Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರಸಿದ್ಧ್ ಮೊನಚಾದ ಬೌಲಿಂಗ್, ರೋಹಿತ್ ಅದ್ಭುತ ಕ್ಯಾಚ್; ಅಫ್ಘಾನ್ ಬ್ಯಾಟಿಂಗ್‌ಗೆ ಪೆಟ್ಟು ನೀಡಿದ ಜೋಡಿ

ಭಾರತ ಹಾಗೂ ಅಫ್ಘಾನಿಸ್ತಾನ ನಡುವಣ ಪಂದ್ಯ ಚೆನ್ನೈನ ಚೆಪಾಕ್‌ ಅಂಗಳದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಅಫ್ಘಾನ್ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಟೀಮ್ ಇಂಡಿಯಾದ ವೇಗದ ಬೌಲರ್‌ಗಳು ಬಿಗುವಿನ ದಾಳಿ ನಡೆಸಿ ಪ್ರವಾಸಿ ತಂಡದ ಬ್ಯಾಟರ್‌ಗಳನ್ನು ಬಹುವಾಗಿ ಕಾಡಿದರು. ಈ ವೇಳೆ ರೋಹಿತ್ ಶರ್ಮಾ ಹಾಗೂ ಪ್ರಸಿದ್ಧ್ ಕೃಷ್ಣ ಅವರ ಜೋಡಿ ಮಿಂಚಿತು. ಇದಕ್ಕೆ ಕಾರಣ ಏನು ಇಲ್ಲಿದೆ ವರದಿ.

ಪ್ರಸಿದ್ಧ್ ಕೃಷ್ಣ ಅವರಿಗೆ ಮೂರನೇ ಪಂದ್ಯದಲ್ಲಿ ತಂಡಕ್ಕೆ ಮರಳಲು ಅವಕಾಶ ನೀಡಲಾಯಿತು. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ಪ್ರಸಿದ್ಧ್, ನಾಲ್ಕು ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಪಡೆದರು. ಈ ವೇಳೆ ಇವರ ಬೆಂಬಲಕ್ಕೆ ರೋಹಿತ್ ಶರ್ಮಾ ನಿಂತಿದ್ದರು. ರೋಹಿತ್ ಸ್ಲಿಪ್‌ನಲ್ಲಿ ಮೂರು ಕ್ಯಾಚ್‌ಗಳನ್ನು ಪಡೆದು ಬೀಗಿದರು. ಈಗ ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Rohit-Prasidh

ಪ್ರಸಿದ್ಧ್ ಕೃಷ್ಣ ಮೊದಲ ಮೂರು ವಿಕೆಟ್‌ಗಳನ್ನು ಪಟಪಟನೇ ಪಡೆದರು. ಮೊದಲನೆಯದಾಗಿ, ಅವರು ತಮ್ಮ ಸ್ಪೆಲ್‌ನ ಮೊದಲ ಎಸೆತದಲ್ಲೇ ರಹಮಾನುಲ್ಲಾ ಗುರ್ಬಾಜ್ ಅವರನ್ನು ಔಟ್ ಮಾಡಿದರು. ಗುರ್ಬಾಜ್ ಅವರಿಗೆ ಫುಲ್‌ ಲೆಂತ್ ಡಿಲೆವರಿ ಮಾಡಿದ ಪ್ರಸಿದ್ಧ ವಂಚಿಸಿದರು. ಈ ಎಸೆತವನ್ನು ಡ್ರೈವ್ ಮಾಡಲು ಗುರ್ಬಾಜ್‌ ಮುಂದಾಗಿ ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿದರು.

ಪ್ರಸಿದ್ಧ್ ಕೃಷ್ಣ ರಹಮತ್ ಶಾ (5) ಮತ್ತು ಇಬ್ರಾಹಿಂ ಜದ್ರಾನ್ (11) ಅವರಿಗೂ ಖೆಡ್ಡಾ ತೋಡಿದರು. ಈ ಆಟಗಾರರು ಸಹ ಸ್ಲಿಪ್‌ನಲ್ಲಿ ನಿಂತಿದ್ದ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿದರು. ಒಂದೇ ತಂತ್ರವನ್ನು ಬಳಸಿಕೊಂಡು ಫೀಲ್ಡರ್ ಹಾಗೂ ಬ್ಯಾಟರ್‌ ಜೊಡಿ ಅಫ್ಘಾನ್ ಬ್ಯಾಟರ್‌ಗಳನ್ನು ಕಾಡಿತು ಎಂದು ಅಭಿಮಾನಿಗಳು ಚರ್ಚೆ ನಡೆಸಿದ್ದಾರೆ.

ಪ್ರಸಿದ್ಧ್ ಕಮಾಲ್‌

ಕರ್ನಾಟಕದ ಸ್ಟಾರ್ ವೇಗದ ಬೌಲರ್‌ ಪ್ರಸಿದ್ಧ್ ಕೃಷ್ಣ ಮೊನಚಾದ ದಾಳಿ ನಡೆಸಿದರು. ಇವರು 8.2 ಓವರ್‌ಗಳಲ್ಲಿ 2 ಮೇಡನ್ 23 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು. ಈ ಮೂಲಕ ಇದೇ ಮೊದಲ ಬಾರಿಗೆ ಪ್ರಸಿದ್ಧ್ ಕೃಷ್ಣ ಏಕದಿನ ಕ್ರಿಕೆಟ್‌ನಲ್ಲಿ ಐದು ವಿಕೆಟ್‌ ಪಡೆದು ಮಿಂಚಿದರು.

ಭಾರತಕ್ಕೆ 218 ರನ್‌ ಟಾರ್ಗೆಟ್‌

ಅಫ್ಘಾನಿಸ್ತಾನ ತಂಡದ ಪರ ಹಶ್ಮತುಲ್ಲಾ ಶಾಹಿದಿ 131 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ಸಹಾಯದಿಂದ 102 ರನ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅಜ್ಮತುಲ್ಲಾ ಒಮರ್ಜೈ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 50 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಆದರೆ ಅಫ್ಘಾನ್ ತಂಡದ ಟಾಪ್‌ ಆರ್ಡರ್‌ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ 44.2 ಓವರ್‌ಗಳಲ್ಲಿ 218 ರನ್‌ಗೆ ಆಲೌಟ್ ಆಯಿತು. ಭಾರತದ ಪರ ಗುರ್ನಾರ್‌ ಬ್ರಾರ್‌, ಪ್ರಿನ್ಸ್‌ ಯಾದವ್, ಹರ್ಷ್ ದುಬೆ ತಲಾ ಒಂದು ವಿಕೆಟ್‌ ಪಡೆದರು.

Story first published: Saturday, June 20, 2026, 17:38 [IST]
Other articles published on Jun 20, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+