ತನ್ನ ಪಾಲಿನ ಶ್ರೇಷ್ಠ ನಾಯಕನನ್ನು ಹೆಸರಿಸಿದ ಕನ್ನಡಿಗ ರಾಬಿನ್ ಉತ್ತಪ್ಪ

ಕನ್ನಡಿಗ ರಾಬಿನ್ ಉತ್ತಪ್ಪ ಮತ್ತೆ ಸುದ್ದಿಯಲ್ಲಿದ್ದಾರೆ. ಟೀಮ್ ಇಂಡಿಯಾಗೆ ಮರಳುವ ಕನಸು ವ್ಯಕ್ತಪಡಿಸಿದ ಬಳಿಕ ಮತ್ತೊಂದು ಪ್ರಮುಖ ವಿಚಾರವನ್ನು ಹಂಚಿಕೊಂಡು ಸುದ್ದಿಕೇಂದ್ರಕ್ಕೆ ಬಂದಿದ್ದಾರೆ ರಾಬಿನ್ ಉತ್ತಪ್ಪ. ತಾವು ಆಡಿದ ನಾಯಕರ ವಿಚಾರವಾಗಿ ಈಗ ರಾಬಿನ್ ಹೇಳಿಕೆ ನೀಡಿದ್ದಾರೆ.
ಟೀಮ್ ಇಂಡಿಯಾ ಪರವಾಗಿ ಮತ್ತೆ ಕಣಕ್ಕಿಳಿಯುವ ಭರವಸೆ ವ್ಯಕ್ತಪಡಿಸಿದ ಕನ್ನಡಿಗ ರಾಬಿನ್ ಉತ್ತಪ್ಪ ತಾವು ಕಂಡ ಶ್ರೇಷ್ಠ ನಾಯಕ ಯಾರು ಎಂಬುದನ್ನು ಬಹಿರಂಗಗೊಳಿಸಿದ್ದಾರೆ. ಟೀಮ್ ಇಂಡಿಯಾದಲ್ಲಿ ರಾಹುಲ್ ದ್ರಾವಿಡ್ ಅವರ ನಾಯಕತ್ವದಿಂದ ಆರಂಭಿಸಿ ಹಲವು ನಾಯಕರನ್ನು ಕಂಡಿದ್ದಾರೆ.
ರಾಬಿನ್ ಉತ್ತಪ್ಪ ಪಾಲಿಗೆ ಶ್ರೇಷ್ಠ ನಾಯಕ ಯಾರು? ಅದಕ್ಕೆ ಏನು ಕಾರಣ ಮುಂದೆ ಓದಿ..

ರಾಬಿನ್‌ಗೆ ಬೆಸ್ಟ್ ಟೀಮ್ ಇಂಡಿಯಾ ನಾಯಕರಲ್ಲ
ಕನ್ನಡಿಗ ರಾಬಿನ್ ಉತ್ತಪ್ಪಗೆ ಟೀಮ್ ಇಂಡಿಯಾದಲ್ಲಿ ಹಲವು ವರ್ಷಗಳ ಕಾಲ ಸ್ಥಾನವನ್ನು ಪಡೆದುಕೊಂಡ ಆಟಗಾರ. ಕೆಲ ಪ್ರಮುಖ ಆಟಗಾರರ ನಾಯಕತ್ವದ ಕೆಳಗೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಆದರೆ ಟೀಮ್ ಇಂಡಿಯಾವನ್ನು ಮುನ್ನಡೆಸಿದ ನಾಯಕರಿಗಿಂತಲೂ ಇನ್ನೊಬ್ಬ ಆಟಗಾರನ ನಾಯಕತ್ವ ತನಗಿಷ್ಟ ಎಂಬುದನ್ನು ರಾಬಿನ್ ಉತ್ತಪ್ಪ ಬಿಚ್ಚಿಟ್ಟಿದ್ದಾರೆ.

ಐಪಿಎಲ್ ನಾಯಕನೇ ಬೆಸ್ಟ್
ಟೀಮ್ ಇಂಡಿಯಾದಲ್ಲಿ ಮಾಜಿ ನಾಯಕ ರಾಹುಲ್ ದ್ರಾವಿಡ್ ಅಥವಾ ಧೋನಿಯಂತಾ ನಾಯಕರ ಸಂದರ್ಭದಲ್ಲಿ ರಾಬಿನ್ ಉತ್ತಪ್ಪ ಪ್ರತಿನಿಧಿಸಿದ್ದಾರೆ. ಆದರೆ ರಾಬಿನ್ ಉತ್ತಪ್ಪ ಪಾಲಿಗೆ ಈ ಇಬ್ಬರೂ ಆಟಗಾರರಿಗಿಂತಲೂ ಐಪಿಎಲ್ ತಂಡದ ನಾಯಕನೇ ಬೆಸ್ಟ್ ಅನಿಸಿದೆ.

ಐಪಿಎಲ್ ನಾಯಕ ಗಂಭೀರ್ ಬೆಸ್ಟ್
ರಾಬಿನ್ ಉತ್ತಪ್ಪ ಪಾಲಿಗೆ ಶ್ರೇಷ್ಠ ನಾಯಕ ಗೌತಮ್ ಗಂಭೀರ್ ಅಂತೆ. ಸ್ವತಃ ಉತ್ತಪ್ಪ ಈ ವಿಚಾರವನ್ನು ತಿಳಿಸಿದ್ದಾರೆ. ಕ್ರಿಕ್ ಇನ್ಫೋ ಜೊತೆಗೆ ನಡೆಸಿದ ಸಂದರ್ಶನದಲ್ಲಿ ರಾಬಿನ್ ಉತ್ತೊ್ಒ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಕಡಿಮೆ ಮಾತಿನಲ್ಲಿ ಹೆಚ್ಚು ಅರ್ಥೈಸುತ್ತಿದ್ದರು
ಗೌತಮ್ ಗಂಬೀರ್ ಕಡಿಮೆ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಆದರೆ ಆ ಮಾತುಗಳಲ್ಲೇ ಗಂಭೀರ್ ಎಲ್ಲವನ್ನೂ ಅರ್ಥೈಸುತ್ತಿದ್ದರು ಎಂದು ರಾಬಿನ್ ಉತ್ತಪ್ಪ ಹೇಳಿಕೊಂಡಿದ್ದಾರೆ. ಗೌತಮ್ ಗಂಭೀರ್ ಅವರು ತಂಡದ ಆಟಗಾರರಲ್ಲಿ ಭದ್ರತೆಯ ಭಾವವನ್ನು ಮೂಡಿಸುತ್ತಿದ್ದರು. ಓರ್ವ ಉತ್ತಮ ನಾಯಕನಿಂದ ಮಾತ್ರವೇ ಈ ರೀತಿಯ ಭಾವ ಮೂಡಿಸಲು ಸಾಧ್ಯ ಎಂದು ರಾಬಿನ್ ಉತ್ತಪ್ಪ ಹೇಳಿಕೊಂಡಿದ್ದಾರೆ.

ಕೆಕೆಆರ್‌ನಲ್ಲಿ ಪ್ರಮುಖ ಆಟಗಾರ ಉತ್ತಪ್ಪ
ಗೌತಮ್ ಗಂಭೀರ್ ನಾಯಕತ್ವದ ಅಡಿಯಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ಪರ ರಾಬಿನ್ ಉತ್ತಪ್ಪ ಆರು ಆವೃತ್ತಿಗಳಲ್ಲಿ ಆಡಿದ್ದಾರೆ. 2012ರಲ್ಲಿ ಕೆಕೆಆರ್ ತಂಡ ಸೇರಿದ ರಾಬಿನ್, ತಂಡ ಮೊತ್ತ ಮೊದಲ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಬಳಿಕ 2014ರಲ್ಲಿ ಕೆಕೆಆರ್ ತಂಡಕ್ಕೆ ಎರಡನೇ ಟ್ರೋಫಿ ಗೆದ್ದುಕೊಡುವಲ್ಲೂ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಈ ಬಾರಿಯ ಹರಾಜಿನಲ್ಲಿ ಆರ್‌ಆರ್ ಪಾಲು
ರಾಬಿನ್ ಉತ್ತಪ್ಪ ಈ ಬಾರಿಯ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಸನ ನೀಡಿ ಟೀಮ್ ಟೀಮ್ ಇಂಡಿಯಾ ತಂಡದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಮಹದಾಸೆಯನ್ನು ಇಟ್ಟುಕೊಂಡಿದ್ದಾರೆ ಉತ್ತಪ್ಪ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications