ಕೊಹ್ಲಿಯ ಸ್ಥಾನವನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ: ಮಾಜಿ ನಾಯಕನ ಬೆನ್ನಿಗೆ ನಿಂತ ಕನ್ನಡಿಗ ಆಟಗಾರ!

ಟೀಮ್ ಇಂಡಿಯಾದ ಅನುಭವಿ ಆಟಗಾರ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದು ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ಸದ್ಯ ಭಾರತ ತಂಡದಲ್ಲಿ ಕೊಹ್ಲಿ ಸ್ಥಾನದ ಬಗ್ಗೆಯೂ ಪ್ರಶ್ನೆಗಳು ಏಳುತ್ತಿದೆ. ಮುಂಬರುವ ಏಷ್ಯಾ ಕಪ್ ಹಾಗೂ ವಿಶ್ವಕಪ್ ಟೂರ್ನಿಗಳಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆಯಲಿದ್ದಾರೆಯೇ ಎಂಬುದು ಕೂಡ ಪ್ರಶ್ನೆಯಾಗಿದೆ. ವಿರಾಟ್ ಕೊಹ್ಲಿಯನ್ನು ತಂಡದಿಂದ ಹೊರಗಿಡಬೇಕು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಮೂಲದ ಹಿರಿಯ ಆಟಗಾರ ವಿರಾಟ್ ಕೊಹ್ಲಿಯ ಬೆಂಬಲಕ್ಕೆ ನಿಂತಿದ್ದಾರೆ. ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಯ ಸ್ಥಾನದ ಬಗ್ಗೆ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಎಂದಿದ್ದಾರೆ. ತಮ್ಮ ಹೇಳಿಕೆಗೆ ಕೆಲ ಪೂರಕ ಅಂಶಗಳನ್ನು ಕೂಡ ಅನುಭವಿ ಕ್ರಿಕೆಟಿಗ ಹೇಳಿಕೊಂಡಿದ್ದಾರೆ.
ಹಾಗಾದರೆ ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತ ಕನ್ನಡಿಗ ಯಾರು? ಅವರು ಏನು ಹೇಳಿದ್ದಾರೆ ಮುಂದೆ ಓದಿ..

ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದ ರಾಬಿನ್ ಉತ್ತಪ್ಪ
ಅನುಭವಿ ಆಟಗಾರ ವಿರಾಟ್ ಕೊಹ್ಲಿ ಫಾರ್ಮ್ ವಿಚಾರವಾಗಿ ಟೀಕೆಯನ್ನು ಮಾಡುತ್ತಿರುವವರಿಗೆ ಕನ್ನಡಿಗ ರಾಬಿನ್ ಉತ್ತಪ್ಪ ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ ಭಾರತ ತಂಡದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿಯ ಸ್ಥಾನವನ್ನು ಪ್ರಶ್ನಿಸುವುದು ಹಾಗೂ ಎರಡು ಪ್ರಮುಖ ಸರಣಿಗಳ ಮಧ್ಯೆ ವಿಶ್ರಾಂತಿಯನ್ನು ಪಡೆಯುವುದನ್ನು ಪ್ರಶ್ನಿಸುವುದು ನ್ಯಾಯ ಅಲ್ಲ ಎಂದಿದ್ದಾರೆ. "ಒಂದರ ನಂತರ ಮತ್ತೊಂದರಂತೆ ಶತಕದ ಮೇಲೆ ಶತಕ ಬಾರಿಸಲು ಕುಡ ಓಈ ಹಿಂದೆ ಯಾರೂ ಹೇಳಿರಲಿಲ್ಲ. ಅವರು ತಮ್ಮ ಫಾರ್ಮ್‌ಅನ್ನು ಮರಳಿ ಗಳಿಸಿಕೊಳ್ಳಲು ಸಮರ್ಥವಾಗಿದ್ದಾರೆ" ಎಂದಿದ್ದಾರೆ ರಾಬಿನ್ ಉತ್ತಪ್ಪ.

30-35 ಶತಕ ಗಳಿಸುವಷ್ಟು ಸಮರ್ಥರಿದ್ದಾರೆ
ಮುಂದುವರಿದು ಮಾತನಾಡಿರುವ ರಾಬಿನ್ ಉತ್ತಪ್ಪ ವಿರಾಟ್ ಕೊಹ್ಲಿಯ ಸಾಮರ್ಥ್ಯದ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರು ಇನ್ನು ಕೂಡ ಸುಮಾರು 30-35ರಷ್ಟು ಶತಕಗಳಿಸುವ ಸಾಮರ್ಥ್ಯವನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ ಎಂದಿದ್ದಾರೆ. ಭಾರತ ತಂಡದಲ್ಲಿ ವಿರಾಟ್ ಕೊಹ್ಲಿಯ ಮ್ಯಾಚ್ ವಿನ್ನಿಂಗ್ ಸಾಮರ್ಥ್ಯವನ್ನು ಪ್ರಶ್ನಿಸುವುದು ಸರಿಯಲ್ಲ ಎಂದಿದ್ದಾರೆ. ಇನ್ನು ಯಾರಿಗೂ ಕೂಡ ಭಾರತ ತಂಡದಲ್ಲಿ ಕೊಹ್ಲಿ ಏನು ಮಾಡಬೇಕು ಹೇಗೆ ಆಡಬೇಕು ಎಂಬುದನ್ನು ಹೇಳುವ ಅಧಿಕಾರವಿಲ್ಲ ಎಂದಿದ್ದಾರೆ.

ಇಂಗ್ಲೆಂಡ್‌ನಲ್ಲಿಯೂ ಮುಂದುವರಿದ ಕೊಹ್ಲಿ ಕಳಪೆ ಫಾರ್ಮ್
ಕ್ರಿಕೆಟ್‌ನ ಎಲ್ಲಾ ಮಾದರಿಯಲ್ಲಿಯೂ ರನ್‌ಗಳಿಸಲು ವಿಫಲವಾಗುತ್ತಿರುವ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಅಂತ್ಯವಾಗಿರುವ ಇಂಗ್ಲೆಂಡ್ ಪ್ರವಾಸದಲ್ಲಿಯೂ ಕಳಪೆ ಫಾರ್ಮ್ ಮುಂದುವರಿಸಿದ್ದರು. ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ಕೊಹ್ಲಿ ಆಡಿದ 4 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 45 ರನ್ ಮಾತ್ರ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಫಾರ್ಮ್‌ಗೆ ಮರಳುವ ದೃಷ್ಟಿಯಿಂದ ವಿಶ್ರಾಂತಿಯನ್ನು ಪಡೆದುಕೊಂಡಿದ್ದರು. ನಂತರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾಗಿಯಾಗಿದ್ದರು. ಆದರೆ ಈ ಪಂದ್ಯದಲ್ಲಿಯೂ ಕೊಹ್ಲಿ ನಿರಾಸೆ ಅನುಭವಿಸಿದ್ದಾರೆ.

ಅಂದು ಯಾರೂ ಹೇಳಿರಲಿಲ್ಲ ಎಂದ ಉತ್ತಪ್ಪ
ಶೇರ್‌ಚಾಟ್‌ನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಾಬಿನ್ ಉತ್ತಪ್ಪ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. "ವಿರಾಟ್ ಕೊಹ್ಲಿ ರನ್‌ಗಳಿಸುತ್ತಿದ್ದಾಗ, ಒಂದರ ಬಳಿಕ ಮತ್ತೊಂದರಂತೆ ಶತಕ ಬಾರಿಸುತ್ತಿದ್ದಾಗ ಯಾರೂ ಕೂಡ ಹೀಗೆ ಆಡಬೇಕು ಹಾಗೆ ಆಡಬೇಕು ಎಂದು ಹೇಳಿರಲಿಲ್ಲ. ಹಾಗಾಗಿ ಈಗ ನಮಗೆ ಯಾರಿಗೂ ಅವರು ಹೀಗೆ ಆಡಬೇಕು ಹಾಗೆ ಆಡಬೇಕು ಎಂದು ಹೇಳುವ ಅಧಿಕಾರವಿಲ್ಲ. ಅವರ ಸ್ವಂತ ಸಾಮರ್ಥ್ಯದಿಂದಲೇ ಅವರು 70 ಶತಕ ಬಾರಿಸಿದ್ದಾರೆ. ಅವರು ಇನ್ನು ಕೂಡ 30ರಿಂದ 35 ಶತಕ ಬಾರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ರಾಬಿನ್ ಉತ್ತಪ್ಪ ಪ್ರತಿಕ್ರಿಯಿಸಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications