ಬೆಂಗಳೂರಿಗೆ ಆಗಮಿಸಿದ ರೋಹಿತ್ ಶರ್ಮಾ ಅಫ್ಘಾನಿಸ್ತಾನ್ ವಿರುದ್ಧ ಆಡೋದು ಪಕ್ಕಾ?
ಅಫ್ಘಾನಿಸ್ತಾನ್ ಭಾರತದ ಪ್ರವಾಸವನ್ನು ಆರಂಭಿಸಿದೆ. ಈ ವೇಳೆ ಭಾರತ ಹಾಗೂ ಅಫ್ಘಾನಿಸ್ತಾನ್ ನಡುವಣ ಏಕೈಕ ಟೆಸ್ಟ್ ಪಂದ್ಯ ನ್ಯೂ ಚಂಡೀಗಢದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಅಫ್ಘಾನಿಸ್ತಾನ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 300 ರನ್ ಗೆಲುವು ದಾಖಲಿಸಿತು. ಈಗ ಎಲ್ಲರ ಕಣ್ಣುಗಳು ಅಫ್ಘಾನಿಸ್ತಾನ್ ವಿರುದ್ಧ ಏಕದಿನ ಸರಣಿಯ ಮೇಲೆ ನೆಟ್ಟಿವೆ. ಈ ಸರಣಿಯಲ್ಲಿ ಭಾರತ ತಂಡದ ಪರ ಸ್ಟಾರ್ ಆಟಗಾರರು ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ.
ಜೂನ್ 12 ರಿಂದ ಪ್ರಾರಂಭವಾಗುವ ಏಕದಿನ ಸರಣಿಗೆ ಎರಡೂ ದೇಶಗಳು ಮೈದಾನಕ್ಕಿಳಿಯಲಿವೆ. ಇದಕ್ಕೂ ಮೊದಲು, ಟೀಮ್ ಇಂಡಿಯಾಕ್ಕೆ ಕೆಲವು ಒಳ್ಳೆಯ ಸುದ್ದಿಗಳು ಹೊರ ಬರುತ್ತಿದೆ. ಗಾಯದ ಕಾರಣದಿಂದಾಗಿ ವಿರಾಟ್ ಕೊಹ್ಲಿ ಅಫ್ಘಾನ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಮೇಲೆ ನೆಟ್ಟಿವೆ. ರೋಹಿತ್ ಶರ್ಮಾ ಅಫ್ಘಾನಿಸ್ತಾನ್ ವಿರುದ್ಧ ಕಣಕ್ಕೆ ಇಳಿಯುತ್ತಾರಾ? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇದಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿಯೊಂದು ಬಂದಿದೆ.

ಕೆಲವು ದಿನಗಳ ಹಿಂದೆ ರೋಹಿತ್ ಶರ್ಮಾ ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹೊರ ಬಂದಿದ್ದವು. ಆದರೆ ಸೋಮವಾರ ಏಕದಿನ ಸರಣಿಗೆ ಮುಂಚೆ ರೋಹಿತ್ ಶರ್ಮಾ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಆಗಮಿಸಿದ್ದಾರೆ. ಇದರರ್ಥ ಅವರು ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಮತ್ತೆ ಆಟಕ್ಕೆ ಮರಳಬಹುದು.
ಅಫ್ಘಾನ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ
ಭಾರತ ಮತ್ತು ಅಫ್ಘಾನಿಸ್ತಾನ್ ನಡುವಿನ ಮೊದಲ ಪಂದ್ಯ ಜೂನ್ 12 ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜೂನ್ 17 ರಂದು ಲಕ್ನೋದಲ್ಲಿ ನಡೆಯಲಿದೆ. ಸರಣಿಯ ಅಂತಿಮ ಪಂದ್ಯ ಜೂನ್ 20 ರಂದು ಚೆನ್ನೈನಲ್ಲಿ ನಡೆಯಲಿದೆ.
ಸಹಾಯಕ ಕೋಚ್ ಹೇಳಿದ್ದೇನು?
ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಫಿಟ್‌ನೆಸ್ ಕುರಿತು ಟೀಮ್ ಇಂಡಿಯಾದ ಸಹಾಯಕ ಕೋಚ್ ಸಿತಾಂಶು ಕೊಟಕ್ ಮಹತ್ವದ ಮಾಹಿತಿ ನೀಡಿದ್ದಾರೆ. ಅವರಿಬ್ಬರೂ ತಮ್ಮ ಫಿಟ್‌ನೆಸ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದಾರೆಯೇ ಇಲ್ಲವೇ ಎಂಬುದು ತಮಗೆ ನಿಖರವಾಗಿ ತಿಳಿದಿಲ್ಲ. ಆದರೂ, "ಅವರಿಬ್ಬರೂ ಫಿಟ್‌ಆಗಿದ್ದಾರೆ" ಎಂಬ ಮಾಹಿತಿ ತಮಗೆ ಸಿಕ್ಕಿದೆ ಎಂದು ಕೊಟಕ್ ತಿಳಿಸಿದ್ದಾರೆ.

ಅಫ್ಘಾನಿಸ್ಯಾನ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ಶುಬ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್ ಮತ್ತು ಹರ್ಷ್ ದುಬೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications