ನ್ಯೂಜಿಲ್ಯಾಂಡ್ ಟಿ20 ಸರಣಿ ಸೋತು ವಿಶ್ವದಾಖಲೆ ಕೈ ಚೆಲ್ಲಿದ ಭಾರತ!


ನವದೆಹಲಿ, ಫೆಬ್ರವರಿ 11: ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ಭಾನುವಾರ (ಫೆಬ್ರವರಿ 10) ನಡೆದ ಭಾರತ vs ನ್ಯೂಜಿಲ್ಯಾಂಡ್ ಮೂರನೇ ಟಿ20 ಪಂದ್ಯದಲ್ಲಿ ಭಾರತ ಕೇವಲ 4 ರನ್‌ಗಳಿಂದ ಸೋತಿತ್ತು. ಈ ಸೋಲಿನೊಂದಿಗೆ ರೋಹಿತ್ ಶರ್ಮಾ ಬಳಗ ವಿಶ್ವದಾಖಲೆಯೊಂದನ್ನೂ ಕೈತಪ್ಪಿಸಿಕೊಂಡಿದೆ.
ನ್ಯೂಜಿಲ್ಯಾಂಡ್ ಟಿ20 ಸರಣಿಯನ್ನು ಭಾರತ 2-1ರಿಂದ ಸೋತಿತು. ಒಂದು ವೇಳೆ ಸರಣಿ ಗೆದ್ದಿದ್ದರೆ ಸಾಲು ಸಾಲಾಗಿ ಅತ್ಯಧಿಕ ಟಿ20 ಸರಣಿಗಳನ್ನು ಗೆದ್ದ ದಾಖಲೆಗಾಗಿ ಭಾರತವೂ ಪಾಕಿಸ್ಥಾನ ತಂಡದೊಂದಿಗೆ ಗುರುತಿಸಿಕೊಳ್ಳುತ್ತಿತ್ತು. ಪಾಕಿಸ್ತಾನ ತಂಡ ಬೆನ್ನುಬೆನ್ನಿಗೆ ಒಟ್ಟು 11 ಟಿ20 ಸರಣಿಗಳನ್ನು ಗೆದ್ದು ಈ ಸಾಧನೆ ಮಾಡಿದೆ.
ಕಳೆದ ಜುಲೈ 2017ರಿಂದ ಭಾರತ ಆಡಿದ ಟಿ20 ಸರಣಿಗಳಲ್ಲಿ ಶ್ರೀಲಂಕಾ ವಿರುದ್ಧ 1-0, ಆಸ್ಟ್ರೇಲಿಯಾ ವಿರುದ್ಧ 1-1ರ ಸಮಬಲ, ನ್ಯೂಜಿಲ್ಯಾಂಡ್ ವಿರುದ್ಧ 2-1ರ ಗೆಲುವು, ಶ್ರೀಲಂಕಾ ವಿರುದ್ಧ ತವರಿನಲ್ಲಿ 3-0ಯ ಗೆಲುವು, ದಕ್ಷಿಣ ಆಫ್ರಿಕಾದಲ್ಲಿ 2-1ರ ಜಯ, ನಿದಹಾಸ ಟ್ರೋಫಿ ಗೆಲುವು, ಐರ್ಲೆಂಡ್ 2-0 ಮತ್ತು ಇಂಗ್ಲೆಂಡ್ 2-1ರ ಮೇಲುಗೈ, ವೆಸ್ಟ್ ಇಂಡೀಸ್ ವೈಟ್ ವಾಷ್ 3-0ಯಿಂದ, ಆಸ್ಟ್ರೇಲಿಯಾ ವಿರುದ್ಧ 1-1ರ ಸಮಬಲ. ಹೀಗೆ ಒಟ್ಟಿನಲ್ಲಿ ಭಾರತ ಯಾವುದೇ ಟಿ20 ಸರಣಿಯಲ್ಲಿ ಸೋತಿರಲಿಲ್ಲ. ಆದರೆ ನ್ಯೂಜಿಲ್ಯಾಂಡ್ ಅಂತಿಮ ಪಂದ್ಯದಲ್ಲಿ ಕಾಲಿನ್ ಮುನ್ರೋ ಅವರ 72 ರನ್ ಭಾರತದ ಪಾಲಿಗೆ ದುಬಾರಿಯೆನಿಸಿತು.
ಪಾಕಿಸ್ತಾನ ತಂಡ ಒಟ್ಟು 11 ಟಿ20 ಸರಣಿಗಳಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದಿತ್ತು. ಆದರೆ ಕಳೆದ ಭಾನುವಾರ (ಫೆಬ್ರವರಿ 3) ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 2-0ಯಿಂದ ಟಿ20 ಸರಣಿ ಕೈಚೆಲ್ಲಿಯಾಗಿತ್ತು. ಸರಣಿಯ ಕಡೆಯ ಪಂದ್ಯ ಪಾಕ್ ಗೆದ್ದಿತಾದರೂ ಸರಣಿ ಉಳಿಸಿಕೊಳ್ಳಲಾಗಿಲ್ಲ. ಅಂದ್ಹಾಗೆ ಪಾಕ್ ತಂಡ 2016ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 1-2ರಿಂದ ಕಡೆಯ ಸಾರಿ ಟಿ20 ಸರಣಿ ಸೋತಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications