ರಾಬಿನ್ ಉತ್ತಪ್ಪ ಸೌರಷ್ಟ್ರ ಪರ ಆಡುವುದಕ್ಕೆ ಓಕೆ ಎಂದ ಬಿಸಿಸಿಐ
ಬೆಂಗಳೂರು, ಆಗಸ್ಟ್ 11 : ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವನ್ನು ತೊರೆದಿರುವ ಕನ್ನಡಿಗ ರಾಬಿನ್ ಉತ್ತಪ್ಪ ಅವರು ಮುಂಬರುವ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ತಂಡದ ಪರ ಕಣಕ್ಕಿಳಿಯಲಿದ್ದಾರೆ.
31 ವರ್ಷದ ಉತ್ತಪ್ಪ ಅವರು ಸೌರಾಷ್ಟ್ರ ಪರ ಆಡುವುದಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಒಪ್ಪಿಗೆ ದೊರೆತಿದೆ.

ಉತ್ತಪ್ಪ ಕೇರಳ ತಂಡವನ್ನು ಸೇರ್ಪಡೆಗೊಳ್ಳುತ್ತಾರೆಂಬ ಸುದ್ದಿಗಳೂ ಹರಿದಾಡಿದ್ದವು. ಆದರೀಗ, ಅವರು ಸೌರಾಷ್ಟ್ರ ತಂಡದಲ್ಲಿ ಆಡುವುದು ಪಕ್ಕಾ ಆಗಿದೆ.
ಕರ್ನಾಟಕ ತಂಡದಲ್ಲಿ ಸುಮಾರು 15 ವರ್ಷಗಳ ಕಾಲ ಆಡಿದ್ದ ರಾಬಿನ್, ಕೆಲವು ತಿಂಗಳುಗಳ ಹಿಂದೆ ರಾಜ್ಯ ತಂಡವನ್ನು ತೊರೆದಿದ್ದರು.
ಈ ವರೆಗೆ 101 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಉತ್ತಪ್ಪ 6865 ರನ್ ಗಳನ್ನು ಸಂಪಾದಿಸಿದ್ದಾರೆ. ಇದರಲ್ಲಿ 18 ಶತಕ ಹಾಗೂ 33 ಅರ್ಧಶತಕಗಳು ಸೇರಿಕೊಂಡಿವೆ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications