ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಡ್ ಸೇಫ್ಟಿ ಸೀರೀಸ್: ಭಾರತ ಸೇರಿ ಎಲ್ಲಾ 6 ದೇಶಗಳ ತಂಡಗಳ/ಆಟಗಾರರ ಪಟ್ಟಿ

Road Safety World Series: All 6 teams squads

ಬೆಂಗಳೂರು: ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಟಗಾರರ ಪ್ರದರ್ಶನವನ್ನು ಕ್ರಿಕೆಟ್ ಅಭಿಮಾನಿಗಳು ಖಂಡಿತಾ ಮಿಸ್ ಮಾಡಿಕೊಳ್ಳುತ್ತಾರೆ. ಅದರಲ್ಲೂ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಟಗಾರ ಪ್ರದರ್ಶನವನ್ನು ನೋಡೋದೇ ಸಾಧ್ಯವಿಲ್ಲ. ಆದರೆ ಅಂಥ ಆಟಗಾರರೂ ಕೂಡ ಮುಂದಿನ ತಿಂಗಳು ಮೈದಾನಕ್ಕಿಳಿಯಲಿದ್ದಾರೆ. ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟೂರ್ನಿಯಲ್ಲಿ ನಾವು ಕ್ರಿಕೆಟ್ ದಂತಕತೆಗಳ ಆಟವನ್ನು ಮತ್ತೆ ಕಣ್ತುಂಬಿಕೊಳ್ಳಬಹುದಾಗಿದೆ.

'ನರೇಂದ್ರ ಮೋದಿ ಸ್ಟೇಡಿಯಂ'ಗೆ ಅಪಸ್ವರ: ಜೋ ರೂಟ್ ಹೇಳಿದ್ದೇನು ಗೊತ್ತಾ?!'ನರೇಂದ್ರ ಮೋದಿ ಸ್ಟೇಡಿಯಂ'ಗೆ ಅಪಸ್ವರ: ಜೋ ರೂಟ್ ಹೇಳಿದ್ದೇನು ಗೊತ್ತಾ?!

2020ರ ಸೀಸನ್‌ ಕೊರೊನಾ ಕಾರಣದಿಂದ ಸಂಪೂರ್ಣವಾಗಿ ನಡೆದಿರಲಿಲ್ಲ. ಈ ಬಾರಿ ಇದೇ ಕುತೂಹಲಕಾರಿ ಟೂರ್ನಿ ಮಾರ್ಚ್ 5ರಿಂದ ಶುರುವಾಗಲಿದೆ. ಟೂರ್ನಿಯ ಎಲ್ಲಾ ಪಂದ್ಯಗಳು ಛತ್ತೀಸ್‌ಗಢದ ರಾಯ್‌ಪುರ್‌ನಲ್ಲಿರುವ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್‌ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಈ ಬಾರಿ ಒಟ್ಟು 6 ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸಲಿವೆ. 2021ರ ಐಪಿಎಲ್‌ಗೆ ಮುನ್ನ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಕ್ರಿಕೆಟ್ ಪ್ರಿಯನ್ನು ರಂಜಿಸಲಿದೆ.

ರೋಹಿತ್ ಶರ್ಮಾ ವಿಶ್ವ ದಾಖಲೆ ಸರಿಗಟ್ಟಿದ ಮಾರ್ಟಿನ್ ಗಪ್ಟಿಲ್!ರೋಹಿತ್ ಶರ್ಮಾ ವಿಶ್ವ ದಾಖಲೆ ಸರಿಗಟ್ಟಿದ ಮಾರ್ಟಿನ್ ಗಪ್ಟಿಲ್!

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನಲ್ಲಿ ಪಾಲ್ಗೊಳ್ಳುವ ಎಲ್ಲಾ 6 ದೇಶಗಳ ತಂಡಗಳ ಮಾಹಿತಿ ಇಲ್ಲಿವೆ.

ಶ್ರೀಲಂಕಾ ಲೆಜೆಂಡ್ಸ್‌

ಶ್ರೀಲಂಕಾ ಲೆಜೆಂಡ್ಸ್‌

ತಿಲಕರತ್ನೆ ದಿಲ್ಶನ್, ಸನತ್ ಜಯಸೂರ್ಯ, ಫರ್ವೀಜ್ ಮಹರೂಫ್, ರಂಗನಾ ಹೆರಾತ್, ತಿಲನ್ ತುಶಾರ, ಅಜಂತಾ ಮೆಂಡಿಸ್, ಚಮರ ಕಪುಗೆಡೆರಾ, ಉಪುಲ್ ತರಂಗಾ, ಚಮರ ಸಿಲ್ವಾ, ಚಿಂತಕ ಜಯಸಿಂಗ್, ಧಮ್ಮಿಕಾ ಪ್ರಸಾದ್, ನುವಾನ್ ಕುಲಸೇಕರ, ರಸೆಲ್ ಅರ್ನಾಲ್ಡ್, ದುಲಂಜನ ವಿಜೇಸಿಂಗೆ ಮತ್ತು ಮಲಿಂಡ ವರ್ಣಪುರ.

ವೆಸ್ಟ್ ಇಂಡೀಸ್ ಲೆಜೆಂಡ್ಸ್

ವೆಸ್ಟ್ ಇಂಡೀಸ್ ಲೆಜೆಂಡ್ಸ್

ಬ್ರಿಯಾನ್ ಲಾರಾ, ಟಿನೋ ಬೆಸ್ಟ್, ರಿಡ್ಲೆ ಜೇಕಬ್ಸ್, ನರಸಿಂಗ್ ಡಿಯೊನಾರೈನ್, ಸುಲಿಮಾನ್ ಬೆನ್, ದೀನನಾಥ್ ರಾಮ್‌ನರೀನ್, ಆ್ಯಡಮ್ ಸ್ಯಾನ್‌ಫೋರ್ಡ್, ಕಾರ್ಲ್ ಹೂಪರ್, ಡ್ವೇನ್ ಸ್ಮಿತ್, ರಿಯಾನ್ ಆಸ್ಟಿನ್, ವಿಲಿಯಂ ಪರ್ಕಿನ್ಸ್ ಮತ್ತು ಮಹೇಂದ್ರ ನಾಗಮೂಟೂ.

ಇಂಡಿಯಾ ಲೆಜೆಂಡ್ಸ್

ಇಂಡಿಯಾ ಲೆಜೆಂಡ್ಸ್

ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಪ್ರಗ್ಯಾನ್ ಓಜಾ, ನೋಯೆಲ್ ಡೇವಿಡ್, ಮುನಾಫ್ ಪಟೇಲ್, ಇರ್ಫಾನ್ ಪಠಾಣ್, ಮನ್‌ಪ್ರೀತ್ ಗೋನಿ, ಯೂಸುಫ್ ಪಠಾಣ್, ನಮನ್ ಓಜಾ, ಎಸ್ ಬದ್ರಿನಾಥ್ ಮತ್ತು ವಿನಯ್ ಕುಮಾರ್.

ಸೌತ್ ಆಫ್ರಿಕಾ ಲೆಜೆಂಡ್ಸ್

ಸೌತ್ ಆಫ್ರಿಕಾ ಲೆಜೆಂಡ್ಸ್

ಜಾಂಟಿ ರೋಡ್ಸ್ ಮೊರ್ನೆ ವ್ಯಾನ್ ವೈಕ್, ಗಾರ್ನೆಟ್ ಕ್ರುಗರ್, ರೋಜರ್ ಟೆಲಿಮಾಕಸ್, ಜಸ್ಟಿನ್ ಕೆಂಪ್, ಅಲ್ವಿರೊ ಪೀಟರ್ಸನ್, ನ್ಯಾಂಟಿ ಹೇವರ್ಡ್, ಆಂಡ್ರ್ಯೂ ಪುಟಿಕ್, ಲೂಟ್ಸ್ ಬೋಸ್ಮನ್, ಝ್ಯಾಂಡರ್‌ ಡೆ ಬ್ರ್ಯುಯಾನ್, ಥಾಂಡಿ ತ್ಸಾಬಲಾಲಾ, ಮೊಂಡೆ ಝೊಂಡೆಕಿ, ಮಖಾಯಾ ಎನ್‌ಟಿನಿ ಮತ್ತು ಲಾಯ್ಡ್ ನಾರ್ರಿಸ್-ಜೋನ್ಸ್.

ಇಂಗ್ಲೆಂಡ್ ಲೆಜೆಂಡ್ಸ್

ಇಂಗ್ಲೆಂಡ್ ಲೆಜೆಂಡ್ಸ್

ಕೆವಿನ್ ಪೀಟರ್ಸನ್, ಓವೈಸ್ ಷಾ, ಫಿಲಿಪ್ ಸಾಸಿವೆ, ಮಾಂಟಿ ಪನೇಸರ್, ನಿಕ್ ಕ್ರಾಂಪ್ಟನ್, ಕಬೀರ್ ಅಲಿ, ಸಾಜಿದ್ ಮಹಮೂದ್, ಜೇಮ್ಸ್ ಟ್ರೆಡ್ವೆಲ್, ಕ್ರಿಸ್ ಸ್ಕೋಫೀಲ್ಡ್, ಜೋನಾಥನ್ ಟ್ರಾಟ್, ರಿಯಾನ್ ಸೈಡ್ ಬಾಟಮ್, ಉಸ್ಮಾನ್ ಅಫ್ಜಾಲ್, ಮ್ಯಾಥ್ಯೂ ಹೊಗಾರ್ಡ್, ಜೇಮ್ಸ್ ಟಿಂಡಾಲ್.

ಬಾಂಗ್ಲಾದೇಶ್ ಲೆಜೆಂಡ್ಸ್

ಬಾಂಗ್ಲಾದೇಶ್ ಲೆಜೆಂಡ್ಸ್

ಖಲೀದ್ ಮಹಮ್ಮದ್, ನಫೀಸ್ ಇಕ್ಬಾಲ್, ಮೊಹಮ್ಮದ್ ರಫೀಕ್, ಅಬ್ದುರ್ ರಝಾಕ್, ಖಾಲಿದ್ ಮಶೂದ್, ಹನನ್ ಸರ್ಕಾರ್, ಜಾವೇದ್ ಒಮರ್, ರಜೀನ್ ಸಲೇಹ್, ಮೆಹ್ರಾಬ್ ಹೊಸೈನ್, ಅಫ್ತಾಬ್ ಅಹ್ಮದ್, ಆಲಮ್‌ಗೀರ್ ಕಬೀರ್, ಮೊಹಮ್ಮದ್ ಶರೀಫ್ ಮುಷ್ಫಿಕರ್ ರಹಮಾನ್, ಮಾಮೂನ್ ರಶೀದ್.

Story first published: Sunday, February 28, 2021, 0:29 [IST]
Other articles published on Feb 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X