ಭಾರತೀಯ ಆಟಗಾರರಲ್ಲಿ ಅಭದ್ರತೆ ಮೂಡಿಸುತ್ತಿದೆ ಬಿಸಿಸಿಐ ನಡೆ: ರಾಬಿನ್ ಉತ್ತಪ್ಪ

ಟೀಮ್ ಇಂಡಿಯಾದ ಮಾಜಿ ಆಟಗಾರ ಕನ್ನಡಿಗ ರಾಬಿನ್ ಉತ್ತಪ್ಪ ಭಾರತೀಯ ಆಟಗಾರರಿಗೆ ಅಸುರಕ್ಷತೆಯ ಭಾವನೆ ಕಾಡುತ್ತಿದೆ ಎಂಬ ಹೇಳಿಕೆ ನೀಡಿದ್ದಾರೆ. ಭಾರತೀಯ ತಂಡದಲ್ಲಿ ಪದೇ ಪದೇ ಆಟಗಾರರ ಬದಲಾವಣೆಯಾಗುತ್ತಿರುವ ಕಾರಣದಿಂದಾಗಿ ಆಟಗಾರ ಮನಸ್ಸಿನ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತಿದೆ ಎಂದಿದ್ದಾರೆ ಉತ್ತಪ್ಪ. 2022ರಲ್ಲಿ ರಾಬಿನ್ ಉತ್ತಪ್ಪ ಭಾರತೀಯ ಕ್ರಿಕೆಟ್‌ನ ಎಲ್ಲಾ ಮಾದರಿಗೆ ನಿವೃತ್ತಿಯನ್ನು ಘೋಷಿಸಿದ್ದು ಸದ್ಯ ವಿದೇಶಿ ಲೀಗ್‌ನಲ್ಲಿ ಆಡುತ್ತಿದ್ದಾರೆ.
ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಕಳೆದ ಒಂದೂವರೆ ವರ್ಷಗಳಿಂದ ಭಾರತೀಯ ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ಸಾಕಷ್ಟು ಪ್ರಮಾಣದಲ್ಲಿ ಹೊಸ ಆಟಗಾರರು ತಂಡದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದು ಅಷ್ಟೇ ವೇಗವಾಗಿ ಕೆಲ ಆಟಗಾರರು ತಂಡದಿಂದ ಹೊರಬಿದ್ದಿದ್ದಾರೆ. ಈ ಹಿನ್ನೆಕೆಯಲ್ಲಿ ರಾಬಿನ್ ಉತ್ತಪ್ಪ ಪ್ರತಿಕ್ರಿಯೆ ನೀಡಿದ್ದು ಈ ರೀತಿಯಾಗಿ ಅತಿಯಾಗಿ ಮಾಡುವ ಬದಲಾವಣೆಗಳು ತಂಡದ ಆಟಗಾರರಲ್ಲಿ ಅಭದ್ರತೆಯ ಭಾವನೆ ಮೂಡಿಸುತ್ತದೆ ಎಂದಿದ್ದಾರೆ.

ಆಟಗಾರರಲ್ಲಿದೆ ಅಭದ್ರತೆಯ ಭಾವನೆ
"ನನ್ನ ಪ್ರಕಾರ ಭಾರತೀಯ ತಂಡದ ಆಟಗಾರರಲ್ಲಿ ಅಭದ್ರತೆಯ ಭಾವನೆ ಕಾಡುತ್ತಿದೆ. ಬಹಳ ಕಾಲದಿಂದ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಆಟಗಾರೊಬ್ಬನಿಗೆ ಸುರಕ್ಷತೆಯ ಭಾವನೆ ಮೂಡದಿದ್ದರೆ ಆತ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುವುದರ ಮೇಲೆಯೇ ಹೆಚ್ಚಿನ ಗಮನಹರಿಸುತ್ತಾನೆ. ಎಂದು ರಾಬಿನ್ ಉತ್ತಪ್ಪ ಪಿಟಿಐಗೆ ಈಡಿರುವ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.

ಐಸಿಸಿ ಟೂರ್ನಿಯಲ್ಲಿನ ವೈಫಲ್ಯಕ್ಕೆ ಇದೇ ಕಾರಣವಾ?
ಇನ್ನು ಇದೇ ಸಂದರ್ಭದಲ್ಲಿ ಉತ್ತಪ್ಪ, ಭಾರತೀಯ ತಂಡ ಐಸಿಸಿ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಲು ಕಾರಣ ಕೂಡ ಇದೇ ಅಸುರಕ್ಷತೆಯ ಭಾವನೆ ಎಂಬ ಬಗ್ಗೆ ಸುಳಿವು ನೀಡಿದ್ದಾರೆ. ಉತ್ತಮ ಪ್ರದರ್ಶನ ನೀಡದಿದ್ದರೆ ಬೆಂಚ್ ಕಾಯಬೇಕಾಗುತ್ತದೆ ಎಂಬ ಭಯ ಆಟಗಾರರಲ್ಲಿ ಮೂಡುತ್ತದೆ. ಇದಕ್ಕೆ ಉತ್ತಮವಾದ ಉದಾಹರಣೆ ಕುಲ್ದೀಪ್ ಯಾದವ್ ಎಂದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳನ್ನು ಪಡೆದ ಹೊರತಾಗಿಯೂ ಆಡುವ ಬಳಗದಿಂದ ಹೊರಗಿಡಲಾಯಿತು. ಇದು ಆಟಗಾರರಿಗೆ ಉತ್ತಮ ಸಂದೇಶ ನೀಡುವುದಿಲ್ಲ ಎಂದಿದ್ದಾರೆ ಉತ್ತಪ್ಪ.

ಯುವ ಆಟಗಾರರಿಗೆ ಉತ್ತಮ ಸಂದೇಶ ನೀಡುವುದಿಲ್ಲ
"ಕುಲ್‌ದೀಪ್ ಯಾದವ್ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಆಗಿದ್ದವರು. ಆದರೆ ಮುಂದಿನ ಪಂದ್ಯದಲ್ಲಿ ಅವರನ್ನು ಹೊರಗಿಡಲಾಯಿತು. ಇದು ಉತ್ತಮ ಸಂದೇಶವನ್ನು ನೀಡುವುದಿಲ್ಲ. ನೀವು ಕುಲ್ದೀಪ್‌ಗೆ ಪರಿಸ್ಥಿತಿಯನ್ನು ವಿವರಿಸಬಹುದು. ಆದರೆ ಇದು ಯುವ ಆಟಗಾರರಿಗೆ ಕೆಟ್ಟ ಸಂದೇಶ ನೀಡುತ್ತದೆ. ಪಂದ್ಯಶ್ರೇಷ್ಠ ಪ್ರಶಸ್ಸತಿ ಪಡೆದವನಿಗೂ ಸ್ಥಾನದ ಭದ್ರತೆಯಿಲ್ಲ ಎನ್ನುವುದು ಯುವ ಆಟಗಾರರಿಗೆ ಉತ್ತಮ ಸಂದೇಶ ನೀಡಲಾರದು" ಎಂದಿದ್ದಾರೆ ರಾಬಿನ್ ಉತ್ತಪ್ಪ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications