ಐಪಿಎಲ್ ಪ್ರದರ್ಶನ ಮತ್ತು ವಿಶ್ವಕಪ್ ಆಯ್ಕೆ ಬಗ್ಗೆ ರೋಹಿತ್ ಹೀಗಂತಾರೆ!

ಮುಂಬೈ, ಏಪ್ರಿಲ್ 5: ಐಪಿಎಲ್ ಮುಗಿದ ಬಳಿಕ ಸದ್ಯಕ್ಕೆ ಟೀಮ್ ಇಂಡಿಯಾಕ್ಕೆ ವಿಶ್ವಕಪ್ ಬಿಟ್ಟರೆ ಬೇರೆ ಪ್ರಮುಖ ಟೂರ್ನಿಯಿಲ್ಲ. ಹೀಗಾಗಿ ಪ್ರತಿಷ್ಠಿತ ವಿಶ್ವಕಪ್‌ಗೆ ಆಯ್ಕೆ ಗಿಟ್ಟಿಸಿಕೊಳ್ಳಲು ಆಟಗಾರರಿಗೆ ಐಪಿಎಲ್ ಕಡೆಯ ಅವಕಾಶ ಎಂದು ಕ್ರಿಕೆಟ್ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ. ಆದರೆ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ'
ವಿಶ್ವಕಪ್‌ಗೆ ಸಂಬಂಧಿಸಿ ಬಿಸಿಸಿಐ ತಲೆಯಲ್ಲಿ ಈಗಾಗಲೇ ಖಂಡಿತಾ ಒಂದು ತಂಡವಿದೆ. ಅದರ ಜೊತೆಗೆ ವಿರಾಟ್ ಕೊಹ್ಲಿಯ ಆದ್ಯತೆಯೂ ವಿಶ್ವಕಪ್ ತಂಡವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ರೋಹಿತ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ತಂಡ ನಿರ್ಧರಿಸುವಲ್ಲಿ ನಾಯಕನ ಪಾತ್ರ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಿದೆ. ನಾಯಕನ ಆದ್ಯತೆ ಇಲ್ಲಿ ಪ್ರಮುಖವಾಗಿರುತ್ತದೆ. ಅಂದರೆ ಹೆಚ್ಚುವರಿ ಆಟಗಾರರನ್ನು ತಂಡದಲ್ಲಿ ನಿರ್ಧರಿಸುವಲ್ಲಿ ನಾಯಕನ ಪಾತ್ರ ಬಹುಮುಖ್ಯವಾಗುತ್ತದೆ' ಎಂದು 'ಕ್ರಿಕೆಟ್ ಡಾಟ್ ಕಾಮ್' ಜೊತೆ ಮಾತನಾಡುತ್ತ ರೋಹಿತ್ ಹೇಳಿಕೊಂಡರು.
ವಿಶ್ವಕಪ್ ತಂಡಕ್ಕೆ ಐಪಿಎಲ್ ಪ್ರದರ್ಶನ ಪರಿಗಣಿಸುವ ಬಗ್ಗೆಯೂ ರೋಹಿತ್ ಮಾತನಾಡಿದರು. 'ಕಳೆದ ನಾಲ್ಕು ವರ್ಷಗಳಲ್ಲಿ ನಾವು ಸಾಕಷ್ಟು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು, ಟಿ20 ಪಂದ್ಯಗಳನ್ನು ಅಡಿದ್ದೇವೆ. ವಿಶ್ವಕಪ್ ತಂಡ ಪರಿಗಣಿಸಲು ಅವುಗಳ ಪ್ರದರ್ಶನ ಸಾಕಾಗಬಹುದು ಎಂದು ನಾನು ಭಾವಿಸುತ್ತೇನ' ಎಂದು ಶರ್ಮಾ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications