜೆಂಡ್ಸ್, ಸೌತ್ ಆಫ್ರಿಕಾ ಲೆಜೆಂಡ್ಸ್, ವೆಸ್ಟ್ ಇಂಡೀಸ್ ಲೆಜೆಂಡ್ಸ್, ಆಸ್ಟ್ರೇಲಿಯಾ ಲೆಜೆಂಡ್ಸ್, ಶ್ರೀಲಂಕಾ ಲೆಜೆಂಡ್ಸ್, ಬಾಂಗ್ಲಾದೇಶ ಲೆಜೆಂಡ್ಸ್, ಇಂಗ್ಲೆಂಡ್ ಲೆಜೆಂಡ್ಸ್ ಮತ್ತು ನ್ಯೂಜಿಲೆಂಡ್ ಲೆಜೆಂಡ್ಸ್ ಸೇರಿದಂತೆ ಒಟ್ಟು ಎಂಟು ತಂಡಗಳು ಈ ಸರಣಿಯ ಎರಡನೇ ಆವೃತ್ತಿಯಲ್ಲಿ ಭಾಗವಹಿಸಲಿವೆ.

ಮೊದಲ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ಹಾಗೂ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡಗಳು ಮುಖಾಮುಖಿಯಾಗಲಿದೆ. ಸೆಪ್ಟೆಂಬರ್ 10ರಿಂದ ಆರಂಭವಾಗಲಿದ್ದು ಅಕ್ಟೋಬರ್ 1ರಂದು ಫೈನಲ್ ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 10ರಿಂದ 27ರವೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು 28 ಹಾಗೂ 29ರಂದು ಸೆಮಿಫೈನಲ್ ಪಂದ್ಯಗಳು ಆಯೋಜನೆಯಾಗಲಿದೆ. ಅಕ್ಟೋಬರ್ 1ರಂದು ಫೈನಲ್ ಪಂದ್ಯ ಆಯೋಜನೆಯಾಗಲಿದೆ. ಕಾನ್ಪುರ, ಇಂದೋರ್, ಡೆಹ್ರಾಡೂನ್ ಹಾಗೂ ರಾಯ್‌ಪುರದಲ್ಲಿ ಈ ಪಂದ್ಯಗಳು ನಡೆಯಲಿದೆ.

ಇಂಡಿಯಾ ಲೆಜೆಂಡ್ಸ್ ಸ್ಕ್ವಾಡ್

ಸಚಿನ್ ತೆಂಡೂಲ್ಕರ್ (ನಾಯಕ), ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಮುನಾಫ್ ಪಟೇಲ್, ಸುಬ್ರಮಣ್ಯಂ ಬದ್ರಿನಾಥ್, ಸ್ಟುವರ್ಟ್ ಬಿನ್ನಿ, ನಮನ್ ಓಜಾ, ಮನ್‌ಪ್ರೀತ್ ಗೋನಿ, ಪ್ರಗ್ಯಾನ್ ಓಜಾ, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ರಾಜೇಶ್ ಪವಾರ್ ಮತ್ತು ರಾಹುಲ್ ಶರ್ಮಾ.

ನ್ಯೂಜಿಲೆಂಡ್ ಲೆಜೆಂಡ್ಸ್ ಸ್ಕ್ವಾಡ್
ರಾಸ್ ಟೇಲರ್ (ನಾಯಕ), ಜಾಕೋಬ್ ಓರಮ್, ಜೇಮೀ ಹೌ, ಜೇಸನ್ ಸ್ಪೈಸ್, ಕೈಲ್ ಮಿಲ್ಸ್, ಸ್ಕಾಟ್ ಸ್ಟೈರಿಸ್, ಶೇನ್ ಬಾಂಡ್, ಡೀನ್ ಬ್ರೌನ್ಲೀ, ಬ್ರೂಸ್ ಮಾರ್ಟಿನ್, ನೀಲ್ ಬ್ರೂಮ್, ಆರನ್ ರೆಡ್ಮಂಡ್, ಆಂಟನ್ ಡೆವ್ಸಿಚ್, ಕ್ರೇಗ್ ಮೆಕ್‌ಮಿಲನ್, ಗರೆಥ್ ಹಾಪ್ಕಿನ್ಸ್ ಮತ್ತು ಹ್ಯಾಮಿಶ್ ಬೆನೆಟ್.

ಆಸ್ಟ್ರೇಲಿಯಾ ಲೆಜೆಂಡ್ಸ್ ಸ್ಕ್ವಾಡ್
ಶೇನ್ ವ್ಯಾಟ್ಸನ್ (ನಾಯಕ), ಅಲೆಕ್ಸ್ ಡೂಲನ್, ಬೆನ್ ಡಂಕ್, ಬ್ರಾಡ್ ಹಾಡ್ಜ್, ಬ್ರಾಡ್ ಹ್ಯಾಡಿನ್, ಸ್ಟುವರ್ಟ್ ಕ್ಲಾರ್ಕ್, ಬ್ರೆಟ್ ಲೀ, ಬ್ರೈಸ್ ಮೆಕ್‌ಗೇನ್, ಕ್ಯಾಲಮ್ ಫರ್ಗುಸನ್, ಕ್ಯಾಮರೂನ್ ವೈಟ್, ಜಾರ್ಜ್ ಹಾರ್ಲಿನ್, ಜೇಸನ್ ಕ್ರೆಜ್ಜಾ, ಜಾನ್ ಹೇಸ್ಟಿಂಗ್ಸ್, ಡಿರ್ಕ್ ನ್ಯಾನೆಸ್, ನಾಥನ್ ರಿಯರ್ಡನ್ ಮತ್ತು ಚಾಡ್ ಸೇಯರ್ಸ್

ವೆಸ್ಟ್ ಇಂಡೀಸ್ ಲೆಜೆಂಡ್ಸ್ ಸ್ಕ್ವಾಡ್
ಬ್ರಿಯಾನ್ ಲಾರಾ (ನಾಯಕ), ಡ್ಯಾನ್ಜಾ ಹಯಾಟ್, ದೇವೇಂದ್ರ ಬಿಶೂ, ಡ್ವೇನ್ ಸ್ಮಿತ್, ಜೆರೋಮ್ ಟೇಲರ್, ಕಿರ್ಕ್ ಎಡ್ವರ್ಡ್ಸ್, ಮರ್ಲಾನ್ ಇಯಾನ್ ಬ್ಲಾಕ್, ನರಸಿಂಗ್ ಡಿಯೊನರಿನ್, ಸುಲೀಮನ್ ಬೆನ್, ಡೇರೆನ್ ಪೊವೆಲ್, ವಿಲಿಯಂ ಪರ್ಕಿನ್ಸ್, ಡೇರಿಯನ್ ಬಾರ್ತ್ಲಿ, ಡೇವ್ ಮೊಹಮ್ಮದ್ ಮತ್ತು ಕ್ರಿಶ್ಮಾರ್ ಸ್ಯಾಂಟೋಕಿ.

ಇಂಗ್ಲೆಂಡ್ ಲೆಜೆಂಡ್ಸ್ ಸ್ಕ್ವಾಡ್
ಇಯಾನ್ ಬೆಲ್ (ನಾಯಕ), ನಿಕ್ ಕಾಂಪ್ಟನ್, ಫಿಲ್ ಮಸ್ಟರ್ಡ್, ಕ್ರಿಸ್ ಟ್ರೆಮ್ಲೆಟ್, ಡೇರೆನ್ ಮ್ಯಾಡಿ, ಡ್ಯಾರೆನ್ ಸ್ಟೀವನ್ಸ್, ಜೇಮ್ಸ್ ಟಿಂಡಾಲ್, ರಿಕ್ಕಿ ಕ್ಲಾರ್ಕ್, ಸ್ಟೀಫನ್ ಪ್ಯಾರಿ, ಟಿಮ್ ಆಂಬ್ರೋಸ್, ಡಿಮಿಟ್ರಿ ಮಸ್ಕರೇನ್ಹಾಸ್, ಕ್ರಿಸ್ ಸ್ಕೋಫೀಲ್ಡ್, ಜೇಡ್ ಡೆರ್ನ್‌ಬಾಚ್ ಮತ್ತು ಮಾಲ್ ಲೋಯೆ.

ಬಾಂಗ್ಲಾದೇಶ ಲೆಜೆಂಡ್ಸ್ ಸ್ಕ್ವಾಡ್
ಶಹದತ್ ಹೊಸೈನ್ (ನಾಯಕ), ಅಬ್ದುರ್ ರಜಾಕ್, ಅಲಂಗೀರ್ ಕಬೀರ್, ಅಫ್ತಾಬ್ ಅಹ್ಮದ್, ಅಲೋಕ್ ಕಪಾಲಿ, ಮಾಮುನ್ ಉರ್ ರಶೀದ್, ನಜ್ಮುಸ್ ಸಾದತ್, ಧೀಮನ್ ಘೋಷ್, ಡೋಲರ್ ಮಹಮೂದ್, ಖಲೀದ್ ಮಷುದ್, ಮೊಹಮ್ಮದ್ ಷರೀಫ್, ಮೆಹ್ರಾಬ್ ಹೊಸೈನ್, ಇಲಿಯಾಸ್ ಸನ್ನಿ, ಮೊಹಮ್ಮದ್ ನಜಿಮುದ್ದೀನ್, ಅಬುಲ್ ಹಸನ್ ಮತ್ತು ತುಷಾರ್ ಇಮ್ರಾನ್.

ಶ್ರೀಲಂಕಾ ಲೆಜೆಂಡ್ಸ್ ಸ್ಕ್ವಾಡ್
ತಿಲಕರತ್ನೆ ಲ್ಶಾನ್ (ನಾಯಕ), ಕೌಶಲ್ಯ ವೀರರತ್ನೆ, ಮಹೇಲ ಉದವಟ್ಟೆ, ರುಮೇಶ್ ಸಿಲ್ವಾ, ಅಸೇಲ ಗುಣರತ್ನೆ, ಚಾಮರ ಸಿಲ್ವ, ಈಸೂರು ಉದಾನ, ಚಾಮರ ಕಪುಗೆದರ, ಚಾಮಿಂದ ವಾಸ್, ಚತುರಂಗ ಡಿ ಸಿಲ್ವ, ಸಿ ಜಯಸಿಂಗ್, ಧಮಿಕ್ಕ ಪ್ರಸಾದ್, ದಿಲ್ರುವಾನ್ ಪೆರೇರಾ, ದಿಲ್ಶಾನ್ ಮುನವೀರ, ಇಶಾನ್ ಜಯರತ್ನೆ, ಜೀವನ್ ಮೆಂಡಿಸ್, ನುವಾನ್ ಕುಲಶೇಖರ, ಸನತ್ ಜಯಸೂರ್ಯ, ಉಪುಲ್ ತರಂಗ, ಮತ್ತು ತಿಸಾರ ಪೆರೇರಾ.

Asia Cup 2022- Cold War Rishab Pant ಕಂಡ್ರೆ ಪಾಂಡ್ಯಗೆ ಆಗಲ್ವಾ !? | *Cricket | OneIndia Kannada

ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ಸ್ಕ್ವಾಡ್
ಜಾಂಟಿ ರೋಡ್ಸ್ (ನಾಯಕ), ಅಲ್ವಿರೋ ಪೀಟರ್ಸನ್, ಆಂಡ್ರ್ಯೂ ಪುಟ್ಟಿಕ್, ಎಡ್ಡಿ ಲೀ, ಗಾರ್ನೆಟ್ ಕ್ರುಗರ್, ಹೆನ್ರಿ ಡೇವಿಡ್ಸ್, ಜಾಕ್ವೆಸ್ ರುಡಾಲ್ಫ್, ಜೋಹಾನ್ ಬೋಥಾ, ಜೋಹಾನ್ ವ್ಯಾನ್ ಡೆರ್ ವಾತ್, ಲ್ಯಾನ್ಸ್ ಕ್ಲೂಸೆನರ್, ಎಲ್. ನಾರ್ರಿಸ್ ಜೋನ್ಸ್, ಮಖಯಾ ಎನ್ಟಿನಿ, ಮೊರ್ನೆ ವ್ಯಾನ್ ವೈಕ್, ಟಿ ತ್ಶಬಲಾಲಾ, ವೆರ್ನಾನ್ ಫಿಲಾಂಡರ್ ಮತ್ತು ಝಾಂಡರ್ ಡಿ ಬ್ರುಯಿನ್.

Story first published: Tuesday, September 6, 2022, 9:16 [IST]
Other articles published on Sep 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+