Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ದಂತೆಕತೆಗಳಿರುವ ಭಾರತ ತಂಡ ಪ್ರಕಟ

Road Safety World Series: India announce star-studded squad

ಭಾರತದ ಕ್ರಿಕೆಟಿಗರಾದ ಯೂಸುಫ್ ಪಠಾಣ್, ನಮನ್ ಓಜಾ ಮತ್ತು ವಿನಯ್ ಕುಮಾರ್ ಇತ್ತೀಚೆಗಷ್ಟೇ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಆಟ ನಿಲ್ಲಿಸಿದ ಈ ಎಲ್ಲಾ ಆಟಗಾರರೊಂದಿಗೆ ಇನ್ನೊಂದಿಷ್ಟು ದಂತಕತೆಗಳು ಭಾರತ ಪರ ಮತ್ತೆ ಮೈದಾನಕ್ಕಿಳಿಯಲಿದ್ದಾರೆ.

ಮಾರ್ಚ್ 5ರಿಂದ ಆರಂಭಗೊಳ್ಳಲಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟೂರ್ನಿಯಲ್ಲಿ ಭಾರತದ ಕ್ರಿಕೆಟ್ ದಿಗ್ಗಜರೆಲ್ಲ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ಈ ಟೂರ್ನಿಗೆ ಸಂಬಂಧಿಸಿ ಭಾರತದ ಬಲಿಷ್ಠ ತಂಡ ಪ್ರಕಟಗೊಂಡಿದೆ.

2021ರ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ನಲ್ಲಿ ಟೀಮ್ ಇಂಡಿಯಾ ಪರ ಮಾಜಿ ಬ್ಯಾಟ್ಸ್ಮನ್ ಗಳಾದ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಆರಂಭಿಕರಾಗಿ ಆಡಲಿದ್ದಾರೆ. ಸಿಕ್ಸರ್ ಕಿಂಗ್ ಯುವರಾಜ್ ಕೂಡ ಭಾರತ ತಂಡಕ್ಕೆ ಬಲ ತುಂಬಲಿದ್ದಾರೆ. 2021ರ ಐಪಿಎಲ್‌ಗೆ ಮುನ್ನ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಕ್ರಿಕೆಟ್ ಪ್ರಿಯನ್ನು ರಂಜಿಸಲಿದೆ.

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಗೆ ಭಾರತ ತಂಡ
ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಪ್ರಗ್ಯಾನ್ ಓಜಾ, ನೋಯೆಲ್ ಡೇವಿಡ್, ಮುನಾಫ್ ಪಟೇಲ್, ಇರ್ಫಾನ್ ಪಠಾಣ್, ಮನ್‌ಪ್ರೀತ್ ಗೋನಿ, ಯೂಸುಫ್ ಪಠಾಣ್, ನಮನ್ ಓಜಾ, ಎಸ್ ಬದ್ರಿನಾಥ್ ಮತ್ತು ವಿನಯ್ ಕುಮಾರ್.

Story first published: Friday, March 5, 2021, 15:39 [IST]
Other articles published on Mar 5, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+