Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೆಸ್ಟ್ ಇಂಡೀಸ್ ಲೆಜೆಂಡ್ಸ್ ಮಣಿಸಿದ ಇಂಡಿಯಾ ಲೆಜೆಂಡ್ಸ್‌ ಫೈನಲ್‌ಗೆ ಎಂಟ್ರಿ!

Road Safety World Series: India Legends beat India Legends by 12 runs
West Indies Legends ತಂಡವನ್ನು ಸೋಲಿಸಿ ಚಾಂಪಿಯನ್ಷಿಪ್ ಸನಿಹಕ್ಕೆ ನಡೆದ India Legends | Oneindia Kannada

ರಾಯ್‌ಪುರ್: ರಾಯ್‌ಪುರ್‌ನ ಶಾಹಿದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ (ಮಾರ್ಚ್ 17) ನಡೆದ ರೋಡ್‌ ಸೇಫ್ಟಿ ವರ್ಲ್ಡ್ ಸೀರೀಸ್ ಸೆಮಿಫೈನಲ್ 1 ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ಲೆಜೆಂಡ್ಸ್‌ ವಿರುದ್ಧ ಇಂಡಿಯಾ ಲೆಜೆಂಡ್ಸ್‌ 12 ರನ್ ಜಯ ಗಳಿಸಿದೆ. ಈ ಗೆಲುವಿನೊಂದಿದೆ ಭಾರತ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಡಿಯಾ ಲೆಜೆಂಡ್ಸ್‌, ವೀರೇಂದ್ರ ಸೆಹ್ವಾಗ್ 35 (17), ನಾಯಕ ಸಚಿನ್ ತೆಂಡೂಲ್ಕರ್ 65 (42), ಮೊಹಮ್ಮದ್ ಕೈಫ್ 27, ಯೂಸೂಫ್ ಪಠಾಣ್ ಅಜೇಯ 37, ಯುವರಾಜ್ ಸಿಂಗ್ ಅಜೇಯ 49 (20) ರನ್‌ನೊಂದಿಗೆ 20 ಓವರ್‌ಗೆ 3 ವಿಕೆಟ್ ಕಳೆದು 218 ರನ್ ಗಳಿಸಿತು.

219 ರನ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಲೆಜೆಂಡ್ಸ್‌, ಡ್ವೇನ್ ಸ್ಮಿತ್ 63 (36), ವಿಲಿಯಮ್ ಪಾರ್ಕಿನ್ಸ್ 9, ನರಸಿಂಗ್ ಡಿಯೋನರೈನ್ 59 (44), ನಾಯಕ ಬ್ರಿಯಾನ್ ಲಾರಾ 46 (28) ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 206 ರನ್‌ಗಳಿಸಲಷ್ಟೇ ಶಕ್ತವಾಯ್ತು. ಮಾರ್ಚ್ 19ಕ್ಕೆ ಶ್ರೀಲಂಕಾ ಲೆಜೆಂಡ್ಸ್‌ ಮತ್ತು ಸೌತ್ ಆಫ್ರಿಕಾ ಲೆಜೆಂಡ್ಸ್‌ ಕಾದಾಡಲಿದ್ದು, ಗೆಲ್ಲುವ ತಂಡ ಭಾರತದ ವಿರುದ್ಧ ಫೈನಲ್‌ನಲ್ಲಿ ಆಡಲಿದೆ.

ಇಂಡಿಯಾ ಲೆಜೆಂಡ್ಸ್‌ ಇನ್ನಿಂಗ್ಸ್‌ನಲ್ಲಿ ಟಿನೋ ಬೆಸ್ಟ್‌ 2, ರಿಯಾನ್ ಅಸ್ಟಿನ್ 1 ವಿಕೆಟ್ ಪಡೆದರೆ, ವೆಸ್ಟ್‌ ಇಂಡೀಸ್ ಲೆಜೆಂಡ್ಸ್‌ ಇನ್ನಿಂಗ್ಸ್‌ನಲ್ಲಿ ಇಂಡಿಯಾ ಲೆಜೆಂಡ್ಸ್‌ನ ವಿನಯ್ ಕುಮಾರ್ 2, ಇರ್ಫಾನ್ ಪಠಾಣ್, ಮನ್‌ಪ್ರೀತ್‌ ಗೋನಿ, ಪ್ರಗ್ಯಾನ್ ಓಜಾ ತಲಾ 1 ವಿಕೆಟ್‌ನೊಂದಿಗೆ ಗಮನ ಸೆಳೆದರು.

Story first published: Thursday, March 18, 2021, 9:52 [IST]
Other articles published on Mar 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+