ಟಿ20 ನಾಯಕತ್ವಕ್ಕೆ ವಿರಾಟ್ ವಿದಾಯ: ರೋಹಿತ್ ಹೊರತು ಬೇರೆ ಆಯ್ಕೆ ಇಲ್ಲ ಎನ್ನುತ್ತಿವೆ ಈ ಅಂಕಿಅಂಶಗಳು

ಸಾಕಷ್ಟು ಚರ್ಚೆಗಳು, ಊಹಾಪೋಹಗಳು ಸದ್ದು ಮಾಡಿದ ನಂತರ ಇದೀಗ ಟೀಮ್ ಇಂಡಿಯಾ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವ ಘೋಷಣೆ ಮಾಡಿದ್ದಾರೆ ವಿರಾಟ್ ಕೊಹ್ಲಿ. ಈ ಮೂಲಕ ನಾಯಕತ್ವದ ಚರ್ಚೆಗೆ ಪೂರ್ಣ ವಿರಾಮ ದೊರೆತಿದೆ. ಟಿ20 ವಿಶ್ವಕಪ್‌ನ ಅಂತ್ಯದ ಬಳಿಕ ಭಾರತೀಯ ಕ್ರಿಕೆಟ್‌ನ ಟಿ20 ತಂಡಕ್ಕೆ ಹೊಸ ನಾಯಕನ ನೇಮಕವಾಗಲಿದೆ. ಹೀಗಾಗಿ ಟೀಮ್ ಇಂಡಿಯಾವನ್ನು ಚುಟುಕು ಮಾದರಿಯಲ್ಲಿ ಯಾರು ಮುನ್ನಡೆಸಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಆದರೆ ಭಾರತದ ಟಿ20 ತಂಡಕ್ಕೆ ಮುಂದಿನ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರವೇನು ಕಠಿಣವಿಲ್ಲ. ಭಾರತದ ಸೀಮಿತ ಓವರ್‌ಗಳ ತಂಡದ ಉಪ ನಾಯಕನಾಗಿರುವ ರೋಹಿತ್ ಶರ್ಮಾ ನಾಯಕನಾಗಿ ತಮಡದ ಜವಾಬ್ಧಾರಿ ಹೋರಲು ಸಜ್ಜಾಗಿದ್ದಾರೆ. ನಾಯಕನಾಗಿ ಅನುಭವವಿರುವ ರೋಹಿತ್ ಶರ್ಮಾ ಸೀಮಿತ ಓವರ್‌ಗಳಲ್ಲಿ ಕೊಹ್ಲಿ ಸ್ಥಾನವನ್ನು ತುಂಬಲು ಅತ್ಯುತ್ತಮ ಆಯ್ಕೆ ಎಂಬುದರಲ್ಲಿ ಅನುಮಾನವಿಲ್ಲ.

ಆರ್‌ಸಿಬಿ ಸೇರಿ ಐಪಿಎಲ್ ತಂಡಗಳಿಗೆ ಪ್ರಮುಖ 5 ಸಲಹೆಗಳಿತ್ತ ಆಕಾಶ್ ಚೋಪ್ರಾ!ಆರ್‌ಸಿಬಿ ಸೇರಿ ಐಪಿಎಲ್ ತಂಡಗಳಿಗೆ ಪ್ರಮುಖ 5 ಸಲಹೆಗಳಿತ್ತ ಆಕಾಶ್ ಚೋಪ್ರಾ!

ನಾಯಕನಾಗಿ ರೋಹಿತ್ ಶರ್ಮಾ ಅತ್ಯುತ್ತಮ ದಾಖಲೆ

ನಾಯಕನಾಗಿ ರೋಹಿತ್ ಶರ್ಮಾ ಅತ್ಯುತ್ತಮ ದಾಖಲೆ

ಸೀಮಿತ ಓವರ್‌ಗಳ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿಯೂ ಸಿಕ್ಕ ಅವಕಾಶದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 19 ಪಂದ್ಯಗಳಲ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇದಲ್ಲಿ 15 ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ 4 ಪಂದ್ಯಗಳಲ್ಲಿ ಮಾತ್ರವೇ ಭಾರತ ಸೋತಿದೆ. ಇದು ನಾಯಕನಾಗಿ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಂದಿರುವ ಅತ್ಯುತ್ತಮ ಪ್ರದರ್ಶನವಾಗಿದೆ.

ನಾಯಕನಾಗಿ ಬ್ಯಾಟಿಂಗ್‌ನಲ್ಲಿಯೂ ಮಿಂಚಿರುವ ರೋಹಿತ್

ನಾಯಕನಾಗಿ ಬ್ಯಾಟಿಂಗ್‌ನಲ್ಲಿಯೂ ಮಿಂಚಿರುವ ರೋಹಿತ್

ಇನ್ನು ಟೀಮ್ ಇಂಡಿಯಾ ನಾಯಕನಾಗಿ ಸಿಕ್ಕ ಅವಕಾಶದಲ್ಲಿ ಮಿಂಚಿರುವ ರೋಹಿತ್ ಶರ್ಮಾ ಬ್ಯಾಟಿಂಗ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡಿರುವುದನ್ನು ಗಮನಿಸಬಹುದು. ವಿಶೇಷವೆಂದರೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 4 ಶತಕವನ್ನು ಸಿಡಿಸಿದ ದಾಖಲೆ ಹೊಂದಿದ್ದು ಇದರಲ್ಲಿ 2 ಶತಕಗಳು ನಾಯಕನಾಗಿಯೇ ಬಂದಿದೆ. ರೋಹಿತ್ ಶರ್ಮಾ ನಾಯಕನಾಗಿ ಮುನ್ನಡೆಸಿದ 19 ಪಂದ್ಯಗಳಲ್ಲಿ 2 ಶತಕ ಸೇರಿದಂತೆ ಒಟ್ಟು 7 ಬಾರಿ 50ಕ್ಕೂ ಅಧಿಕ ರನ್‌ಗಳಿಸಿದ್ದಾರೆ. ಈ ಮೂಲಕ ನಾಯಕನಾಗಿ ಬ್ಯಾಟಿಂಗ್‌ನಲ್ಲಿಜಯೂ ರೋಹಿತ್ ದಾಖಲೆ ಅತ್ಯುತ್ತಮವಾಗಿದೆ.

ಬುಮ್ರಾರನ್ನು ಎದುರಿಸೋ ತಾಕತ್ತಿರೋದು RCB ಯ ಈ ಆಟಗಾರನಿಗೆ ಮಾತ್ರ | Oneindia Kannada
ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಅಧಿಪತ್ಯ

ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಅಧಿಪತ್ಯ

ಇನ್ನು ರೋಹಿತ್ ಶರ್ಮಾ ಎಂಥಾ ಅದ್ಭುತ ನಾಯಕ ಎನ್ನಲು ಐಪಿಎಲ್‌ನಲ್ಲಿ ನಾಯಕನಾಗಿ ಹೊಂದಿರುವ ದಾಖಲೆಗಳೆ ಸಾಕ್ಷಿ ಹೇಳುತ್ತವೆ. ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ದಾಖಲೆಯ ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಐಪಿಎಲ್‌ನಲ್ಲಿ ರೋಹಿತ್ ಶರ್ಮಾ 123 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 72 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 47 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. 4 ಪಂದ್ಯಗಳು ಟೈ ಫಲಿತಾಂಶ ಪಡೆದುಕೊಂಡಿದೆ. ಚುಟುಕು ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಸಾಧಿಸುತ್ತಾ ಸಾಗಿದ ಈ ಅದ್ಭುತ ಪ್ರದರ್ಶನಗಳ ಕಾರಣದಿಂದಾಗಿಯೇ ರೋಹಿತ್ ಶರ್ಮಾಗೆ ಭಾರತೀಯ ಟಿ20 ಕ್ರಿಕೆಟ್ ತಂಡದ ನಾಯಕತ್ವ ನೀಡಬೇಕು ಎಂಬ ಕೂಗು ಕಳೆದ ಎರಡು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು. ಅದರಲ್ಲೂ ಕಳೆದ ಬಾರಿಯ ಐಪಿಎಲ್‌ನಲ್ಲಿ ಐದನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದ ಬಳಿಕ ವಿರಾಟ್ ಟಿ20 ನಾಯಕತ್ವದಿಂದ ಕೆಳಗಿಳಿಯಲೇ ಬೇಕು ಎಂಬ ಕೂಗು ಜೋರಾಗಿತ್ತು.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 16, 2021, 19:11 [IST]
Other articles published on Sep 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X