ಕೊಹ್ಲಿಗಿಂತ ರೋಹಿತ್ ಉತ್ತಮ: ಈಗ ಸರಿಯಾದ ಆಟಗಾರನ ಕೈಗೆ ನಾಯಕತ್ವ ಬಂದಿದೆ ಎಂದ ಮಾಜಿ ಕ್ರಿಕೆಟಿಗ!

ರೋಹಿತ್ ಶರ್ಮಾ 34 ವರ್ಷದ ಈ ಕ್ರಿಕೆಟಿಗ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿಹೆಚ್ಚು ಟ್ರೋಫಿ ಗೆದ್ದು ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರನ್ನೇ ಹಿಂದಿಕ್ಕಿರುವಂತಹ ನಾಯಕ. ಹೀಗೆ ಐಪಿಎಲ್‌ನಲ್ಲಿ ಯಶಸ್ವಿಯಾಗಿದ್ದ ರೋಹಿತ್ ಶರ್ಮಾ ಸದ್ಯ ವಿರಾಟ್ ಕೊಹ್ಲಿ ನಂತರ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿಯೂ ಟೀಮ್ ಇಂಡಿಯಾ ನಾಯಕನಾಗಿ ನೇಮಕಗೊಂಡಿದ್ದು ಸಾಲು ಸಾಲು ಗೆಲುವುಗಳನ್ನು ದಾಖಲಿಸಿದ್ದಾರೆ.
ಹೌದು, ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಂತರ ಟಿ ಟ್ವೆಂಟಿ ತಂಡದ ನಾಯಕನಾಗಿ ಆಯ್ಕೆಗೊಂಡ ರೋಹಿತ್ ಶರ್ಮಾ ತದನಂತರ ಭಾರತ ಏಕದಿನ ತಂಡ ಹಾಗೂ ಇತ್ತೀಚಿಗಷ್ಟೆ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾಗಿಯೂ ಕೂಡ ಆಯ್ಕೆಯಾದರು. ಹೀಗೆ ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾಗಿ ಆಯ್ಕೆಯಾದಾಗಿನಿಂದ ಶ್ರೀಲಂಕಾ ಸರಣಿಯವರೆಗೂ ರೋಹಿತ್ ಶರ್ಮಾ ಒಟ್ಟು 14 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, ಎಲ್ಲಾ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ ಜಯ ಸಾಧಿಸಿದೆ. ಮೊದಲಿಗೆ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿ, ನಂತರ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಹಾಗೂ ಏಕದಿನ ಸರಣಿ ಮತ್ತು ಇತ್ತೀಚಿಗಿನ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳಲ್ಲಿ ಕಣಕ್ಕಿಳಿದ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ವೈಟ್‌ವಾಷ್ ಸಾಧನೆ ಮಾಡಿದೆ.
ಇನ್ನು ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಮೂಲಕ ಅಚ್ಚುಕಟ್ಟಾಗಿ ನಾಯಕತ್ವ ನಿಭಾಯಿಸಿದ್ದರ ಕುರಿತು ಸಾಕಷ್ಟು ದೊಡ್ಡಮಟ್ಟದ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಇತರೆ ನಾಯಕರ ಜೊತೆ ರೋಹಿತ್ ಶರ್ಮಾರನ್ನು ಹೋಲಿಕೆ ಕೂಡ ಮಾಡಲಾಗುತ್ತಿದೆ. ಈ ಸಾಲಿಗೆ ಇದೀಗ ಭಾರತದ ಖ್ಯಾತ ಮಾಜಿ ಕ್ರಿಕೆಟಿಗರೊಬ್ಬರೂ ಕೂಡ ಮಾತನಾಡಿದ್ದು, ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯನ್ನೂ ಮೀರಿಸಿ ಉತ್ತಮ ಟೆಸ್ಟ್ ನಾಯಕನಾಗಬಲ್ಲ ಆಟಗಾರ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ.

ಕೊಹ್ಲಿಗಿಂತ ರೋಹಿತ್ ಉತ್ತಮ ನಾಯಕ, ಸರಿಯಾದ ನಾಯಕನ ಕೈಗೆ ನಾಯಕತ್ವ ಬಂದಿದೆ
"ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಉತ್ತಮ ಟೆಸ್ಟ್ ನಾಯಕನಾಗಬಹುದು. ಅವರು ಎಷ್ಟು ಟೆಸ್ಟ್‌ಗಳಿಗೆ ನಾಯಕರಾಗುತ್ತಾರೆ ಎಂಬುದು ತಿಳಿದಿಲ್ಲ, ಆದರೆ ತಂತ್ರಗಾರಿಕೆಯಿಂದ ಅವರು ಅತ್ಯುತ್ತಮ ನಾಯಕರಲ್ಲಿ ಒಬ್ಬರು ಎಂದು ನಾನು ಭಾವಿಸುತ್ತೇನೆ ಮತ್ತು ಅವರು ಪ್ರತಿ ಸರಣಿಯನ್ನು ಹೇಗೆ ವೈಟ್‌ವಾಶ್ ಮಾಡಿದ್ದಾರೆ ಎಂಬುದರ ಫಲಿತಾಂಶಗಳನ್ನು ನಾವು ನೋಡುತ್ತಿದ್ದೇವೆ. ಸರಿಯಾದ ನಾಯಕನ ಕೈಗೆ ನಾಯಕತ್ವ ಬಂದಂತೆ ಭಾಸವಾಗುತ್ತಿದೆ" ಎಂದು ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಹೇಳಿಕೆ ನೀಡಿದ್ದಾರೆ.

ವಿರಾಟ್ ಕೊಹ್ಲಿಯೇ ಟೀಮ್ ಇಂಡಿಯಾದ ಯಶಸ್ವಿ ಟೆಸ್ಟ್ ನಾಯಕ
ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಯಶಸ್ವಿ ನಾಯಕ ಯಾರು ಎಂಬ ಲೆಕ್ಕಾಚಾರವನ್ನು ಗಮನಿಸಿದರೆ ಎಲ್ಲರಿಗೂ ಸಿಗುವ ಉತ್ತರ ವಿರಾಟ್ ಕೊಹ್ಲಿ. ಹೌದು, ಒಟ್ಟು 68 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, ಬರೋಬ್ಬರಿ 40 ಟೆಸ್ಟ್ ಪಂದ್ಯಗಳಲ್ಲಿ ಜಯ ಗಳಿಸಿದ್ದಾರೆ ಹಾಗೂ 17 ಪಂದ್ಯಗಳು ಕೊಹ್ಲಿ ತಪ್ಪಿವೆ ಮತ್ತು 11 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಈ ಮೂಲಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಯಶಸ್ಸು ಸಾಧಿಸಿದ ಭಾರತದ ನಾಯಕ ಎನಿಸಿಕೊಂಡಿದ್ದಾರೆ.

ಕೊಹ್ಲಿ ದಾಖಲೆ ಮುರಿಯುವುದು ರೋಹಿತ್‌ಗೆ ಅಸಾಧ್ಯ
ಇನ್ನು ಮೇಲ್ಕಂಡ ವಿರಾಟ್ ಕೊಹ್ಲಿಯ ಟೆಸ್ಟ್ ದಾಖಲೆಯನ್ನು ರೋಹಿತ್ ಶರ್ಮಾ ಮುರಿಯುವುದು ಅಸಾಧ್ಯ ಎನ್ನಬಹುದು. ಈಗಾಗಲೇ 34 ವಯಸ್ಸಿಗೆ ರೋಹಿತ್ ಶರ್ಮಾ ಕಾಲಿಟ್ಟಿದ್ದು, ವಿರಾಟ್ ಕೊಹ್ಲಿಯಷ್ಟು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ಸಿಗುವುದು ತೀರ ಕಡಿಮೆ ಎನ್ನಬಹುದು. ಆದರೆ ರೋಹಿತ್ ಶರ್ಮಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ವಿರಾಟ್ ಕೊಹ್ಲಿಯಿಂದ ಸಾಧ್ಯವಾಗದ ಸಾಧನೆಯನ್ನು ಮಾಡಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications