Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಠಾಣ್ ಸ್ಫೋಟಕ ಬ್ಯಾಟಿಂಗ್: ಶ್ರೀಲಂಕಾ ವಿರುದ್ಧ ಇಂಡಿಯಾಕ್ಕೆ ರೋಚಕ ಜಯ!

Road Safety World Series: India Legends won by 5 wickets against Sri Lanka

ಮುಂಬೈ, ಮಾರ್ಚ್ 11: ಇರ್ಫಾನ್ ಪಠಾಣ್ ಮತ್ತು ಮೊಹಮ್ಮದ್ ಕೈಫ್ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2020 ಟೂರ್ನಿಯ 3ನೇ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್‌ ವಿರುದ್ಧ ಇಂಡಿಯಾ ಲೆಜೆಂಡ್ಸ್ 5 ವಿಕೆಟ್ ಜಯ ಗಳಿಸಿದೆ. ಭಾರತ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದು ಪಂದ್ಯ ಸೋಲುವ ಸಾಧ್ಯತೆಯಿತ್ತಾದರೂ ಕೈಫ್ ಮತ್ತು ಪಠಾಣ್ ಆಟ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದು ಗೆಲ್ಲಿಸಿತು. ಲಂಕಾ ಇನ್ನಿಂಗ್ಸ್‌ನಲ್ಲಿ ಮುನಾಫ್‌ ಪಟೇಲ್ ಮಾರಕ ಬೌಲಿಂಗ್‌ ಕೂಡ ಇಂಡಿಯಾ ಗೆಲುವಿಗೆ ನೆರವು ನೀಡಿತು.

ಮುಂಬೈಯ ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಮಂಗಳವಾರ (ಮಾರ್ಚ್ 10) ನಡೆದ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್‌, ಆರಂಭದಲ್ಲೇ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್‌ ಸಿಂಗ್‌ ಅವರ ವಿಕೆಟ್‌ಗಳನ್ನು ಕಳೆದು ಒತ್ತಡಕ್ಕೆ ಸಿಲುಕಿತ್ತು.

ಶ್ರೀಲಂಕಾ ಲೆಜೆಂಡ್ಸ್‌ ಇನ್ನಿಂಗ್ಸ್‌ನಲ್ಲಿ ಮುನಾಫ್ ಪಟೇಲ್ ತೋರಿದ ಅದ್ಭುತ ಬೌಲಿಂಗ್, ಮೊಹಮ್ಮದ್ ಕೈಫ್ ಅವರ ಆಕರ್ಷಕ ಫೀಲ್ಡಿಂಗ್ ಕೂಡ ಇಂಡಿಯಾ ಲೆಜೆಂಡ್ಸ್ ವಿಜಯಕ್ಕೆ ಕಾರಣವೆ.

ಶ್ರೀಲಂಕಾ ಸಾಧಾರಣ ಬ್ಯಾಟಿಂಗ್

ಶ್ರೀಲಂಕಾ ಸಾಧಾರಣ ಬ್ಯಾಟಿಂಗ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ಲೆಜೆಂಡ್ಸ್‌ನಿಂದ ನಾಯಕ ತಿಲಕರತ್ನೆ ದಿಲ್ಶನ್ 23, ರೋಮೇಶ್ ಕಲುವಿತರಣ 21, ತಿಲಾನ್ ತುಷಾರ 10, ಚಮರ ಕಪುಗೆದೆರ 23, ಸಚಿತ್ರ ಸೇನಾನಾಯಕೆ 19, ಫರ್ವೀಜ್ ಮಹರೂಫ್ 10, ಅಜಂತ ಮೆಂಡಿಸ್ 9 ರನ್‌ ಸೇರಿಸಿದರು. ಲಂಕಾ 20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 138 ರನ್ ಗಳಿಸಿತು.

ಭಾರತಕ್ಕೆ ಆರಂಭದಲ್ಲೇ ಆಘಾತ

ಭಾರತಕ್ಕೆ ಆರಂಭದಲ್ಲೇ ಆಘಾತ

ಶ್ರೀಲಂಕಾ ನೀಡಿದ್ದ 139 ಸುಲಭ ರನ್ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಯಾಕೆಂದರೆ ಆರಂಭಿಕ ಬ್ಯಾಟ್ಸ್‌ಗಳಾದ ಸಚಿನ್ ತೆಂಡೂಲ್ಕರ್ 0, ವೀರೇಂದ್ರ ಸೆಹ್ವಾಗ್ 3 ರನ್‌ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್‌ ಸಿಂಗ್‌ ಕೂಡ ಚಮಿಂದ ವಾಸ್‌ ಓವರ್‌ನಲ್ಲಿ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.

ಪಠಾಣ್ ಸ್ಫೋಟಕ ಆಟ

ಪಠಾಣ್ ಸ್ಫೋಟಕ ಆಟ

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ 'ಭಾರತದ ಜಾಂಟಿ ರೋಡ್ಸ್' ಮೊಹಮ್ಮದ್ ಕೈಫ್, ಕೊಂಚ ಕಾಲ ಕ್ರೀಸ್‌ನಲ್ಲಿ ನಿಂತಿದ್ದು ಭಾರತ ತಂಡಕ್ಕೆ ಬಲ ತಂದಿತು. ಕೈಫ್ 46 ರನ್ ಕೊಡುಗೆ ಕೊಟ್ಟು ನಿರ್ಗಮಿಸಿದರಾದರೂ ಅಷ್ಟರಲ್ಲೇ ಬ್ಯಾಟಿಂಗ್‌ಗೆ ಬಂದಿದ್ದ ಇರ್ಫಾನ್ ಪಠಾಣ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಲಾರಂಭಿಸಿದರು.

ಮುನಾಫ್ ಮಾರಕ ಬೌಲಿಂಗ್

ಮುನಾಫ್ ಮಾರಕ ಬೌಲಿಂಗ್

ಕ್ರೀಸಿಗಂಟಿನಿಂತ ಪಠಾಣ್ 6 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ ಅಜೇಯ 57 ರನ್ ಬಾರಿಸಿ ಇಂಡಿಯಾ ಲೆಜೆಂಡ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. 18.4ನೇ ಓವರ್‌ಗೆ 5 ವಿಕೆಟ್‌ ಕಳೆದು 139 ರನ್ ಪೇರಿಸಿ ಭಾರತ ಗೆಲುವನ್ನಾಚರಿಸಿತು. ಲಂಕಾ ಇನ್ನಿಂಗ್ಸ್‌ನಲ್ಲಿ ಭಾರತದ ಮುನಾಫ್ ಪಟೇಲ್ 19 ರನ್‌ಗೆ 4 ವಿಕೆಟ್‌ ಮುರಿದರೆ, ಭಾರತದ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದ ಚಮಿಂದ ವಾಸ್ 5 ರನ್‌ಗೆ 2 ವಿಕೆಟ್‌ ಮುರಿದು ಗಮನ ಸೆಳೆದರು. ಇರ್ಫಾನ್ ಪಠಾಣ್ ಪಂದ್ಯಶ್ರೇಷ್ಠರೆನಿಸಿದರು.

Story first published: Wednesday, March 11, 2020, 0:16 [IST]
Other articles published on Mar 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+